ಯಲಬುರ್ಗಾ:
ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು, ಭೂಮಿ, ಪರಿಸರ ಹಾಳಾಗುತ್ತಿದೆ. ಸಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗದೆ ಗಿಡ-ಮರ ಪೋಷಿಸುವ ಕಾರ್ಯವಾಗಬೇಕು. ಮಣ್ಣು, ಜಲ, ಅರಣ್ಯ ಉಳಿಸಲು ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು ಎಂದರು.
ಉಪನ್ಯಾಸ ನೀಡಿದ ಇಂದಿರಾ ಮುತ್ತಾಳ, ವಿಶ್ವಬಂಧು ಸೇವಾ ಗುರುಬಳಗ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡು ತಾಲೂಕಿನ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ವಿಶ್ವಬಂಧು ಸೇವಾ ಗುರುಬಳಗದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿದರು. ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ನೂರಂದಪ್ಪ, ಸಿಆರ್‌ಪಿ ಶರಣು ಕುರ್ನಾಳ, ಮುಖ್ಯಶಿಕ್ಷಕರಾದ ಕಳಕೇಶ ಬಳಿಗಾರ, ಲಾಲ್‌ಬಹದ್ದೂರ್ ಶಾಸ್ತ್ರಿ, ಶಿಕ್ಷಕರಾದ ಮಹಾವೀರ ಕಲ್ಭಾವಿ, ಮಾಂತೇಶ ಹಿರೇಮಠ, ಉಪ ವಲಯ ಅರಣ್ಯಾಧಿಕಾರಿ ಚಿದಾನಂದ ಓಲೇಕಾರ, ಅರಣ್ಯ ಇಲಾಖೆಯ ಕಳಕಪ್ಪ ಬ್ಯಾಳಿ, ಬಳಗದ ಪ್ರಮುಖರಾದ ಸಂಗಯ್ಯ ಹಿರೇಮಠ, ಶರಣಪ್ಪ ಅಂಗಡಿ, ಬಸವರಾಜ, ರಾಜೇಶ್ವರಿ, ಪ್ರಭು ಶಿವನಗೌಡ್ರ, ಪರಮೇಶ ಚಿಂತಾಮಣಿ, ಮಾರುತಿ ಹಾದಿಮನಿ, ಗಣೇಶ, ದಾವಲಸಾಬ ಹೆಬ್ಬಳ್ಳಿ, ಮಾರುತಿ ಬನ್ನಿಗೋಳ, ಶಂಕರ ಇಂಗಳದಾಳ, ಕವಿತಾ ಹೂಗಾರ ಇದ್ದರು.ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಲಿ
ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಈಶಪ್ಪ ವಕ್ರ ಹೇಳಿದರು.
ಮಾನವ ತನ್ನ ಬೇಕು-ಬೇಡಿಕೆ ಈಡೇರಿಸಿಕೊಳ್ಳಲು ಪರಿಸರ ನಾಶ ಪಡಿಸುತ್ತಿದ್ದಾನೆ. ಅದರಿಂದ ಮಾನವನಿಗೆ ಎಷ್ಟು ಸಮಸ್ಯೆ ಇದೆ ಎಂಬುದನ್ನು ಮನಗಾಣಬೇಕು. ಸುತ್ತಲಿನ ಪರಿಸರ, ಶುದ್ಧ ಗಾಳಿಯಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಆದ್ದರಿಂದ ಪ್ರತಿಯೊಬ್ಬರು ಸಸಿ ನೆಟ್ಟು ಪೋಷಿಸಬೇಕೆಂದು ಹೇಳಿದರು.