ಪ್ರತಿಯೊಬ್ಬರು ಒಮ್ಮೆಯಾದರೂ ಭಗವದ್ಗೀತೆ ಓದಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

KannadaprabhaNewsNetwork |  
Published : Aug 27, 2024, 01:36 AM IST
26ಕೆಎಂಎನ್ ಡಿ11 | Kannada Prabha

ಸಾರಾಂಶ

ಭಗವದ್ಗೀತೆ ಓದುವುದರಿಂದ ಪ್ರತಿದಿನ ನಮ್ಮ ಮುಂದೆ ಇರುವ ಸವಾಲುಗಳನ್ನು ಪರಿಹರಿಸಿಕೊಳ್ಳಬಹುದು. ನೈತಿಕವಾಗಿ ಯಾವ ರೀತಿ ಬದುಕು ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಜೊತೆಗೆ ಮನಸ್ಸು ಕೂಡ ಹಗುರವಾಗುತ್ತದೆ. ಮಕ್ಕಳಿಗೆ ಭಗವದ್ಗೀತೆ ಓದುವ ಅಭ್ಯಾಸ ಮಾಡಬೇಕು. ಭಗವದ್ಗೀತೆಯಲ್ಲಿರುವ ಒಳಿತನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ಬದುಕಿನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಭಗವದ್ಗೀತೆಯನ್ನು ಓದಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ವಿದ್ಯಾನಗರದ ವಿ.ವಿ ರಸ್ತೆ ಶ್ರೀಶಾರದ ಚಂದ್ರಮೌಳೇಶ್ವರ ಪ್ರಾರ್ಥನಾ ಮಂದಿರದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ, ಭಗವದ್ಗೀತೆಯನ್ನು ಒಂದೇ ದಿನ ಪೂರ್ಣವಾಗಿ ಓದಲು ಸಾಧ್ಯವಿಲ್ಲ‌. ಹೀಗಾಗಿ, ಪ್ರತಿನಿತ್ಯ ಒಂದು ಪುಟ ಭಗವದ್ಗೀತೆಯನ್ನು ಓದುವ ಅಭ್ಯಾಸ ಮಾಡಬೇಕು ಎಂದರು.

ಭಗವದ್ಗೀತೆ ಓದುವುದರಿಂದ ಪ್ರತಿದಿನ ನಮ್ಮ ಮುಂದೆ ಇರುವ ಸವಾಲುಗಳನ್ನು ಪರಿಹರಿಸಿಕೊಳ್ಳಬಹುದು. ನೈತಿಕವಾಗಿ ಯಾವ ರೀತಿ ಬದುಕು ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಜೊತೆಗೆ ಮನಸ್ಸು ಕೂಡ ಹಗುರವಾಗುತ್ತದೆ. ಮಕ್ಕಳಿಗೆ ಭಗವದ್ಗೀತೆ ಓದುವ ಅಭ್ಯಾಸ ಮಾಡಬೇಕು. ಭಗವದ್ಗೀತೆಯಲ್ಲಿರುವ ಒಳಿತನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಬಿ.ವಿ ನಂದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ವೇಷ ಸ್ಪರ್ಧೆ

ಭಾರತೀನಗರಮೆಣಸಗೆರೆ ಗ್ರಾಮದ ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಶ್ರೀಕೃಷ್ಣ ವೇಷಸ್ಪರ್ಧೆ ನಡೆಯಿತು.

ಸಂಸ್ಥೆ ಸಂಸ್ಥಾಪಕಿ ಶಿವಮ್ಮ ಶಿವಕುಮಾರ್ ಮಾತನಾಡಿ, ಶ್ರೀಕೃಷ್ಣ ವೇಷ ಸ್ಪರ್ಧೆ ಇತಿಹಾಸವನ್ನು ನೆನಪಿಸುವ ಒಂದು ಉತ್ತಮ ಕಾರ್ಯಕ್ರಮವಾಗಲಿ. ಮಕ್ಕಳಲ್ಲಿ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ವೇಷಭೂಷಣವನ್ನು ಹಾಕಿಸಿದರೆ ಅವರಲ್ಲಿ ಚಿಂತಿಸುವ ಮನೋಜ್ಞಾನ ಹೆಚ್ಚಾಗಲಿದೆ ಎಂದರು.ಕಾರ್ಯಕ್ರಮದಲ್ಲಿ 150 ಮಕ್ಕಳು ಶ್ರೀಕೃಷ್ಣ ವೇಷಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈವೇಳೆ ಕೃಷ್ಣರಾಧೆ ಉಡುಪು ತೊಟ್ಟಿದ್ದ ಮಕ್ಕಳಿಂದ ನೃತ್ಯ ಪ್ರದರ್ಶನ ಜರುಗಿತು.

ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಹಾಗೂ ಒಕ್ಕೂಟದ ಅಧ್ಯಕ್ಷೆ ಮೆಣಸಗೆರೆ ಧರಣಿ, ಗ್ರಾಪಂ ಮಾಜಿ ಸದಸ್ಯರಾದ ಅನುಪಮ ಸತೀಶ್, ಸವಿತಚಂದ್ರೇಶ್ ತೀರ್ಪುಗಾರರಾಗಿದ್ದರು.ವೇದಿಕೆಯಲ್ಲಿ ಶಾಲೆ ಟ್ರಸ್ಟಿ ತೇಜಶ್ವಿನಿ ತಿಪ್ಪೀರೇಗೌಡ, ಮುಖ್ಯಸ್ಥೆ ಸೌಮ್ಯರಾಜೇಶ್, ಮುಖ್ಯಶಿಕ್ಷಕಿ ಶೃತಿ, ಶಿಕ್ಷಕರಾದ ಮಂಜುಳಾ, ಯೋಗಾನಂದ್, ಮನು, ರಶ್ಮಿ, ಸುನೀತ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ