ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಮಾದರಿ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ನಡೆಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಬ್ರಹ್ಮಾವರದ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಮಾದರಿ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸಲಾಗಿತ್ತು.ಕಟಪಾಡಿಯ ಎಸ್.ವಿ.ಕೆ. ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ವೇತಾ ಪ್ರಶಾಂತ್ ಶೆಟ್ಟಿ ವಿಜ್ಞಾನ ಮಾದರಿಗಳ ಪ್ರದರ್ಶನ ‘ಸೈನ್‌ಕ್ವೆಸ್ಟ್’ ಉದ್ಘಾಟಿಸಿ ಮಾತನಾಡಿ ವಿಜ್ಞಾನವು ವಾಸ್ತವದಲ್ಲಿ ನಡೆಯುವ ಒಂದು ಮ್ಯಾಜಿಕ್. ಇದು ನಮಗೆ ದೊರೆತ ಒಂದು ವರವಾಗಿದ್ದು ಎಂದಿಗೂ ಇದನ್ನು ಕಳೆದುಕೊಳ್ಳಬಾರದೆಂದು ಹೇಳಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರಶಂಸಿದರು. ಹಿರಿಯಡ್ಕ, ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಲಾ ಶಿಕ್ಷಕ ಮೋಹನ್ ಕಡಬ ‘ಜಿ ಎಮ್ ಸ್ಟ್ರೋಕ್ಸ್’ ಚಿತ್ರಕಾಲ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮ ಭಾವನೆಗಳನ್ನು, ರೇಖೆ ಮತ್ತು ಬಣ್ಣದ ಮೂಲಕ ಪ್ರದರ್ಶಿಸಲು ಚಿತ್ರಕಲೆಯು ಒಂದು ಉತ್ತಮ ಮಾಧ್ಯಮವೆಂದರು. ಕ್ಯಾನ್ವಸ್ ಮೇಲೆ ಅಕ್ಷರವನ್ನು ಬರೆದು ಅದಕ್ಕೆ ಮರದ ರೂಪವನ್ನು ಕೊಟ್ಟು ಸುಂದರವಾದ ಚಿತ್ರವನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ಶಾಲೆಯ ಪ್ರತಿಯೊಂದು ಮಗು ತನ್ನ ಪ್ರತಿಭೆ, ಕೌಶಲ್ಯಗಳನ್ನು ಅಭಿವ್ಯಕ್ತಿಗೊಳಿಸಲು ಹಲವಾರು ಅವಕಾಶಗಳನ್ನು, ವೇದಿಕೆಗಳನ್ನು ಒದಗಿಸಿಕೊಡಲಾಗುತ್ತಿದೆ. ಮಕ್ಕಳೆಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಚಿತ್ರಗಳ ಮೂಲಕ ಅಭಿಪ್ರಾಯಗಳನ್ನು ತಿಳಿಸುವ ಕಲಾಕಾರರು ನಮಗೆ ನಿಜವಾದ ಸ್ಫೂರ್ತಿ ಎಂದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್, ಜಿ.ಎಂ.ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರಣವ್ ಶೆಟ್ಟಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ನಾಗರಾಜ ಸೋಮಯಾಜಿ, ಪೋಷಕರು, ಶಿಕ್ಷಕರು, ವಿಜ್ಞಾನ ಹಾಗೂ ಆರ್ಟ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.