ಬೌದ್ಧ ಸಮ್ಮೇಳನ ಯಶಸ್ವಿಗೆ ಅಗತ್ಯ ಸಹಕಾರ ನೀಡಿ: ಶಾಸಕ ಕೃಷ್ಣಮೂರ್ತಿ

KannadaprabhaNewsNetwork |  
Published : Sep 07, 2026, 02:15 AM IST
5ಸಿಎಚ್‌ಎನ್‌56ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊಳ್ಳೇಗಾಲ ತಾಲೂಕಿನ ಪರಿಶಿಷ್ಟಜಾತಿಯ ಗಡಿ, ಕಟ್ಟೆ ಹಾಗೂ ಕಸಬಾ ಮನೆಯ ಯಜಮಾನರ ನೇತೃತ್ವದಲ್ಲಿ ಆಯೋಜಿಸಿದ್ದ ಅಂತರಾಷ್ರ್ಯೀಯ ಮಟ್ಟದ 2ನೇ ಬೌದ್ಧ ಮಹಾ ಸಮ್ಮೇಳನದ ಪೂರಕ ಸಭೆಯಲ್ಲಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಅಂತಾರಾಷ್ಟ್ರೀಯ 2ನೇ ಬೌದ್ಧ ಮಹಾ ಸಮ್ಮೇಳನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಚರ್ಚೆ ನಡೆಸದೆ ಸಮ್ಮೇಳನ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಲಹೆ ಸಹಕಾರ ನೀಡಬೇಕು, ಎಲ್ಲರೂ ಯಶಸ್ವಿಗೆ ಕೈಜೋಡಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಅಂತಾರಾಷ್ಟ್ರೀಯ 2ನೇ ಬೌದ್ಧ ಮಹಾ ಸಮ್ಮೇಳನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಚರ್ಚೆ ನಡೆಸದೆ ಸಮ್ಮೇಳನ ಯಶಸ್ವಿಗೊಳಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಲಹೆ ಸಹಕಾರ ನೀಡಬೇಕು, ಎಲ್ಲರೂ ಯಶಸ್ವಿಗೆ ಕೈಜೋಡಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಮಾತೆ ಗೌತಮಿ ಬಂತೇ, ಸುಗತಪಾಲ ಬಂತೇಜಿ, ಮನೋರಖಿತ ಬಂತೇಜಿ ಅವರ ಸಭೆಯ ದಿವ್ಯ ಸಾನ್ನಿಧ್ಯದಲ್ಲಿ, ಕೊಳ್ಳೇಗಾಲ ತಾಲೂಕಿನ ಪರಿಶಿಷ್ಟ ಜಾತಿಯ ಗಡಿ, ಕಟ್ಟೆ ಹಾಗೂ ಕಸಬಾ ಮನೆಯ ಯಜಮಾನರ ನೇತೃತ್ವದಲ್ಲಿ ಆಯೋಜಿಸಿದ್ದ ಅಂತಾರಾಷ್ರ್ಯೀಯ ಮಟ್ಟದ 2ನೇ ಬೌದ್ಧ ಮಹಾ ಸಮ್ಮೇಳನದ ಪೂರಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಿಗದಿಯಾಗಿರುವ ಸಮ್ಮೇಳನದ ಕುರಿತು ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು ಸಭೆ ಯಶಸ್ವಿಯಾಗಿದೆ. ಈ ಸಮ್ಮೇಳನವನ್ನು ರಾಜಕೀಯ ಮರೆತು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಆಯೋಜಿಸಲಾಗಿದೆ ಎಂದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಶಾಸಕರು, ಮಾಜಿ ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಧರ್ಮದ ಸ್ವಾಮೀಜಿಗಳು ಮತ್ತು ಬುದ್ದನ ಅನುಯಾಯಿಗಳೂ ಮತ್ತು ಉಪಾಸಕರು, ಗಣ್ಯರು ಮಹನೀಯರು ಭಾಗವಹಿಸಲಿದ್ದಾರೆ ಎಂದರು.

56 ದೇಶದಲ್ಲಿ ಇಲ್ಲಿನ ಸಮ್ಮೇಳನದ ವಿಚಾರಧಾರೆ ನೇರ ಪ್ರಸಾರವಾಗಲಿದೆ. ಮೊದಲನೇ ಮಹಾ ಬೌದ್ಧ ಸಮ್ಮೇಳನ ಮೈಸೂರಿನಲ್ಲಿ ಕಳೆದ ವರ್ಷ ನಡೆದಿದ್ದು, ನಮ್ಮ ಜಿಲ್ಲೆಗೆ 2ನೇ ಬೌದ್ಧ ಸಮ್ಮೇಳನ ಸಮಾರಂಭದ ಜವಾಬ್ದಾರಿ ದೊರೆತಿರುವುದು ನಮ್ಮ ಪುಣ್ಯವೇ ಸರಿ.

ಇದೇ ವೇಳೆ ಸಮ್ಮೇಳನಕ್ಕೆ ದೇಣಿಗೆಯಾಗಿ ಕೊಳ್ಳೇಗಾಲದ ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರು ಮೂಲದ ಮೋಹನ್ ತಲಾ 1 ಲಕ್ಷ ರು. ಚೆಕ್ ನೀಡಿದರೆ, ನಗರಸಭಾ ಮಾಜಿ ಅಧ್ಯಕ್ಷ ಬಸ್ತೀಪುರ ಶಾಂತರಾಜು, ಮಾಜಿ ಉಪಾಧ್ಯಕ್ಷ ಜೆ.ಹರ್ಷ, ಮುಡಿಗುಂಡ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಬಸ್ತೀಪುರ ಪ್ರಕಾಶ್ ಸೇರಿದಂತೆ ಹತ್ತಾರು ಮುಖಂಡರು ದೇಣಿಗೆ ನೀಡಿದರು.

ಭೀಮನಗರ ದೊಡ್ಡ ಯಜಮಾನರಾದ ಚಿಕ್ಕಮಾಳಿಗೆ, ಸತ್ತೇಗಾಲ ಗಡಿ ಮನೆ ಯಜಮಾನ ಮಹದೇವು, ಪಾಳ್ಯ ಕಟ್ಟೆ ಮನೆ ಯಜಮಾನರಾದ ಬಸವರಾಜು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರಾದ ಎಸ್.ಆನಂದಮೂರ್ತಿ, ಸಮ್ಮೇಳನದ ಆಚರಣಾ ಸಮಿತಿ ಸಂಚಾಲಕರಾದ ವೆಂಕಟರಮಣಸ್ವಾಮಿ, ಮಹದೇವ ಶಂಕನಪುರ, ಮುಳ್ಳೂರು ಶಿವಮಲ್ಲು, ಎಚ್.ಮೋಹನ್ ಕುಮಾರ್, ವಕೀಲ ರಾಜೇಂದ್ರ, ಸಾಹಿತಿ ಶಂಕನಪುರ ಮಹದೇವ, ವೆಂಕಟರಾಮ(ಪಾಪು), ಶಿವಮಲ್ಲು ಮುಳ್ಳೂರು, ಬ್ಯಾಂಕ್ ರಾಚಪ್ಪಾಜಿ, ಚೇತನ್ ದೊರೈರಾಜ್, ಜಿ.ಪಂ.ಮಾಜಿ ಸದಸ್ಯ ಮುಳ್ಳೂರು ಕಮಲ್, ಸಿದ್ದಯ್ಯನಪುರ ಚಾಮರಾಜು, ಉತ್ತಂಬಳ್ಳಿ ಲಿಂಗಯ್ಯ, ತಾ.ಪಂ. ಮಾಜಿ ಸದಸ್ಯ ಹಂಪಾಪುರ ಬಸವಣ್ಣ, ಸಿದ್ದಯ್ಯನಪುರದ ವಿಜಯರಾಣಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ 1 ಲಕ್ಷ ರು ಪರಿಹಾರಕ್ಕೆ ಯೋಗೇಶ್ ಆಗ್ರಹ
ಹಿಂಸೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ