ಪ್ರತಿಯೊಬ್ಬರೂ ಆರೋಗ್ಯವನ್ನು ಸ್ನೇಹಿತನಾಗಿಸಬೇಕು: ಭಾಗ್ಯ

KannadaprabhaNewsNetwork | Published : Mar 22, 2025 2:03 AM

ಸಾರಾಂಶ

ಚಿಕ್ಕಮಗಳೂರು, ಆಸ್ತಿ ಹಾಗೂ ಅಂತಸ್ತು ಗಳಿಸುವ ಭರದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಪ್ರತಿಯೊಬ್ಬರೂ ಆರೋಗ್ಯವನ್ನು ಸ್ನೇಹಿತನಾಗಿಸಿದರೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.

ದೇಶಕ್ಕಾಗಿ ಹುತಾತ್ಮರ ಸ್ಮರಣಾರ್ಥ ನಡೆದ ಉಚಿತ ರಕ್ತದಾನ, ನೇತ್ರಾ ತಪಾಸಣಾ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಆಸ್ತಿ ಹಾಗೂ ಅಂತಸ್ತು ಗಳಿಸುವ ಭರದಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಪ್ರತಿಯೊಬ್ಬರೂ ಆರೋಗ್ಯವನ್ನು ಸ್ನೇಹಿತನಾಗಿಸಿದರೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.

ತಾಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷನ್, ಬೆಳವಾಡಿ ಡಾ. ಜಗದೀಶ್ ಕ್ಲೀನಿಕ್, ಹಳೇ ವಿದ್ಯಾರ್ಥಿಗಳ ಸಂಘ, ಹೋಲಿಕ್ರಾಸ್ ಆಸ್ಪತ್ರೆ, ರೆಡ್‌ಕ್ರಾಸ್, ಬ್ರಹ್ಮ ಕುಮಾರೀಸ್, ಸಂವೇದ-2 ಹಾಗೂ ಜೇಸಿಐ ಸಹಯೋಗದಲ್ಲಿ ದೇಶಕ್ಕಾಗಿ ಹುತಾತ್ಮರ ಸ್ಮರಣಾರ್ಥ ಶುಕ್ರವಾರ ಹಮ್ಮಿ ಕೊಂಡಿದ್ಧ ಉಚಿತ ರಕ್ತದಾನ ಹಾಗೂ ನೇತ್ರಾ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶರೀರದ ಅತ್ಯಮೂಲ್ಯ ನೇತ್ರ ಇಡೀ ಪ್ರಪಂಚದ ಬೆಳಕನ್ನು ತೋರುವ ಅಂಗ. ಸಣ್ಣಪುಟ್ಟ ದೋಷಗಳು ಉಂಟಾದರೆ ತಕ್ಷಣವೇ ತಪಾಸಣೆಗೆ ಒಳಗಾಗುವುದು ಮುಖ್ಯ. ಹೆಚ್ಚಾಗಿ ವೃದ್ಧರಲ್ಲಿ ಈ ಸಮಸ್ಯೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸದೇ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ವಿಶ್ವದಲ್ಲಿ ಅಚ್ಚರಿಯದ ಪ್ರಭಾವ ಬೀರಿದರೂ, ಇಂದಿಗೂ ಕೃತಕ ರಕ್ತ ಉತ್ಪಾದಿಸಲು ಸಾಧ್ಯ ವಾಗಿಲ್ಲ. ಮಾನವನ ರಕ್ತದಿಂದ ಮಾತ್ರ ಇನ್ನೋರ್ವ ಮಾನವನಿಗೆ ರಕ್ತ ಕೊಡಬಹುದು. ಹೀಗಾಗಿ ರಕ್ತದಾನ ಕೇವಲ ಇನ್ನೊಂದು ಜೀವಿಸುವ ಜೊತೆಗೆ ಮಾರಕ ರೋಗಗಳನ್ನು ತಡೆಗಟ್ಟಲು ಪೂರಕ ಎಂದು ತಿಳಿಸಿದರು.

ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಅನೀತ್‌ಕುಮಾರ್ ಮಾತನಾಡಿ, ಓರ್ವ ಮನುಷ್ಯನ ರಕ್ತ ಕಣ ಕನಿಷ್ಠ ನಾಲ್ಕು ಮಂದಿ ಪ್ರಾಣ ಉಳಿಸಲಿದೆ. ಹೀಗಾಗಿ ಹೆಚ್ಚೆಚ್ಚು ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಳ್ಳಬೇಕು. ರಕ್ತದಾನಿಗಳ ಶಿಬಿರದಲ್ಲಿ ಗ್ರಾಮದ ಹಲವಾರು ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿರುವುದು ಖುಷಿಯ ಸಂಗತಿ ಎಂದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ, ರಾಷ್ಟ್ರಕ್ಕಾಗಿ ಪ್ರಾಣಗೈದ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ ಗುರುಗಳ ಕ್ರಾಂತಿಕಾರಿ ಹೋರಾಟದ ಸ್ಮರಣಾರ್ಥ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಸಂಗತಿ. ದೇಶದ ಹಲವಾರು ರಾಜ್ಯಗಳಲ್ಲಿ ಈ ಶಿಬಿರ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆ ಸಂಗತಿ ಎಂದು ಹೇಳಿದರು.ಇದೇ ವೇಳೆ ಶಿಬಿರದಲ್ಲಿ ಸುಮಾರು 86 ಮಂದಿ ನೇತ್ರಾ ತಪಾಸಣೆ ನಡೆಸಲಾಯಿತು. ರಕ್ತದಾನ ಶಿಬಿರದಲ್ಲಿ 50 ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳವಾಡಿ ಗ್ರಾ.ಪಂ ಅಧ್ಯಕ್ಷೆ ಕಾವೇರಮ್ಮ ವಹಿಸಿದ್ದರು.ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಪ್ರದೀಪ್, ಬೆಳವಾಡಿ ಶಾಲಾ ಮುಖ್ಯೋಪಾಧ್ಯಯ ಪಾಂಡುರಂಗ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿ.ಮಲ್ಲೇಶ್, ಹೋಲಿಕ್ರಾಸ್ ಆಸ್ಪತ್ರೆ ಸಿಬ್ಬಂದಿ ನವ್ಯ, ವೈದ್ಯ ಡಾ. ಜಗದೀಶ್, ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಪ್ರತಿನಿಧಿ ಆರ್. ಶ್ರೀನಿವಾಸ್, ಜಿಲ್ಲಾ ನಿರ್ದೇಶಕ ವೀಲಿಯಂ ಪೆರೇರಾ, ಹಳೇ ವಿದ್ಯಾರ್ಥಿ ಪ್ರಕಾಶ್ ಉಪಸ್ಥಿತರಿದ್ದರು.

21 ಕೆಸಿಕೆಎಂ 4ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ಧ ಉಚಿತ ರಕ್ತದಾನ ಹಾಗೂ ನೇತ್ರಾ ತಪಾಸಣಾ ಶಿಬಿರವನ್ನು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ ಉದ್ಘಾಟಿಸಿದರು.

Share this article