ಗಾಂಜಾ ದಂಧೆ ಮಾಡುತ್ತಿದ್ದ ನಕಲಿ ಪತ್ರಕರ್ತನ ಬಂಧನ

KannadaprabhaNewsNetwork |  
Published : Feb 07, 2026, 01:30 AM IST
6ಎಚ್ಎಸ್ಎನ್10 :  | Kannada Prabha

ಸಾರಾಂಶ

ತಾಲೂಕಿನ ಮಡಿವಾಳ ಗ್ರಾಮದ 27 ವರ್ಷದ ಮುನಿರಾಜು ಅಲಿಯಾಸ್‌ ಟೈಗರ್ ಮುನಿರಾಜು ಎಂಬಾತ ಬುಲೆರೋ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದನು.

ಮಾಲೂರು: ಪತ್ರಕರ್ತನ ಸೋಗಿನಲ್ಲಿ ಗಾಂಜಾ ದಂಧೆ ಮತ್ತು ವಸೂಲಿ ಮಾಡುತ್ತಿದ್ದ ಮುನಿರಾಜು ಅಲಿಯಾಸ್‌ ಟೈಗರ್ ಮುನಿರಾಜು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿದ್ದಾರೆ.ತಾಲೂಕಿನ ಮಡಿವಾಳ ಗ್ರಾಮದ 27 ವರ್ಷದ ಮುನಿರಾಜು ಅಲಿಯಾಸ್‌ ಟೈಗರ್ ಮುನಿರಾಜು ಎಂಬಾತ ಬುಲೆರೋ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಮಾಲೂರು ಪೊಲೀಸ್ ಇನ್‌ಸ್ಪೆಕರ್ ರಾಮಪ್ಪ ಬಿ. ಗುತ್ತೆರ್ ನೇತೃತ್ವದ ತಂಡ ಮುನಿರಾಜು ಸೇರಿ ಒಟ್ಟು 3 ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ 50 ಸಾವಿರ ಬೆಲೆಬಾಳುವ 520 ಗ್ರಾಂ ಒಣ ಗಾಂಜಾ ಮತ್ತು ಬುಲೆರೋ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿ ಮಡಿವಾಳ ಗ್ರಾಮದ ಮುನಿರಾಜು ತಾನು ದಿನಪತ್ರಿಕೆ ಮತ್ತು ರಾಷ್ಟ್ರಧ್ವನಿ ಚಾನಲ್ ವರದಿಗಾರ ಎಂದು ಹಲವೆಡೆ ಹಣ ವಸೂಲಿ ಮಾಡುತ್ತಿದ್ದ ಎಂಬ ಆರೋಪ ಸಹ ಕೇಳಿಬಂದಿದೆ. ಪ್ರಕರಣ ಪತ್ತೆಗೆ ಪಿಎಸ್‌ಐ ಶಾಂತಮ್ಮ, ಎಎಸ್‌ಐ ರೇಣುಪ್ರಸಾದ್, ಪೊಲೀಸ್ ಕಾನ್‌ಸ್ಟೇಬಲ್ ಮುರಳಿ, ನಾಗರಾಜ್ ಪೂಜಾರ್, ಶೃತಿ, ತಳವಾರ್, ಚಾಲಕ ಅಂಜಿನಪ್ಪ ಕಾರ್ಯನಿರ್ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು