ತಂಬಾಕು ಬಿಟ್ಟಾಕಿ ಬಂಗಾರದಂತ ‘ರೇಷ್ಮೆ’ ಬೆಳೆದ ರೈತ ಸುರೇಶ್‌

KannadaprabhaNewsNetwork |  
Published : May 28, 2025, 11:46 PM IST
ಸುರೇಶ್ 3 | Kannada Prabha

ಸಾರಾಂಶ

ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯುತ್ತಿದ್ದರು. ಮೂರು ವರ್ಷಗಳ ಹಿಂದೆ ಅದನ್ನು ಬಿಟ್ಟು. ರೇಷ್ಮೆ ಬೆಳೆಯುತ್ತಿದ್ದಾರೆ. ಇದಲ್ಲದೇ 600 ಅಡಕೆ ಮರಗಳಿವೆ. 8 ಮಹಾಗನಿ ಮರಗಳಿವೆ. ಹೊಸದಾಗಿ 200 ಸಸಿಗಳನ್ನು ನೆಡಲಾಗಿದೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಪಿರಿಯಾಪಟ್ಟಣ ತಾಲೂಕು ಉತ್ತೇನಹಳ್ಳಿಯ ಸುರೇಶ್‌ ರೇಷ್ಮೆ ಬೆಳೆಯಲ್ಲಿ ವಾರ್ಷಿಕ 14 ಲಕ್ಷ ರು. ಸಂಪಾದಿಸುತ್ತಿದ್ದಾರೆ. ಸುರೇಶ್‌ ಅವರ ತಾಯಿಯ ತಮ್ಮನ ಹೆಂಡತಿ (ಅತ್ತೆ) ಭಾಗ್ಯ ಪರಮೇಶ್ವರ ಅವರಿಗೆ ಮೂರು ಎಕರೆ ಜಮೀನಿದೆ. ಪರಮೇಶ್ವರ ಅವರ ನಿಧನಾನಂತರ ಸುರೇಶ್‌ ಅವರೇ ಈ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಜಮೀನಿನಲ್ಲಿ ಒಂದು ಕೊಳವೆ ಬಾವಿ ಇದೆ. ಪ್ರಮುಖವಾಗಿ ವಾಣಿಜ್ಯ ಬೆಳೆಯಾದ ರೇಷ್ಮೆ ಬೆಳೆಯುತ್ತಾರೆ. ವಾರ್ಷಿಕ ಎಂಟು ಬೆಳೆ ತೆಗೆಯುತ್ತಾರೆ. ಪ್ರತಿ ಬೆಳೆಗೆ 300 ಮೊಟ್ಟೆಗಳಿಂದ 250 ಕೆ.ಜಿ.ವರೆಗೂ ರೇಷ್ಮೆಗೂಡು ಬರುತ್ತದೆ. ಮೈಸೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ, ಪ್ರತಿ ಬೆಳೆಗೆ 1.5 ರಿಂದ 2 ಲಕ್ಷ ರು.ವರೆಗೆ ಆದಾಯವಿದೆ. ಪ್ರತಿ ಬೆಳೆಗೆ 30-40 ಸಾವಿರ ರು. ಖರ್ಚು ಕೂಡ ಇದೆ.

ಇವರು ಶುಂಠಿಯನ್ನು ಬೆಳೆಯುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತವಾಗಿದೆ. ಇವರು ಮೊದಲು ಮತ್ತೊಂದು ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯುತ್ತಿದ್ದರು. ಮೂರು ವರ್ಷಗಳ ಹಿಂದೆ ಅದನ್ನು ಬಿಟ್ಟು. ರೇಷ್ಮೆ ಬೆಳೆಯುತ್ತಿದ್ದಾರೆ. ಇದಲ್ಲದೇ 600 ಅಡಕೆ ಮರಗಳಿವೆ. 8 ಮಹಾಗನಿ ಮರಗಳಿವೆ. ಹೊಸದಾಗಿ 200 ಸಸಿಗಳನ್ನು ನೆಡಲಾಗಿದೆ.

ರೇಷ್ಮೆ ಬೆಳೆಯ ಸಾಧನೆಗಾಗಿ 2023ರ ರೈತ ದಸರಾದಲ್ಲಿ ಭಾಗ್ಯ ಪರಮೇಶ್ವರ ಅವರನ್ನು ಸನ್ಮಾನಿಸಲಾಗಿದೆ.

ಸಂಪರ್ಕ ವಿಳಾಸ

ಸುರೇಶ್‌ ಬಿನ್‌ ಲೇಟ್‌ ವೀರಭದ್ರಪ್ಪ

ಉತ್ತೇನಹಳ್ಳಿ

ಪಿರಿಯಾಪಟ್ಟಣ ತಾಲೂಕು

ಮೈಸೂರು ಜಿಲ್ಲೆ

ಮೊ. 98860 84511

ಕೃಷಿ ಒಂದೇ ಅಲ್ಲ. ಎಲ್ಲಾ ಕೆಲಸಗಳು ಶ್ರಮದಾಯಕವೇ. ಸರಿಯಾಗಿ ಮಾಡಿದರೆ ಕೃಷಿಯಿಂದ ಲಾಭವಿದೆ.

-ಸುರೇಶ್, ಉತ್ತೇನಹಳ್ಳಿನರಳಾಪುರದ ಜಮೀನಿನಲ್ಲಿ ಸಮಗ್ರ ಬೆಳೆ

ಸುರೇಶ್‌ ಅವರಿಗೆ ನರಳಾಪುರದಲ್ಲಿ 11 ಎಕರೆ ಜಮೀನಿದೆ. ಅಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಅಡಕೆ, ತೆಂಗು, ಕಾಫಿ ಪ್ರಮುಖ ಬೆಳೆಗಳು. ಅಲ್ಲಿ ವಾರ್ಷಿಕವಾಗಿ 15 ಲಕ್ಷ ರು.ವರೆಗೆ ಆದಾಯವಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ