ರಾಜಕೀಯ ಕ್ಷೇತ್ರದಲ್ಲೂ 2ಎ‌ ಮೀಸಲಾತಿ ನೀಡಿ

KannadaprabhaNewsNetwork |  
Published : Aug 03, 2026, 01:15 AM IST
 | Kannada Prabha

ಸಾರಾಂಶ

ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ದೊರೆಯುತ್ತಿದ್ದು ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ 2ಎ ಮೀಸಲಾತಿ ದೊರೆಯುಬೇಕೆಂಬುದು ಜನಾಂಗದ ಬಹುದಿನದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಶ್ರಮಿಸುವುದಾಗಿ ವಿಧಾನಪರಿಷತ್ ಸದಸ್ಯ ರಮೇಶಬಾಬು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ದೊರೆಯುತ್ತಿದ್ದು ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ 2ಎ ಮೀಸಲಾತಿ ದೊರೆಯುಬೇಕೆಂಬುದು ಜನಾಂಗದ ಬಹುದಿನದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಶ್ರಮಿಸುವುದಾಗಿ ವಿಧಾನಪರಿಷತ್ ಸದಸ್ಯ ರಮೇಶಬಾಬು ತಿಳಿಸಿದ್ದಾರೆ.

ನಗರದ ಶ್ರೀಸಿದ್ದಿವಿನಾಯಕ ಸಮುದಾಯಭವನದಲ್ಲಿ ಜಿಲ್ಲಾ ಬಲಿಜ ಸಂಘ ತುಮಕೂರು ಹಾಗೂ ಶ್ರೀಯೋಗಿ ನಾರೇಯಣ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ 191ನೇ ವರ್ಷದ ಜೀವ ಸಮಾಧಿ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಶಿಕ್ಷಣದಲ್ಲಿ 2ಎ ಮೀಸಲಾತಿಯಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಇದೇ ಮೀಸಲಾತಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ದೊರೆತರೆ ನಮ್ಮ ಸಮುದಾಯದ ಜನರು ಸರ್ಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳಿಂದ ಸಂಸತ್‌ವರೆಗೆ ಸಮಾಜದ ಜನರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಹಕಾರಿಯಾಗಲಿದೆ ಎಂದರು.

ಸ್ಪೂರ್ತಿ ಡೆವಲಪರ್ಸ್ ಮಾಲೀಕರಾದ ಎಸ್.ಪಿ.ಚಿದಾನಂದ ಅವರು ಬಹಳ ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದಾರೆ. ಅವರು ಮನಸ್ಸು ಬದಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಪಕ್ಷದ ಹಿರಿಯರ ಜೊತೆಗೆ ಮಾತನಾಡಲು ಸಿದ್ದ ಎಂದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರ ಹಾಗೆಯೇ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದ ಮತದಾರರ ಸಂಖ್ಯೆ ಹೆಚ್ಚಿವೆ. ಈ ಹಿಂದೆ ಸಿ.ಎಂ.ಭಾಸ್ಕರಪ್ಪ ಅವರ ಗೆಲುವಿಗೆ ಇದೇ ಕಾರಣ. ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಚಾಲ್ತಿಯಲ್ಲಿದೆ. ನಮ್ಮವರೇ ಆದ ಎಂ.ಆರ್. ಸೀತಾರಾಮ್ ಶೇ100 ಕ್ಕೆ ನೂರಷ್ಟು ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ , ನಮ್ಮ ಸಮುದಾಯದ ಜನರು ಗ್ರಾಮೀಣ ಭಾಗದಲ್ಲಿ ತೀರ ಹಿಂದುಳಿದಿದ್ದಾರೆ. ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಕೈಗೆಟುಕಲಾರದ ಸ್ಥಿತಿಯಲ್ಲಿದೆ. ಹಾಗಾಗಿ ಸ್ಪೂರ್ತಿ ಚಿದಾನಂದರವರು ಕನಿಷ್ಠ ಪ್ರತಿ ತಾಲೂಕಿನಲ್ಲಿ ಒಂದು ಅಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯನ್ನು ತೆರೆದು, ಸಮುದಾಯ ಮಕ್ಕಳು ಭರಿಸಬಹುದಾದ ಶುಲ್ಕದಲ್ಲಿ ಒಳ್ಳೆಯ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಿ. ಇದರಿಂದ ಲಕ್ಷಾಂತರ ತಾಯಂದಿರ ಕನಸು ನನಸಾಗಲಿದೆ ಎಂದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಸ್ಪೂರ್ತಿ ಚಿದಾನಂದ, ಜನಾಂಗದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪುರುಷ ಮತ್ತು ಮಹಿಳೆಯರ ಹಾಸ್ಟಲ್, ಯೋಗಿ ನಾರೇಯಣ ಪತ್ತಿನ ಸಹಕಾರ ಸಂಘ ತೆರೆದು ಜನರನ್ನು ಆರ್ಥಿಕವಾಗಿ ಸಧೃಢಗೊಳಿಸಲು ನಿರಂತರವಾಗಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ನಟರಾಜ ಶೆಟ್ಟಿ ಮಾತನಾಡಿ, ಶಿಕ್ಷಣವೆಂಬುದು ದುಬಾರಿಯಾಗಿರುವ ಈ ಕಾಲದಲ್ಲಿ ಮೇರಿಟ್ ಮೇಲೆ ನಿಮ್ಮ ಗಮನ ಇರಲಿ,ರೋಗ ಮುಕ್ತ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ಶಿಕ್ಷಣ ಇಂದು ಅತಿ ಅವಶ್ಯಕವಾಗಿದೆ. ಹಾಗಾಗಿ ಪೋಷಕರು ತಮಗೆ ಎಂತಹದ್ದೇ ಕಷ್ಟವಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರಕಾರ ಹಾಗೂ ಸಂಘ ಸಂಸ್ಥೆಗಳು ನಿಮ್ಮ ಜೊತೆ ಕೈಜೋಡಿಸಲಿವೆ ಎಂದರು.

ಈ ವೇಳೆ ಜಿಲ್ಲಾ ಬಲಿಜ ಸಂಘದ ಕಾರ‍್ಯದರ್ಶಿ ಟಿ.ಆರ್.ಹೆಚ್ ಪ್ರಕಾಶ್, ಹಿರಿಯ ಲೇಖಕ ಎಂ.ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷರಾದ ಶಂಕರಪ್ಪ, ಪದ್ಮನಾಭ್, ಶಂಕರನಾರಾಯಣ, ರಾಮಚಂದ್ರಪ್ಪ, ಶ್ರೀರಂಗಪ್ಪ, ನಂಜುಂಡಪ್ಪ, ಲಕ್ಷ್ಮಣಪ್ಪ, ಎನ್.ಪದ್ಮನಾಭ್, ವಿಶ್ವನಾಥ್, ಎಸ್.ಎಸ್.ರಂಗನಾಥ್, ಗಿರೀಶ್, .ಪ್ರಕಾಶ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಗ್ಗಿದ ಪುಷ್ಯ ಮಳೆ ಅಬ್ಬರ: ನಿಲ್ಲದ ಭದ್ರೆಯ ರೌದ್ರಾವತಾರ
ದೇಶದ ಆರ್ಥಿಕ ಪ್ರಗತಿಗೆ ಯುವಶಕ್ತಿ ಕೊಡುಗೆ ಅಮೂಲ್ಯ: ಡಾ.ಎಂ.ಆರ್.ಹುಲಿನಾಯ್ಕರ್‌