ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಹುತಾತ್ಮರಾದ ದೇಶಪ್ರೇಮಿಗಳ ಸ್ಮರಣಾರ್ಥ, ಬಲಿದಾನಗೈದವರ ಹೆಸರುಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವುದಕೋಸ್ಕರ, ಧನ್ಯೋಸ್ಮಿ ಭರತಭೂಮಿ ಸಂಘಟನೆ ಅಮರ ಶಿಲಾಕ್ಷರ ಶಿಲೆಗಳನ್ನು ಲೋಕಾರ್ಪಣೆಗೊಳಿಸಿರುವ ಕಾರ್ಯ ಬಹು ಮಹತ್ತರವಾದುದ್ದಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಎಚ್. ಅಭಿಪ್ರಾಯಪಟ್ಟರು.
ಕುಮಾರಪಟ್ಟಣ: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಹುತಾತ್ಮರಾದ ದೇಶಪ್ರೇಮಿಗಳ ಸ್ಮರಣಾರ್ಥ, ಬಲಿದಾನಗೈದವರ ಹೆಸರುಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವುದಕೋಸ್ಕರ, ಧನ್ಯೋಸ್ಮಿ ಭರತಭೂಮಿ ಸಂಘಟನೆ ಅಮರ ಶಿಲಾಕ್ಷರ ಶಿಲೆಗಳನ್ನು ಲೋಕಾರ್ಪಣೆಗೊಳಿಸಿರುವ ಕಾರ್ಯ ಬಹು ಮಹತ್ತರವಾದುದ್ದಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಎಚ್. ಅಭಿಪ್ರಾಯಪಟ್ಟರು.
೭೭ನೇ ಗಣರಾಜ್ಯೋತ್ಸವದ ನಿಮಿತ್ತ ಧನ್ಯೋಸ್ಮಿ ಭರತಭೂಮಿ ಸಂಘಟನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ವತಿಯಿಂದ, ಕೋಡಿಯಾಲ ಗ್ರಾಮದ ಭಗತ್‌ಸಿಂಗ ವೃತ್ತದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಅಮರ ಶಿಲಾಕ್ಷರಗಳನ್ನು ಲೋಕಾರ್ಪಣೆಗೊಳಿಸಿದ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ದೇಶ ಪ್ರೇಮಿಗಳು ಬ್ರಿಟಿಷರ ವಿರುದ್ಧ ಹೋರಾಡಿ ಅಮರರಾಗಿದ್ದಾರೆ. ಅವರೆಲ್ಲರ ತ್ಯಾಗ, ಬಲಿದಾನ ಫಲವಾಗಿ ಇಂದು ಭಾರತ ಸ್ವಾತಂತ್ರ್ಯಗೊಂಡಿದೆ.ಅಂಥಹ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ನಿತ್ಯ ಸ್ಮರಿಸುವುದಕೋಸ್ಕರ, ದೇಶ ಭಕ್ತರ ಹೆಸರುಗಳನ್ನು ಸಂಗ್ರಹಿಸಿ, ಅಮರ ಶಿಲಾಕ್ಷರ ಶಿಲೆಗಳನ್ನು ಸಿದ್ಧಪಡಿಸಿ ಇಂದು ಲೋಕಾರ್ಪಣೆಗೊಳಿಸುವ ಮೂಲಕ, ಧನ್ಯೋಸ್ಮಿ ಸಂಘಟನೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜೆ. ಮೆಹಂದಳೆ ತಮ್ಮಜೀವನ ಸಾರ್ಥಕಪಡಿಸಿಕೊಂಡಿದೆ. ಇದೊಂದು ಐತಿಹಾಸಿಕ ಕಾರ್ಯವೆಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿಗಳು, ಧನ್ಯೋಸ್ಮಿ ಭರತ ಭೂಮಿ ತಂಡದ ಹತ್ತು ವರ್ಷಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಗೊಳಿಸಿ, ಅಮರ ಶಿಲೆಗಳಿಗೆ ಪುಷ್ಪಾರ್ಚನೆಸಲ್ಲಿಸಿ ಶುಭ ಹಾರೈಸಿದರು.ಕೊಡಿಯಾಲ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾ ಮಂಜುನಾಥ ಕರೂರು, ಉಪಾಧ್ಯಕ್ಷ ಬಸವಣ್ಣೆಪ್ಪ ಹೆಗ್ಗಪ್ಪನವರ, ಮಾಜಿ ಅಧ್ಯಕ್ಷರಾದ ದಿನೇಶ ಹಳ್ಳಳ್ಳೆಪ್ಪನವರ, ಚಂದ್ರಕಲಾ ಹೆಗ್ಗಪ್ಪನವರ, ಪತ್ರಕರ್ತೆ ಡಿ.ಎನ್. ಶಾಂಭವಿ, ಕೋಡಿಯಾಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ದೇವರಾಜ. ಜಿ., ಅಮೃತ ವರ್ಷಿಣಿ ವಿದ್ಯಾಲಯದ ಚೇರಮನ್ ಪಿ.ಕೆ. ಪ್ರಕಾಶರಾವ್ ಇದ್ದರು.