ಆಸ್ಪತ್ರೆಗಳು ಹೆಚ್ಚಾಗಲು ಕಾರ್ಖಾನೆಗಳೇ ಕಾರಣ

KannadaprabhaNewsNetwork |  
Published : Nov 29, 2025, 12:45 AM IST
ಪೋಟೊ28.7: ಕೊಪ್ಪಳ ನಗರಸಭೆ ಸಂಕೀರ್ಣದ ಮುಂದೆ ನಡೆಯುತಿರುವ ಹೋರಾಟದ ೨೯ನೇ ದಿನದ ಧರಣಿಯನ್ನು ಸಾಂಸ್ಕೃತಿಕ ಕಲಾಬಳಗದಿಂದ ನಡೆಸಲಾಯಿತು. ಧರಣಿ ಬೆಂಬಲಿಸಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. | Kannada Prabha

ಸಾರಾಂಶ

ನಮ್ಮ ಮನೆಗೂ ಬಲ್ಡೋಟ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದಿಂದ ಹಾರುಬೂದಿ, ಕರಿಧೂಳು ಬರುವದರಿಂದ ಅದನ್ನೇ ಉಸಿರಾಡಿ ಆರೋಗ್ಯ ಸಮಸ್ಯೆಯಾಗುತ್ತಿದೆ

ಕೊಪ್ಪಳ: ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಗರಸಭೆ ಸಂಕೀರ್ಣದ ಮುಂದೆ ನಡೆಯುತ್ತಿರುವ ಹೋರಾಟದ ೨೯ನೇ ದಿನದ ಧರಣಿಯನ್ನು ಸಾಂಸ್ಕೃತಿಕ ಕಲಾಬಳಗದಿಂದ ನಡೆಸಲಾಯಿತು.

ಧರಣಿ ಬೆಂಬಲಿಸಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಕಾರ್ಖಾನೆ ಒಂದು ವೇಳೆ ವಿಸ್ತರಣೆಯಾದರೆ ಕೊಪ್ಪಳ ಉಳಿಯುವುದಿಲ್ಲ ಎಂದು ಗವಿಶ್ರೀಗಳು ಸ್ವತಃ ಬೀದಿಗಿಳಿದು ಭವಿಷ್ಯದ ಅಪಾಯದ ಕುರಿತು ಎಚ್ಚರಿಸಿದ್ದಾರೆ.

ಅವರು ಹೋರಾಟದಲ್ಲಿ ಧುಮುಕಿದ ಮೇಲೆ ಜನರು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಆದರೆ ಇನ್ನೂ ಹೋರಾಟಕ್ಕೆ ಧುಮುಕಿಲ್ಲ. ಈಗ ನಗರಸಭೆಯ ವ್ಯಾಪ್ತಿ ಕಡಿಮೆ ಮಾಡಿ ಗ್ರಾಮೀಣ ಪ್ರದೇಶಕ್ಕೆ ಭೂಮಿ ಸೇರಿಸಿ ಆಸ್ತಿಗಳ, ನಿವೇಶನಗಳ ಮೌಲ್ಯ ಅಪಮೌಲೀಕರಣ ಮಾಡಲಾಗುತ್ತಿದೆ, ಇದನ್ನು ವಿರೋಧಿಸಿ ಕೋಪದಿಂದಲೇ ಕೊಪ್ಪಳವನ್ನೇ ಹಳ್ಳಿ ಎಂದು ಘೋಷಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಕೇಳಿದ್ದೇನೆ ಎಂದರು.

ನಮ್ಮ ಮನೆಗೂ ಬಲ್ಡೋಟ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದಿಂದ ಹಾರುಬೂದಿ, ಕರಿಧೂಳು ಬರುವದರಿಂದ ಅದನ್ನೇ ಉಸಿರಾಡಿ ಆರೋಗ್ಯ ಸಮಸ್ಯೆಯಾಗುತ್ತಿದೆ. ಜನ ಅಂತಿಮವಾಗಿ ರೊಚ್ಚಿಗೆದ್ದು ಬೀದಿಗಿಳಿಯಬೇಕು. ಈಗಾಗಲೇ ನಗರಸಭೆಯಲ್ಲಿ ಬಲ್ಡೋಟಾ ವಿಸ್ತರಣೆಯನ್ನು ವಿರೋಧಿಸಿ ಠರಾವು ಮಾಡಿದ್ದೇವೆ. ಅಧಿಕಾರದ ಕೊನೆಯ ದಿನದವರೆಗೂ ನನ್ನ ಸೇವೆಯನ್ನು ಈ ಕಾರ್ಖಾನೆ ವಿಸ್ತರಣೆ, ಹೊಸ ಸ್ಥಾಪನೆ ವಿರೋಧಿಸಲು ಚಲಾಯಿಸುತ್ತೇನೆ. ಜನರಿಗೆ ನ್ಯಾಯ ಸಿಗುವ ವರೆಗೆ ಈ ಚಳವಳಿಯ ಭಾಗವಾಗಿರುತ್ತೇನೆ ಎಂದರು.

ಹೋರಾಟ ಸಮಿತಿ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ನಗರಸಭೆ ಇನ್ನೊಮ್ಮೆ ಕಾರ್ಖಾನೆ ವಿರುದ್ಧ ಠರಾವು ಮಾಡಿ ಸರಕಾರಕ್ಕೆ ಕಳುಹಿಸಬೇಕು, ೩೧ ಜನ ಸದಸ್ಯರು ಧರಣಿಗೆ ಬೆಂಬಲ ಕೊಟ್ಟು ಸ್ಪಷ್ಟ ಸಂದೇಶ ಕೊಡಬೇಕು. ನಂತರ ಪ್ರತಿ ದಿನ ಒಬ್ಬ ಸದಸ್ಯರು ತಮ್ಮ ವಾರ್ಡಿನ ನಾಗರಿಕರೊಂದಿಗೆ ಹೋರಾಟದಲ್ಲಿ ಭಾಗವಹಿಸಿಬೇಕು. ಇದು ಜನಪ್ರತಿನಿಧಿಗಳು ತನ್ನ ಮತದಾರರಿಗೆ ಮಾಡುವ ಮೊದಲ ಉಪಕಾರ ಹಾಗೂ ಕರ್ತವ್ಯ. ನಗರಸಭೆ ತನ್ನ ಪಾಲಿನ ಕೆಲಸ ಮಡುವ ಜೊತೆಗೆ ನಗರವನ್ನು ಧೂಳು ಮುಕ್ತ, ಸ್ವಚ್ಛ ನಗರವಾಗಿಸುವಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ವಿದ್ಯಾರ್ಥಿ ವಿನಾಯಕ ಕರಡಿ, ದುರಗಪ್ಪ ಕನಕಮನಿಚ್ಚ, ಮಂಜುನಾಥ ಕವಲೂರು, ಕಲಾ ಬಳಗದ ಸಂಜೀವ ಮೂರ್ತಿ ಬೇವಿನಗಿಡ, ಸುಂಕಪ್ಪ ಮೀಸಿ, ಮಹಾದೇವಪ್ಪ ಎಸ್. ಮಾವಿನಮಡು, ಸುಭಾನ್ ನೀರಲಗಿ, ರವಿ ಕಾಂತನವರ, ಎಸ್.ಬಿ. ರಾಜೂರ, ನಿವೃತ್ತ ಅಧೀಕ್ಷಕ ಎಫ್.ಎಸ್. ಜಾಲಿಹಾಳ, ಮಂಗಳೇಶ ರಾಠೋಡ, ಹನುಮಂತ ಕಟಗಿ, ಗವಿಸಿದ್ದಪ್ಪ ಹಲಿಗಿ, ಮುದಕಪ್ಪ ಹೊಸಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ