ತರೀಕೆರೆ: ತಾಲೂಕಿನ ಮುಡುಗೋಡು ಗ್ರಾಮದಲ್ಲಿರುವ ಸಾರ್ವಜನಿಕ ತಂಗುದಾಣ ಮತ್ತು ಸಂತೇಮೈದಾನ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸಿ, ಖಾಸಗಿ ವ್ಯಕ್ತಿಗಳಿಗೆ ಭಾರೀ ಮೊತ್ತದ 2 ನಿವೇಶನಗಳನ್ನು ಖಾತೆ ಮಾಡಿರುವ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.
ತಹಸೀಲ್ದಾರ್ ಆದೇಶದ ಹಕ್ಕುಪತ್ರ ನಕಲು ಮಾಡಲಾಗಿದೆ. ಕಳೆದ 35 ವರ್ಷಗಳಿಂದ ಸಂತೇ ಮೈದಾನ ಎಂದು ನಮೂದಾಗಿದ್ದ ಜಾಗದಲ್ಲಿ ಖಾತೆ ಮಾಡಿ ಲಕ್ಷಾಂತರ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕ್ಷೇತ್ರದಲ್ಲಿ ಶಾಸಕರು ನಾಪತ್ತೆಯಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಶಾಸಕರ ಬದಲಿಗೆ ಅವರ ಕುಟುಂಬದವರು ಹಾಜರಾಗುತ್ತಿದ್ದು, ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಕರು ಯಾರು ಎಂಬುದಕ್ಕೆ ಸ್ಪಷ್ಟನೆ ನೀಡಬೇಕಿದೆ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ಎಲ್.ರಮೇಶ್, ಕೆ.ಆರ್. ಆನಂದಪ್ಪ, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಶಶಿಕುಮಾರ್, ಗುಳ್ಳದಮನೆ ವಸಂತ ಕುಮಾರ್, ರಾಜೇಶ್ವರಿ ರಾಜಶೇಖರ್, ರೇಣುಕಪ್ಪ ಧನಪಾಲ್, ಬೇಲೇನಹಳ್ಳಿ ಸೋಮಶೇಖರ್, ಶಿವಮೂರ್ತಿ ಹಾಜರಿದ್ದರು.
14ಕೆಟಿಆರ್.ಕೆ.8ಃ