ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಅರಸಾಳು ರೈಲ್ವೆ ನಿಲ್ದಾಣದಲ್ಲಿ ಸಮರ್ಪಕವಾಗಿ ನಿರ್ವಹಣೆ ಇಲ್ಲವಾಗಿದೆ ಎಂದು ರೈಲ್ವೆ ಪ್ರಯಾಣಿಕರಾದ ಗಾಯಿತ್ರಿ ವಿನಾಯಕ, ಸುಶೀಲ ಮೂಡಾಗ್ರ ಕೆ.. ಗೀತಾ ಅಣ್ಣಪ್ಪ, ಸೀತಾರಾಜಪ್ಪ, ಗೀತಾ ಕರಿಬಸಪ್ಪ, ವೇದಾವತಿ ಆರೋಪಿಸಿದ್ದಾರೆ.
ತಾಳುಗುಪ್ಪ-ಶಿವಮೊಗ್ಗ-ಬೆಂಗಳೂರು-ಮೈಸೂರು ಇಂಟರ್ ಸಿಟಿ ಸೇರಿದಂತೆ ಹಲವು ಪ್ಯಾಸಂಜರ್ ರೈಲು ಗಾಡಿಗಳು ನಿತ್ಯ ಈ ಮಾರ್ಗದಲ್ಲಿ ಹೋಗಿ ಬರುತ್ತಿದ್ದು ಇಲ್ಲಿನ ಆರಸಾಳು ರೈಲ್ವೆ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬೆಂಗಳೂರು, ಮೈಸೂರು, ತಾಳುಗುಪ್ಪ, ಜೋಗ, ಭಟ್ಕಳ, ಶಿರಸಿ, ಸಿದ್ದಾಪುರ, ಕುಂದಾಪುರ, ಉಡುಪಿ, ಕೊಡಚಾದ್ರಿ, ಕೊಲ್ಲೂರು, ಹೊಂಬುಜ, ಸಿಗಂದೂರು ಹೀಗೆ ಸುತ್ತಮುತ್ತಲಿನ ಪ್ರಕ್ಷಣೀಯ ಧಾರ್ಮಿಕ ಸ್ಥಳಗಳಿಗೆ ಹಾಗೂ ನಿರುದ್ಯೋಗಿಗಳು ಉದ್ಯೋಗಿಗಳು ಮತ್ತು ಸಂಬಂಧಿಕರ ಊರುಗಳಿಗೆ ಹೋಗಿ ಬರುವವರಿಗೆ ತುಂಬಾ ಅನುಕೂಲಕರವಾಗಿರುವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸರಿಯಾದ ಶೌಚಾಲಯವಿಲ್ಲ. ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲವಾಗಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದ ಬಳಿ ಸರಿಯಾದ ಬೀದಿ ದೀಪಗಳಿಲ್ಲದೆ ಕತ್ತಲು ಅವರಿಸಿಕೊಂಡಿದ್ದು ಮಹಿಳೆಯರಿಗೆ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ.ನಿಲ್ದಾಣದ ಅವರಣದಲ್ಲಿ ಸ್ವಚ್ಛತೆಯಿಲ್ಲದೆ ಕಸ ತುಂಬಿಕೊಂಡಿದ್ದು ಶೌಚಾಲಯಗಳಿಗೆ ಹೋದರೆ ನೀರು ಸಹ ಇಲ್ಲ. ಇನ್ನು ಕುಡಿಯುವ ನೀರಯಂತೂ ಇಲ್ಲವೆ ಇಲ್ಲವಾಗಿ ಮಹಿಳೆಯರು ಮಕ್ಕಳು ವೃದ್ದರು ಅನಾರೋಗ್ಯ ಪೀಡಿತರು ದೂರದ ಬೆಂಗಳೂರು ಮೈಸೂರು ತೆರಳುವ ಪ್ರಯಾಣಿಕರು ಶೌಚಾಲಯವಿಲ್ಲದೆ ಬಯಲು ಪ್ರದೇಶವನ್ನು ಆವಲಂಬಿಸುವುದು ಆನಿರ್ವಾಯವಾಗಿದೆ.
ಮುಂಜಾನೆ ರಾಜದಾನಿಯಿಂದ 5.50ಕ್ಕೆ ಬರುವ ಮೈಸೂರು-ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್ ಸಿಟಿ ರೈಲು ತಾಳುಗುಪ್ಪದಿಂದ ಹೊರಟು ಸಾಗರ ಅನಂದಪುರಂ ಆರಸಾಳು ಕುಂಸಿ ಶಿವಮೊಗ್ಗ ಮಾರ್ಗ ರಾಜದಾನಿ ಬೆಂಗಳೂರಿಗೆ 6.20 ಹೋಗುವ ಇಂಟರ್ ಸಿಟಿ ರೈಲು ನಂತರ 7.45 ರಿಂದ 8 ಗಂಟೆಗೆ ಶಿವಮೊಗ್ಗ ಪ್ಯಾಸಂಜರ್ ರೈಲು ಹೀಗೆ ಹೋಗಿ ಬರುವ ಹಲವಾರು ರೈಲು ಗಾಡಿಗಳು ಆರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ನಿಲ್ಲಿಸಿ ಹೋಗುವುದರಿಂದಾಗಿ ಸಾಕಷ್ಟು ಪ್ರಯಾಣಿಕರು ಓಡಾಡುವಂತಾಗಿದೆ.
ಇನ್ನಾದರೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಇತ್ತ ಗಮನಹರಿಸುವ ಮೂಲಕ ಅರಸಾಳು ಮಾಲ್ಗುಡಿ ಮೂಸಿಯಂ ಮತ್ತು ರೈಲ್ವೆ ನಿಲ್ದಾಣದಲ್ಲಿ ಸಮಸ್ಯಗಳಿಗೆ ಪರಿಹಾರ ಕಲ್ಪಿಸುವತ್ತ ಗಮನಹರಿಸಬೇಕಿದೆ.