ಕನ್ನಡಪ್ರಭ ವಾರ್ತೆ ಬಾಗಲಕೋಟೆವೈದ್ಯಕೀಯ ವಿಜ್ಞಾನದ ವಿಶೇಷ ಸೌಲಭ್ಯಗಳಾದ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಯದ ಆವರಣದಲ್ಲಿ ₹200 ಕೋಟಿ ರೂಪಾಯಿಗಳ ವೆಚ್ಚದಲ್ಲಿ 3.5 ಲಕ್ಷ ಚದರಡಿಗಳ ವಿಸ್ತೀರ್ಣದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ವಿಜ್ಞಾನದ ವಿಶೇಷ ಸೌಲಭ್ಯಗಳಾದ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಯದ ಆವರಣದಲ್ಲಿ ₹200 ಕೋಟಿ ರೂಪಾಯಿಗಳ ವೆಚ್ಚದಲ್ಲಿ 3.5 ಲಕ್ಷ ಚದರಡಿಗಳ ವಿಸ್ತೀರ್ಣದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ಕ್ಯಾಥ್‌ಲ್ಯಾಬ್ ಸೌಲಭ್ಯವಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ವಿಭಾಗಗಳು, ವೈಶಿಷ್ಟ್ಯಗಳು:
ಮೂತ್ರಕೋಶ ಚಿಕಿತ್ಸಾ ವಿಭಾಗ, ಮೂತ್ರಪಿಂಡ ಚಿಕಿತ್ಸಾ ವಿಭಾಗ, ನರರೋಗ ಚಿಕಿತ್ಸಾ ವಿಭಾಗ, ಅಂತ: ಸ್ರಾವಶಾಸ್ತ್ರ ವಿಭಾಗ (ಎಂಡೋಕ್ರೈನಾಲಜಿ), ನರಶಸ್ತ್ರಚಿಕಿತ್ಸಾ ವಿಭಾಗ, ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಹೃದಯರೋಗ ಚಿಕಿತ್ಸಾ ವಿಭಾಗ, ಗ್ಯಾಸ್ಟ್ರೋಎಂಟರಾಲಜಿ ವಿಭಾಗ, ಶ್ವಾಸಕೋಶ ಶಸ್ತ್ರಚಿಕಿತ್ಸಾ ವಿಭಾಗ, ಪ್ಲಾಸ್ಟಿಕ್ ಸರ್ಜರಿ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗ.
ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯಗಳು:
ಡಯಾಲಸಿಸ್, ಮೂತ್ರನಾಳದ ಸೋಂಕು, ಕಿಡ್ನಿವೈಫಲ್ಯಕ್ಕೆ ಚಿಕಿತ್ಸೆ, ಫಾರ್ಶ್ವವಾಯು, ಮೂರ್ಛೆರೋಗ ಮತ್ತು ನರಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ, ಮಧುಮೇಹ, ಥೈರಾಯ್ಡ್, ಚಯಾಪಚಯ, ಸ್ಥೂಲಕಾಯ ಮತ್ತು ಹಾರ್ಮೋನ್ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ, ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆ, ಲಿವರ್, ಗ್ಯಾಸ್ಟ್ರಿಕ್, ಅಲ್ಸರ್ ಮತ್ತು ವಿವಿಧ ಜೀರ್ಣಾಂಗ ಕಾಯಿಲೆಗಳಿಗೆ ಚಿಕಿತ್ಸೆ, ಹೃದಯರೋಗ ಚಿಕಿತ್ಸೆಗಾಗಿ ಇಸಿಜಿ, ಇಕೋ, ಎಂಜಿಯೋಪ್ಲಾಸ್ಟಿ, ಎಂಜಿಯೋಗ್ರಾಫಿ, ಪೇಸ್ ಮೇಕರ್ ಮತ್ತು ತೆರೆದ ಹೃದಯದ ಶಸ್ತ್ರಚಿಕಿತ್ಸೆ, ಮೆದುಳು ಮತ್ತು ಬೆನ್ನುಹುರಿ ಸಂಬಂಧಿತ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ, ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ, ಗರ್ಭಿಣಿಯರಲ್ಲಿ ಭ್ರೂಣದ ಆನುವಂಶಿಕ ಲಕ್ಷಣಗಳ ಗುರುತಿಸುವಿಕೆ, ಸುಟ್ಟ ಗಾಯಗಳು ಮತ್ತು ಸೀಳು ತುಟಿಗಳ ಶಸ್ತ್ರಚಿಕಿತ್ಸೆ. ಕಾಸ್ಮೆಟಿಕ್ ಮತ್ತು ಪುನಃರ್ನಿರ್ಮಾಣ ಶಸ್ತ್ರಚಿಕಿತ್ಸೆ, ಚಿಕ್ಕಮಕ್ಕಳಲ್ಲಿನ ನರರೋಗ ಸಂಬಂಧಿತ ಕಾಯಿಲೆಗಳ ಚಿಕಿತ್ಸೆ.
ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಜ್ಞವೈದ್ಯರು:
ಡಾ.ಸಾಗರ ದೇಸಾಯಿ ಮತ್ತು ಡಾ.ಸಮೀರಕುಮಾರ ಕುಲಕರ್ಣಿ-ಹೃದಯರೋಗ ಚಿಕಿತ್ಸಾ ತಜ್ಞರು, ಡಾ.ನಿಶ್ಚಿತ್ ಉಡುಪಿ-ಹೃದಯರೋಗ ಶಸ್ತ್ರಚಿಕಿತ್ಸಾ ತಜ್ಞರು, ಡಾ.ದೇವರಡ್ಡಿ ನಾವಳ್ಳಿ ಮತ್ತು ಡಾ.ನವೀನ ಮಾಸರಡ್ಡಿ-ನರರೋಗ ಚಿಕಿತ್ಸಾ ತಜ್ಞರು, ಡಾ.ಅಕ್ಷತಾ ಅಂಗಡಿ-ಚಿಕ್ಕಮಕ್ಕಳ ನರರೋಗ ಚಿಕಿತ್ಸಾ ತಜ್ಞರು, ಡಾ.ಅಮರೇಶ ದೆಗಿನಾಳ-ನರರೋಗ ಶಸ್ತ್ರಚಿಕಿತ್ಸಾ ತಜ್ಞರು, ಡಾ.ರಾಘವೇಂದ್ರ ಎನ್. ಮತ್ತು ಡಾ.ವಿಠ್ಠಲ ಕುಂಬಾರ-ಗ್ಯಾಸ್ಟ್ರೋಎಂಟರಾಲಜಿಸ್ಟ್, ಡಾ.ಅನಿಲ ಸತ್ಯರಡ್ಡಿ ಮತ್ತು ಡಾ.ನವೀನ ಚರಂತಿಮಠ- ಅಂತ:ಸ್ರಾವ/ಮಧುಮೇಹ ತಜ್ಞರು, ಡಾ.ಚೇತನ ಬರಗಿ, ಡಾ.ಶ್ರೀಧರ ಕೆ. ಮತ್ತು ಡಾ.ಫಜಲ್ ಚೌಧರಿ-ಮೂತ್ರಕೋಶ ತಜ್ಞರು, ಡಾ.ಚಿರಾಗ ಜಿ. ಮತ್ತು ಡಾ.ಕಿರಣ ಬಿಜಾಪೂರ- ಮೂತ್ರಪಿಂಡ ತಜ್ಞರು, ಡಾ.ಬಸವರಾಜ ಅಂಕಲಕೋಟಿ ಮತ್ತು ಡಾ.ಗೋವಿಂದ ಸೋಮಾನಿ- ಕ್ಯಾನ್ಸರ್ ಚಿಕಿತ್ಸಾ ತಜ್ಞರು, ಡಾ.ಮಹಾಂತೇಶ ಮಠ- ಪ್ಲಾಸ್ಟಿಕ್ ಸರ್ಜನ್, ಡಾ.ನೇಹಾ ಸೋಮಾನಿ- ಪ್ರಸೂತಿ, ಸ್ತ್ರೀರೋಗ ಮತ್ತು ಭ್ರೂಣ ತಜ್ಞರು.
ತೆರೆದ ಹೃದಯದ ಶಸ್ತ್ರಚಿಕಿತ್ಸೆ:
ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯರೋಗ ಚಿಕಿತ್ಸಾ ವಿಭಾಗದಲ್ಲಿ ತೆರೆದಹೃದಯ ಶಸ್ತ್ರಚಿಕಿತ್ಸೆ, ಎದೆಯ ನಾಳಗಳ ಶಸ್ತ್ರಚಿಕಿತ್ಸೆ, ಕೃತಕ ಕವಾಟುಗಳ (Valve) ಅಳವಡಿಕೆ ಮಾಡಲಾಗುವುದು. ಅನೇಕ ಹೃದಯ ರೋಗಿಗಳಿಗೆ ಯಶಸ್ವಿಯಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿ ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ನಗದುರಹಿತ ತೆರೆದ ಹೃದಯ ಶಸ್ತ್ರಚಿಕಿತ್ಸೆ ಸೌಲಭ್ಯ ಆಸ್ಪತ್ರೆಯಲ್ಲಿ ಲಭ್ಯವಿದೆ.
ಆರೋಗ್ಯ ಕ್ಷೇತ್ರದಲ್ಲಿ ಭರವಸೆಯ ಬೆಳಕು
ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಈ ಎರಡು ಕ್ಷೇತ್ರಗಳಲ್ಲಿ ಉತ್ಕೃಷ್ಟವಾದದ್ದನ್ನು ಸಾಧಿಸುವ ಉದ್ದೇಶ ಬಿ.ವಿ.ವಿ ಸಂಘದ್ದಾಗಿದೆ. ಈ ಉದ್ದೇಶ ಸಾಧನೆಗಾಗಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲಾಗಿದೆ. ಕಳೆದ ಎರಡೂವರೆ ದಶಕಗಳಿಂದ ಈ ಎರಡು ಸಂಸ್ಥೆಗಳ ಮೂಲಕ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಗಳ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. 2000ರಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು 2026ರಲ್ಲಿ ಎಚ್.ಎಸ್.ಕೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ಮೂಲಕ ಬಾಗಲಕೋಟೆ ಮತ್ತು ನೆರೆಯ ಜಿಲ್ಲೆಗಳ ಸಾರ್ವಜನಿಕರಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವಾ ಸೌಲಭ್ಯ ಒದಗಿಸಲಾಗಿದೆ. ಮೆಡಿಕಲ್ ಕಾಲೇಜಿನ ಮೂಲಕ ಗುಣಾತ್ಮಕ ವೈದ್ಯಕೀಯ ಶಿಕ್ಷಣ ನೀಡಿ ಸೇವಾಮನೋಭಾವದ ವೈದ್ಯರನ್ನು ರೂಪಿಸಲಾಗುತ್ತಿದೆ. ಈ ಸೇವಾ ಕೈಂಕರ್ಯದಲ್ಲಿ ನಮ್ಮೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಎಲ್ಲ ವೈದ್ಯರಿಗೆ ’ವೈದ್ಯರ ದಿನ’ದ ಶುಭಾಷಯಗಳು. ಭಾರತರತ್ನ ಡಾ.ಬಿ.ಸಿ.ರಾಯ್ ಅವರಿಗೆ ನಮನಗಳು.
-ಡಾ.ವೀರಣ್ಣ ಸಿ. ಚರಂತಿಮಠ, ಕಾರ್ಯಾಧ್ಯಕ್ಷರು, ಬಿ.ವಿ.ವಿ. ಸಂಘ
ಕನಸು ನನಸಾಯಿತು
2000ನೇ ಇಸ್ವಿಯಲ್ಲಿ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಸ್ಥಾಪಿಸುವ ಸಂದರ್ಭದಲ್ಲೇ ಜಿಲ್ಲೆಯ ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರದಾಗಿತ್ತು. ಕಳೆದ ಎರಡೂವರೆ ದಶಕಗಳಿಂದ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟೆ ಮತ್ತು ನೆರೆಯ ಜಿಲ್ಲೆಗಳ ಜನರಿಗೆ ಒದಗಿಸುತ್ತಿರುವ ಆರೋಗ್ಯ ಸೇವೆ ಅಭಿನಂದನಾರ್ಹವಾದದ್ದು. ಆಸ್ಪತ್ರೆಯನ್ನು ಕಾಲಕಾಲಕ್ಕೆ ಮೇಲ್ದರ್ಜೆಗೇರಿಸಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 2026 ರಲ್ಲಿ ಎಚ್.ಎಸ್.ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಯೊಂದಿಗೆ ಆರೋಗ್ಯ ಸೇವೆಯ ಹೊಸ ಅಭಿಯಾನ ಆರಂಭಗೊಂಡಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಯೊಂದಿಗೆ ಡಾ.ವೀರಣ್ಣ ಚರಂತಿಮಠ ಅವರ ಹಲವು ವರ್ಷಗಳ ಕನಸು ನನಸಾಗಿದೆ.
-ಅಶೋಕ ಎಂ. ಸಜ್ಜನ (ಬೇವೂರ), ಕಾರ್ಯಾಧ್ಯಕ್ಷರು, ವೈದ್ಯಕೀಯ ಆಡಳಿತ ಮಂಡಳಿ ಬಿ.ವಿ.ವಿ.ಸಂಘ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.