ರಾಷ್ಟ್ರಗಳ ವಿನಾಶಕ್ಕೆ ಕಾರಣವಾಗುವ ಕ್ರೌರ್ಯ ಮತ್ತು ದೌರ್ಜನ್ಯವನ್ನು ಬಿಟ್ಟು ಶಾಂತಿ ನಮ್ಮ ಮೂಲ ಮಂತ್ರವಾಗಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ರಾಷ್ಟ್ರಗಳ ವಿನಾಶಕ್ಕೆ ಕಾರಣವಾಗುವ ಕ್ರೌರ್ಯ ಮತ್ತು ದೌರ್ಜನ್ಯವನ್ನು ಬಿಟ್ಟು ಶಾಂತಿ ನಮ್ಮ ಮೂಲ ಮಂತ್ರವಾಗಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ವಿದ್ಯಾ ಮಾನಸ ವಿದ್ಯಾಲಯದಲ್ಲಿ ರೋಟರಿ ತುಮಕೂರು ವತಿಯಿಂದ ನಡೆದ ಹಿರೋಷಿಮಾ-ನಾಗಸಾಕಿ ವಿಕ್ಷಣಾ ದಿನ ಆಚರಣೆ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು

ಜಪಾನಿನ ಹಿರೋಷಿಮಾ, ನಾಗಾಸಾಕಿ ನಗರಗಳು ಮೇಲೆ ಅಣುಬಾಂಬ್ ದಾಳಿಯಿಂದ ಸರ್ವನಾಶವಾದವು. ಆದರೂ ಜಪಾನಿಯರು ಅದರ ವಿರುದ್ಧ ದ್ವೇಷ ಸಾಧಿಸದೇ ಆತ್ಮವಿಶ್ವಾಸದಿಂದ, ಸ್ವಂತ ಬಲದಿಂದ ಮರು ನಿರ್ಮಾಣ ಮಾಡಿ ಇಡೀ ಜಗತ್ತಿಗೇ ಮಾದರಿಯಾದರು. ದ್ವೇಷ ವಿನಾಶಕ್ಕೆ ದಾರಿಯಾಗುತ್ತದೆ. ಸ್ನೇಹ ಸೌಹಾರ್ದತೆ ಮಾನವೀಯ ಮೌಲ್ಯಗಳ ಸ್ಥಾಪನೆಗೆ ಕಾರಣವಾಗುತ್ತದೆ ಎಂದರು.

ಈ ವೇಳೆ ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ವಿನೋದ್‌ಕುಮಾರ್ , ಸಿ. ನಾಗರಾಜು, ಅನಿತಾ ನಾಗೇಶ್, ರಾಧಾ ಚಿದಾನಂದ್, ಪ್ರಣವಂ, ಡಾ. ಉಪೇಂದ್ರ, ಬಿಳಿಗೆರೆ ಶಿವಕುಮಾರ್, ಕಾಂತಿಲಾಲ್, ಕೀರ್ತಿಶೇಖರ್, ರಘು, ರವಿಶಂಕರ್, ರಾಮಾಂಜನೇಯ ಉಮಾ ಇತರರಿದ್ದರು.