ಜಾತ್ರೆಗಳಿಂದ ದೇಶಿ ಕ್ರೀಡೆಗಳು ಜೀವಂತ: ಗಟ್ಟಿವಾಳಪ್ಪ

KannadaprabhaNewsNetwork |  
Published : Apr 24, 2026, 03:15 AM IST
ಸ್ಪರ್ಧೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ: ಸಂಗ್ರಾಮ ಕಲ್ಲು, ಕಲ್ಲಿನ ಗುಂಡು ಹಾಗೂ ಚೀಲ ಎತ್ತುವ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪರಂಪರೆ ಎತ್ತಿ ಹಿಡಿಯುವ ಕೆಲಸ ಜಾತ್ರೆಗಳಲ್ಲಿ ನಡೆಯುತ್ತಿದೆ ಎಂದು ಸಹಕಾರಿ ಧುರೀಣ ಗಟ್ಟಿವಾಳಪ್ಪ ಗುಡ್ಡಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ: ಸಂಗ್ರಾಮ ಕಲ್ಲು, ಕಲ್ಲಿನ ಗುಂಡು ಹಾಗೂ ಚೀಲ ಎತ್ತುವ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪರಂಪರೆ ಎತ್ತಿ ಹಿಡಿಯುವ ಕೆಲಸ ಜಾತ್ರೆಗಳಲ್ಲಿ ನಡೆಯುತ್ತಿದೆ ಎಂದು ಸಹಕಾರಿ ಧುರೀಣ ಗಟ್ಟಿವಾಳಪ್ಪ ಗುಡ್ಡಾಪುರ ಹೇಳಿದರು.ತಾಲೂಕಿನ ಅಡಹಳ್ಳಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ವಿವಿಧ ಸಾಹಸಮಯ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಭಾವೈಕ್ಯತೆಯ ಸಂಗಮವಾಗಿವೆ. ಇತ್ತೀಚಿಗೆ ರೈತರು ಮತ್ತು ಪಾಲಕರು ಮಕ್ಕಳಿಗೆ ಶಿಕ್ಷಣ ನೀಡುವ ಧಾವಂತದಲ್ಲಿ ಮಕ್ಕಳಿಗೆ ಆಟವಾಡಲು, ಸಾಹಸ ಪ್ರದರ್ಶನ ಮಾಡಲು ಬಿಡುತ್ತಿಲ್ಲ. ಶಾರೀರಿಕ ಬಲವರ್ಧನೆ, ಸಾಹಸಮಯ ಆಟೋಟಗಳಲ್ಲಿ ಆಸಕ್ತಿ ಆರೋಗ್ಯವಿಲ್ಲದ ಜ್ಞಾನದಿಂದ ಪ್ರಯೋಜನವಿಲ್ಲ. ಸುಂದರ ಹಾಗೂ ಸದೃಢ ಶರೀರಕ್ಕೆ ಬೆಲೆ ಕಟ್ಟಲಾಗದು. ಈ ಕುರಿತು ಚಿಂತನೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದರು. ಈ ವೇಳೆ ಹಿರಿಯರಾದ ಶ್ರೀಶೈಲ ತಾಂವಶಿ, ಚಿದಾನಂದ ಮಠಪತಿ, ಬಸವಂತ ಗುಡ್ಡಾಪೂರ, ಮಹಾದೇವ ಹಿಪ್ಪರಗಿ, ಪ್ರಕಾಶ ಕೇರಿ, ಕುಮಾರ ಜಗದೇವ, ಮುತ್ತಪ್ಪ ಗುಡದಿನ್ನಿ, ಬಸಪ್ಪ ಸಿರಿಗೇರಿ, ಸಂಗಗೌಡ ಪಾಟೀಲ್, ಲಚ್ಚಪ್ಪಾ ಪತ್ತಾರ್, ಭೀಮಪ್ಪ ಹಿಪ್ಪರಗಿ, ಸಂಗಯ್ಯ ಮಠ, ಅಪ್ಪಾಸಾಬ ಸಾತಣ್ಣವರ ಸೇರಿದಂತೆ ಜಾತ್ರಾ ಕಮಿಟಿ ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಲ್‌ ತುಂಬದ್ದಕ್ಕೆ ಶಾಸಕರ ಕಚೇರಿಗೆ ವಿದ್ಯುತ್ ಕಟ್
ವಿಪಕ್ಷಗಳಿಂದ ಭಾರತ ಮಾತೆಯ ಭ್ರೂಣ ಹತ್ಯೆ