ಕನ್ನಡಪ್ರಭ ವಾರ್ತೆ ರಾಯಚೂರು
ಸುಕ್ಷೇತ್ರ ಮಂತ್ರಾಲಯದ ಶ್ರೀರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 355ನೇ ಉತ್ತರಾರಾಧನೆ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಜರುಗಿದ ಮಹಾರಥೋತ್ಸವಕ್ಕೆ ಚಾಲನೆ ನೀಡಿ ನೆರೆದಿದ್ದ ಭಕ್ತ ಸಮೋಹವನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಇಡೀ ಜಗತ್ತಿನಲ್ಲಿಯೇ ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಮತ್ತೊಂದಿಲ್ಲ ಎಂಬುವುದನ್ನು ಈ ಸಂದರ್ಭದಲ್ಲಿ ಘೋಷಿಸುತ್ತೇವೆ, ಭಾರತ ದೇಶ ಅತ್ಯಂತ ಸಂಪದ್ಬರಿತವಾದುದ್ದಾಗಿದ್ದು, ವಿದ್ಯೆ, ಆರ್ಥಿಕ, ಸಾಮಾಜಿಕ, ಭೌಗೋಳಿಕ ಅದೇ ರೀತಿ ರಾಜಕೀಯವಾಗಿಯೂ ಸಹ ಅತ್ಯಂತ ಸಮರ್ಥದೇಶವಾಗಿದೆ. ಎಲ್ಲರೂ ದೇಶ ಪ್ರೇಮವನ್ನು ಬೆಳೆಸಿಕೊಂಡು ಉಳಿಸಿ ಕೊಳ್ಳಬೇಕು, ನಾವೆಲ್ಲರೂ ಕೂಡ ಭಾರತ ಮಾತೆಯ ಮಕ್ಕಳು ಇದೇ ನಮ್ಮ ಸಂದೇಶವಾಗಿದೆ ಎಂದರು.
ತೀವ್ರ ಕ್ಷಾಮ; ಕ್ಷೇಮಕ್ಕಾಗಿ ಪ್ರಾರ್ಥನೆ: ದೇಶದಲ್ಲಿ ಮಳೆಯ ಅಭಾವದಿಂದಾಗಿ ಬರಗಾಲ ಪರಿಸ್ಥಿತಿ ನಿರ್ಮಾಣಗೊಂಡಿದೆ ಇಂತಹ ತೀವ್ರ ಕ್ಷಾಮವು ದೂರವಾಗಲಿ, ಸಕಾಲದಲ್ಲಿ ಮಳೆಗಳಾಗಿ ರೈತಾಪಿ ಜನಾಂಗಕ್ಕೆ ಕ್ಷೇಮವಾಗಲಿ, ದೇಶದ ಬೆನ್ನೆಲುಬಿನಂತಹ ರೈತಾಪಿ ವರ್ಗವು ಬರದಿಂದ ನಿರಾಶರಾಗದೇ ಆತ್ಮಸ್ಥೈರ್ಯವನ್ನು ಹೊಂದಲಿ ಅವರಿಗೆ ರಾಯರ, ಭಗವಂತನ ಅನುಗ್ರಹ ದೊರೆಯಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.ಭಕ್ತರ ಸೌಕರ್ಯಗಳಿಗಾಗಿ 355 ಕೋಟಿ ರು. ಠೇವಣಿ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 335ನೇ ಆರಾಧನಾ ಮಹೋತ್ಸವದ ನೆನಪಿಗಾಗಿ 355ಕೋಟಿ ರು. ಹಣವನ್ನು ಠೇವಣಿ (ಎಫ್‌ಡಿ) ಹಿಡಲಾ ಗುವುದು. ಈ ಠೇವಣಿ ಮೊತ್ತದಿಂದ ಬರುವ ಬಡ್ಡಿ ಹಣದಿಂದ ಭಕ್ತರ ಮೂಲಭೂತ ಸೌಕರ್ಯ ಹಾಗೂ ಸಿಬ್ಬಂದಿಗಳಿಗೆ ನೆರವಿಗಾಗಿ ವೇಯಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು.