ಕನ್ನಡಪ್ರಭ ವಾರ್ತೆ ಆನವಟ್ಟಿ
ಕಾಲೇಜಿನಲ್ಲಿ 260ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಇದ್ದು, 29 ಉಪನ್ಯಾಸಕರು ಬೇಕಾಗಿದ್ದು, ಖಾಯಂ ಇರುವ 8 ಉಪನ್ಯಾಸಕರು ಮಾತ್ರ ಪಾಠ-ಪ್ರಚವನ ಮಾಡುತ್ತಿದ್ದಾರೆ. ಇನ್ನೂ ಉಳಿದ 21 ಉಪನ್ಯಾಸಕ ಹುದ್ದೆಗಳನ್ನು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ. ಸದ್ಯ ಯುಜಿಸಿಯ ಕೆಲವು ಗೊಂದಲಗಳಿಂದ ಅತಿಥಿಗಳ ನೇಮಕಾತಿ ಆಗುತ್ತಿಲ್ಲ ಎಂದು ದೂರಿದರು.
ಯುಜಿಸಿ ನಿಯಮಾವಳಿಯನ್ನು ಮುಂದಿಟ್ಟುಕೊಂಡು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೊಂದೆಡೆ ಉಪನ್ಯಾಸಕರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ತಕ್ಷಣ ಕಾಲೇಜು ಶಿಕ್ಷಣ ಇಲಾಖೆ ಎದುರಾಗಿರುವ ಗೊಂದಲ ಪರಿಹರಿಸಬೇಕು ಅಥವಾ ಪರ್ಯಾಯ ಮಾರ್ಗ ಹುಡುಕಬೇಕು ಎಂದು ಒತ್ತಾಯಿಸಿದರು.ವಿದ್ಯಾರ್ಥಿಗಳಾದ ಪಿ. ಹೇಮಂತ್, ಎಂ. ಮನು, ಎಸ್.ಪೃಥ್ವಿ, ಕೆ. ಆಕಾಶ್, ಕಾರ್ತೀಕ್, ಆರ್.ಎಚ್. ಲಿಂಗರಾಜ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಉಪ ತಹಸೀಲ್ದಾರ್ ಶಿವಪ್ರಸಾದ್ ಅವರು ಪದವಿ ವಿದ್ಯಾರ್ಥಿಗಳಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಪದವಿ ವಿದ್ಯಾರ್ಥಿಗಳ ಸಮಸ್ಯೆಯನ್ನು ತಹಸೀಲ್ದಾರ್ ಅವರ ಗಮನಕ್ಕೆ ತರುತ್ತೇನೆ ಮತ್ತು ನಿಮ್ಮ ಉಪನ್ಯಾಸಕರ ಬೇಡಿಕೆ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ತಲುಪಿಸುತ್ತೇನೆ ಎಂದರು.