ಧಾನ್ಯದಲ್ಲಿ ಕೇಂದ್ರ ಸಚಿವ ಜೋಷಿ ಚಿತ್ರ ಬಿಡಿಸಿದ ಅಭಿಮಾನಿ

KannadaprabhaNewsNetwork |  
Published : Jan 13, 2026, 03:30 AM IST
ಧಾನ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚಿತ್ರ ಬಿಡಿಸಿದ ಅಭಿಮಾ | Kannada Prabha

ಸಾರಾಂಶ

ಬಾಗಲಕೋಟೆ ತಾಲೂಕಿನ ರಾಂಪುರದ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಧಾನ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಚಿತ್ರ ಬಿಡಿಸಿ ಅಭಿಮಾನ ಮೆರದಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ತಾಲೂಕಿನ ರಾಂಪುರದ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಧಾನ್ಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಚಿತ್ರ ಬಿಡಿಸಿ ಅಭಿಮಾನ ಮೆರದಿದ್ದಾರೆ. ತನ್ನ ಫೇಸ್ ಬುಕ್‌ ಪೇಜ್‌ನಲ್ಲಿ ಈ ಚಿತ್ರ ರಚನಾ ದೃಶ್ಯ ಹಂಚಿಕೊಂಡ ಸಚಿವ ಪ್ರಹ್ಲಾದ್ ಜೋಷಿ ಅವರು, ಹೆಸರು, ತೊಗರಿ ಬೇಳೆ, ಮಡಿಕೆ ಕಾಳು, ಸಾಸಿವೆ ಕಾಳು ಬಳಸಿ ಕೇಂದ್ರ ಸಚಿವರ ಸುಂದರ ಭಾವಚಿತ್ರ ರಚನೆ ಮಾಡಿರುವ ಚಿತ್ರಕಲಾವಿದ ಕೆಂಚಪ್ಪ ಬಡಿಗೇರ ಅವರು ಅಭಿಮಾನ, ಪ್ರೀತಿಯಿಂದ ಸೃಜನಾತ್ಮಕವಾಗಿ ನನ್ನ ಭಾವಚಿತ್ರ ಬಿಡಿಸಿದ್ದಕ್ಕೆ ಅಭಿನಂದನೆಗಳು ಎಂದು ಸಚಿವರು ಬರೆದುಕೊಂಡಿದ್ದಾರೆ.

ಕೆಂಚಪ್ಪ ಬಡಿಗೇರ ಅವರು ಕಲಾಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಲಾವಿದರಾಗಿದ್ದು, ಇವರ ಏಕವ್ಯಕ್ತಿ, ಗುಂಪು ಚಿತ್ರಕಲಾ ಪ್ರದರ್ಶನಗಳು, ಕಾರ್ಯಾಗಾರಗಳು, ಉತ್ಸವಗಳು, ಅನೇಕ ಸಭೆ ಸಮಾರಂಭಗಳಲ್ಲಿ ಪ್ರದರ್ಶನಗೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ಚಿತ್ರ ಹಾಗೂ ಶಿಲ್ಪಕಲೆಗಳಲ್ಲಿ ಎರಡರಲ್ಲೂ ಪರಿಣತಿ ಹೊಂದಿದ ಅವರು, ಕಲ್ಲು, ಕಟ್ಟಿಗೆ, ಸಿಮೆಂಟ್, ಫೈಬರ್, ಲೋಹಗಳು ಹಾಗೂ ಇತ್ಯಾದಿ ಮಾಧ್ಯಮ ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ