ಹಾನಗಲ್ಲ: ಸರ್ಕಾರದ ಮಟ್ಟದಲ್ಲಿ ಮಾಜಿ ಸೈನಿಕರ ಸೌಲಭ್ಯಗಳನ್ನು ಪಡೆಯಬೇಕಾದರೆ ಅದು ಸಂಘಟನೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಟಿ.ಎಸ್.ಪಾಟೀಲ ತಿಳಿಸಿದರು. ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ನಡೆದ ತಾಲೂಕು ಮಾಜಿ ಸೈನಿಕರ ನೂತನ ಸಂಘದ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ದೇಶಕ್ಕಾಗಿ ತಮ್ನ ಕುಟುಂಬವನ್ನೂ ಲೆಕ್ಕಿಸದೇ ದೇಶಕ್ಕಾಗಿ ಪ್ರಾಣವನ್ನೆ ಮುಡುಪಾಗಿಡುತ್ತಿರುವ ನಮ್ಮ ಸೈನಿಕರಗೆ ನಾವು ಎಷ್ಟು ಹೊಗಳಿದರು ಸಾಲದು. ಇಂದು ನಾವು ನಮ್ಮ ಕುಟುಂಬದ ಜೊತೆಗೆ ನೆಮ್ಮದಿಯಾಗಿ ಜೀವಿಸುತ್ತಿದೇವೆ ಎಂದರೆ ಅದು ನಮ್ಮ ದೇಶ ಕಾಯುವ ಸೈನಿಕನಿಂದ ಎಂದರು.
ಕಾರ‍್ಯಕ್ರಮದಲ್ಲಿ ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹಾಗೂ ರಾಣಿಬೆನ್ನೂರ ಹುಣಸಿಕಟ್ಟಿ ದಯಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಪಿಎಸ್‌ಐ ಸಂಪತ್ ಆನೆಕಿವಿ ಕಾರ‍್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ರೇವಣಪ್ಪ ಕೊಪ್ಪದ ವಹಿಸಿದ್ದರು.ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ, ಜೆಡಿಎಸ್ ಮುಖಂಡ ಆರ್.ಬಿ. ಪಾಟೀಲ, ರೋಶನಿ ಸಮಾಜ ಸೇವಕಿ ಅನಿತಾ ಡಿಸೋಜಾ, ಶಿವಲಿಂಗಪ್ಪ ತಲ್ಲೂರ, ಉದ್ಯಮಿ ಗೌಸ ಅಹ್ಮದ್ ಕಾಲೇನವರ, ಗುತ್ತಿಗೆದಾರ ಗುರುಸಿದ್ದಪ್ಪ ಹಿರೇಮಠ, ಡಾ. ಸುನೀಲ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಜಿಲ್ಲಾ ರೈತ ಸಂಘದ ಮಲ್ಲಿಕರ‍್ಜುನ ಬಳ್ಳಾರಿ, ಮರಿಗೌಡ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.ಕಾರ‍್ಯಕ್ರಮದಲ್ಲಿ ರಾಷ್ಟ್ರ ಮಟ್ಟದಲ್ಲಿ ಲಾಂಗ್ ಜಂಪ್ ಪ್ರತಿನಿಧಿಸಿದ್ದ ಎಸ್.ರಾಜೇಶ್ ಹಾಗೂ ಅಕ್ಕಿ ಆಲೂರಿನಲ್ಲಿ ಶವ ಪರೀಕ್ಷೆ ಮತ್ತು ಅಂತ್ಯಕ್ರಿಯೆ ಮಾಡುವ ಅಪರೂಪದ ತಂದೆ ಮಗ ಶಿವರಾಯಪ್ಪ ಮತ್ತು ಗುತ್ತೇಪ್ಪ ಹಾನಗಲ್ ಅವರಿಗೆ ಮಾಜಿ ಸೈನಿಕರಿಗೆ ಸನ್ಮಾನಿಸಿ ಗೌರವಿಸಿದರು.ಜಯಶ್ರೀ ಮಡಿವಾಳರ ನಿರೂಪಿಸಿದರು. ಪ್ರಕಾಶ ಭಾಗಣ್ಣನವರ ಸ್ವಾಗತಿಸಿದರು. ಬಾಹುಬಲಿ ಉಪಾಧ್ಯ ವಂದಿಸಿದರು.