ಕೊಡವ ಸಮಾಜದ ತೀರ್ಮಾನ ಎಲ್ಲರೂ ಪರಿಗಣಿಸಬೇಕು: ಚೊಟ್ಟೆಯಾಂಡಮಾಡ ಎಂ. ರಾಜೇಂದ್ರ

KannadaprabhaNewsNetwork |  
Published : Oct 22, 2025, 01:03 AM IST
ಚಿತ್ರ : 21ಎಂಡಿಕೆ3 : ಕೊಡವ ಸಮಾಜದ ಪತ್ತಾಲೋಧಿ 3ನೇ ದಿನದ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಟಿ ಶೆಟ್ಟಿಗೇರಿ ಕೊಡವ ಸಮಾಜದಲ್ಲಿ 9ನೇವರ್ಷದ ಚಂಗ್ರಾಂದಿ ಪತ್ತಾಲೋದಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಒಂದು ದಿನದ ಕಾರ್ಯಕ್ರಮ ನಡೆಸುವುದೇ ಕಷ್ಟಕರ. ಹಾಗಿರುವಾಗ 9 ವರ್ಷಗಳಿಂದ ಹತ್ತು ದಿನಗಳವರೆಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆಸುತ್ತಿರುವುದು ನಿಜವಾಗಿಯೂ ಇಡೀ ಕೊಡವ ಜನಾಂಗ ಮೆಚ್ಚುವಂತಹುದೆಂದು ನಿವೃತ್ತ ಕೆ.ಎ.ಎಸ್. ಅಧಿಕಾರಿ ಚೊಟ್ಟೆಯಾಂಡಮಾಡ ಎಂ. ರಾಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ 9ನೇ ವರ್ಷದ ಚಂಗ್ರಾಂದಿ ಪತ್ತಲೋದಿ ಮೂರನೇ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮದಿಂದ ಕೊಡವರಲ್ಲಿ ಮತ್ತಷ್ಟು ಒಮ್ಮತದ ಮೂಡಲಿದೆ.ಕೊಡವರ ಪದ್ಧತಿ- ಸಂಸ್ಕೃತಿ ಸೇರಿದಂತೆ ಭವಿಷ್ಯದ ಬದುಕಿಗೆ ಕೊಡವ ಸಮಾಜದ ತೀರ್ಮಾನವನ್ನು ಎಲ್ಲರೂ ಪರಿಗಣಿಸುವಂತಾಗಬೇಕು ಎಂದರು.ಮತ್ತೋರ್ವ ಮುಖ್ಯ ಅತಿಥಿ ಪ್ರಗತಿಪರ ಕಾಫಿ ಬೆಳೆಗಾರ ಬಾಚರಣಿಯಂಡ ಪ್ರಕಾಶ್ ಮಾತನಾಡಿ, ನಮ್ಮ ಸಮಯವನ್ನು ಕ್ಲಬ್‌, ಪ್ರವಾಸದ ನೆಪದಲ್ಲಿ ಅನಾವಶ್ಯ ಹಾಳು ಮಾಡಬಾರದು. ಒಂದು ಪ್ರವಾಸದಲ್ಲಿ ಭಾಗವಹಿಸಿದರೆ ಅಲ್ಲಿ ನಮ್ಮ ಬದುಕಿನ ಬಗ್ಗೆ ಹಾಗೂ ಕೊಡವ ಸಂಸ್ಕೃತಿಯ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತಾಗಬೇಕು. ಕೊಡವ ಸಂಸ್ಕೃತಿಯ ಬೆಳವಣಿಗೆಯ ಪರವಾಗಿ ಕೆಲಸ ಮಾಡುವವರು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಾಗಿರಬಾರದು. ಕೊಡವರ ಜನಸಂಖ್ಯೆ ವೃದ್ಧಿಯಾದರೆ ಕೊಡವ ಸಂಸ್ಕೃತಿಯ ಬೆಳವಣಿಗೆ ತನ್ನಿಂತಾನೆ ಆಗಲಿದೆ ಎಂದರು.ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಕ್ಕೆಸೊಡ್ಲೂರ್ ಮಂದತವ್ವ ಸಾಂಸ್ಕೃತಿಕ ಕೂಟದ ಕಲಾವಿದರ "ದೂರತ ಕುಂದ್ " ಎನ್ನುವ ನಾಟಕ ಕೊಡಗಿನ ಹಸಿರು ಪರಿಸರದಲ್ಲಿ ಕೊಡವರ ಸುಂದರ ಬದುಕಿನ ಚಿತ್ರಣ ಎಲ್ಲರ ಮನಸಿಗೆ ಮುಟ್ಟುವಂತಿತ್ತು.ಕಾರ್ಯಕ್ರಮದಲ್ಲಿ ಅತಿಥಿಗಳಾದ ರಾಜೇಂದ್ರ ಹಾಗೂ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭ ಅಡಿಗೆ ಪೈಪೋಟಿ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು, ಈ ಕಾರ್ಯಕ್ರಮಕ್ಕೆ ವಿಜೇತ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು ಹಾಗೂ ಭಾಗವಹಿಸಿದವರಿಗೂ ಸಹ ವಿಶೇಷ ಬಹುಮಾನ ನೀಡಲಾಯಿತುಇಂದು ಸಂಜೆ 6-00 ಗಂಟೆಗೆ ಕುಟ್ಟ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌