ಕನ್ನಡಪ್ರಭ ವಾರ್ತೆ ಸಿಂಧನೂರು
ಬ್ರಾಹ್ಮಣರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದ ರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ಮುಖಂಡರಾದ ವೆಂಕಣ್ಣಾಚಾರ್ ಜೋಷಿ ದೋಟಿಹಾಳ, ಎಂ.ಕೆ. ಗೌರಕರ್, ಮನೋಹರ ರಾವ್ ಕುಲಕರ್ಣಿ, ಹನುಮಂತ ಆಚಾರ್ಯ ಮಸ್ಕಿ, ವೆಂಕಟರಾವ್ ಚೆನ್ನಳ್ಳಿ, ಪ್ರಾಣೇಶ ಸಿದ್ರಾಂಪುರ, ಸತ್ಯನಾರಾಯಣರಾವ್, ರಾಘವೇಂದ್ರರಾವ್ ಚೆನ್ನಳ್ಳಿ, ಗುಂಡುರಾವ್, ಭೀಮಸೇನ ಆಚಾರ್ಯ ಪುರೋಹಿತ, ವೆಂಕಟೇಶ ಸಿದ್ದಾಂಪುರ, ದಿನೇಶ್ ಹೆಬ್ಬಾಳ ಭಾಗವಹಿಸಿದ್ದರು.
ನಗರದ ಯಲ್ಲಮ್ಮ ದೇವಿ ದೇವಸ್ಥಾನದ ಬಳಿ ಇರುವ ರಾಘವೇಂದ್ರ ಸ್ವಾಮಿಗಳ ಮಠ ಹಾಗೂ ತುರ್ವಿಹಾಳ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಯೂ ಅದ್ಧೂರಿಯಿಂದ ರಥೋತ್ಸವಗಳು ನಡೆದವು. ಪ್ರತಿನಿತ್ಯದಂತೆ ಎಲ್ಲ ಕಡೆ ಬೆಳಿಗ್ಗೆ ಸುಪ್ರಭಾತ ಸೇವೆ, ಗುರು ರಾಯರ ಉತ್ಸವ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸ್ವಸ್ತಿ ವಾಚನ ಹಾಗೂ ಮಹಾಮಂಗಳಾರತಿ ನಡೆದವು. ರಾಯರ ಮಠದ ವಿಚಾರಣಾಕರ್ತ ರಾಘವೇಂದ್ರ ರಾವ್ ಕುಲಕರ್ಣಿ, ಅರ್ಚಕ ನವೀನ ಆಚಾರ್, ಗುರುರಾಜ ಅಲದಾಳ, ನಾರಾಯಣರಾವ್ ಹೆಬ್ಬಾಳ್, ಕೃಷ್ಣ ಮಲಕಸಮುದ್ರ, ವಾಸುದೇವ ಆಚಾರ್ ಉಪ್ಪಳ, ಅಜಯ್ ಕಾನಿಹಾಳ ಭಾಗವಹಿಸಿದ್ದರು.ತುರ್ವಿಹಾಳ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ರಥೋತ್ಸವದಲ್ಲಿ ಶೇಷಗಿರಿ ರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಗುರುರಾಜ್ ಕುಲಕರ್ಣಿ ಶ್ರೀಧರ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ ದಢೇಸುಗೂರು ಭಾಗವಹಿಸಿದ್ದರು.
ಶ್ರೀಮಠದಲ್ಲಿ ಬೆಳಗಿನ ಜಾವ ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ, ವಿವಿಧ ಹೂವಿನ ಅಲಂಕಾರ ಸೇವೆ, ಮಾಡಲಾಗಿತ್ತು.