ಪ್ರತಿಯೊಬ್ಬರೂ 2 ಗಿಡ ನೆಟ್ಟು ಪೋಷಿಸಿ: ಚಿದಾನಂದ ಶ್ರೀ

KannadaprabhaNewsNetwork |  
Published : Jun 08, 2025, 02:38 AM IST
೭ಶಿರಾ೨: ಶಿರಾ ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್  ಸಹಯೋಗದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಮತ್ತು ಗಿಡನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಇಂದು ನಾವೆಲ್ಲರೂ ಸುಖ, ಶಾಂತಿ, ಸಮೃದ್ಧಿಯಿಂದ ಬದುಕಲು ಕಾರಣ ಪ್ರಕೃತಿ ನೀಡಿರುವ ಕೊಡುಗೆಗಳು. ಆ ಪ್ರಕೃತಿಮಾತೆ ಋಣವನ್ನು ತೀರಿಸಲು ಎಲ್ಲರೂ ಎರಡು ಗಿಡಗಳನ್ನಾದರು ನೆಟ್ಟು ಪೋಷಿಸಬೇಕು ಎಂದು ಶ್ರೀ ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಶಿರಾಇಂದು ನಾವೆಲ್ಲರೂ ಸುಖ, ಶಾಂತಿ, ಸಮೃದ್ಧಿಯಿಂದ ಬದುಕಲು ಕಾರಣ ಪ್ರಕೃತಿ ನೀಡಿರುವ ಕೊಡುಗೆಗಳು. ಆ ಪ್ರಕೃತಿಮಾತೆ ಋಣವನ್ನು ತೀರಿಸಲು ಎಲ್ಲರೂ ಎರಡು ಗಿಡಗಳನ್ನಾದರು ನೆಟ್ಟು ಪೋಷಿಸಬೇಕು ಎಂದು ಶ್ರೀ ಚಿದಾನಂದ ಭಾರತಿ ಸ್ವಾಮೀಜಿ ನುಡಿದರು. ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಸಹಯೋಗದಲ್ಲಿ ನಗರದ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಮತ್ತು ಗಿಡನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮಗೆ ಈ ಭೂಮಿ ಹಾಗೂ ಪ್ರಕೃತಿ ಮಾತೆಯು ಎಲ್ಲವನ್ನೂ ನೀಡಿದೆ, ಆದರೆ ನಾವು ದುರಾಸೆ ಮತ್ತು ಸ್ವಾರ್ಥ ಸಾಧನೆಯಿಂದ ಹಾಳುಮಾಡಿ, ಪ್ರಕೃತಿಯ ವಿರುದ್ಧ ಸಾಗುತ್ತಿದ್ದೇವೆ. ನಮ್ಮ ತಪ್ಪುಗಳನ್ನು ಅರಿತುಕೊಂಡು ಪ್ರತಿಯೊಬ್ಬ ಪ್ರಜೆಯೂ ಕನಿಷ್ಠ ಎರಡು ಗಿಡಗಳನ್ನು ನೆಟ್ಟರೆ ಸಾಕು ನಮಗೆ ಪುಣ್ಯ ದೊರಕುತ್ತದೆ ಎಂದರು.ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪ ಮಾಡಬೇಕು. ಮಾನವ ಕುಲದಲ್ಲಿ ಯಾವುದೇ ಪ್ರಾಣಿ-ಪಕ್ಷಿ ಮತ್ತು ಮಾನವರು ವಾಸ ಮಾಡಲು ಬಹು ಮುಖ್ಯವಾಗಿ ಗಾಳಿ ಅತ್ಯವಶ್ಯಕ. ಹಾಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಗಾಳಿ ಬರಬೇಕು ಅದಕ್ಕಾಗಿ ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಉತ್ತಮ ಗಾಳಿ ಪಡೆಯಲು ಸಾಧ್ಯವಾಗುತ್ತದೆ. ನಾವೆಲ್ಲರೂ ಒಂದೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಸಹಕರಿಸೋಣ ಎಂದರು.ಉಪನ್ಯಾಸಕ ಈಶ್ವರಚಂದ್ರ ಮೆಣಸಗಿ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ಕೇವಲ ಅರಣ್ಯ ಇಲಾಖೆಗೆ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮರಗಳನ್ನ ಕಡಿಯುವ ಮೂಲಕ ಗಿಡಮರಗಳನ್ನು ನಾಶ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ದುರಂತ. ಎಲ್ಲರೂ ತಮ್ಮ ತಮ್ಮ ಜಮೀನುಗಳಲ್ಲೂ ಮರ ಗಿಡಗಳನ್ನು ಬೆಳೆಸಿ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರತ್ನ, ಪ್ರಾಣೇಶ್, ಬಸವರಾಜ್, ನೀಲಾ, ಸುಮಂಗಳ, ಸರಕಾರಿ ಹಿರಿಯ ಬಾಲಕಿಯರ ಪ್ರೌಢ ಶಾಲೆ ಕೃಷಿ ಮೇಲ್ವಿಚಾರಕ ವೆಂಕಟೇಶ್, ಮೀನಾ, ಸೇವಾಪ್ರತಿನಿಧಿ ನಾಗಮಣಿ ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ