ಗೋಮಾಳ ಜಮೀನು ಮಾರಾಟ ವಿರೋಧಿಸಿ ರೈತರ ಮನವಿ

KannadaprabhaNewsNetwork |  
Published : Oct 09, 2026, 02:15 AM IST
ಗೊಜನೂರು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಐತಿಹಾಸಿಕ ಮೊಫತ್ ಗಾಯರಾಣ (ಗೋಮಾಳ) ಸರ್ಕಾರಿ ಗುಡ್ಡದ ಜಮೀನನ್ನು ಖಾಸಗಿ ಕಂಪನಿಗೆ ಶಾಶ್ವತವಾಗಿ ಮಾರಾಟ ಮಾಡಲು ಮುಂದಾಗಿರುವ ಕಂದಾಯ ಇಲಾಖೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರು ಹಾಗೂ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಐತಿಹಾಸಿಕ ಮೊಫತ್ ಗಾಯರಾಣ (ಗೋಮಾಳ) ಸರ್ಕಾರಿ ಗುಡ್ಡದ ಜಮೀನನ್ನು ಖಾಸಗಿ ಕಂಪನಿಗೆ ಶಾಶ್ವತವಾಗಿ ಮಾರಾಟ ಮಾಡಲು ಮುಂದಾಗಿರುವ ಕಂದಾಯ ಇಲಾಖೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರು ಹಾಗೂ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗೊಜನೂರು ಗ್ರಾಮವು ಪಶುಸಂಗೋಪನೆಗೆ ಹೆಸರುವಾಸಿಯಾಗಿದ್ದು, ಜಾನುವಾರುಗಳ ಮೇವಿಗಾಗಿ ಗ್ರಾಮದ ಸರ್ವೆ ನಂ. 214/1 ರಲ್ಲಿನ 207 ಎಕರೆ 21 ಗುಂಟೆ ಹಾಗೂ ಸರ್ವೆ ನಂ. 215 ರಲ್ಲಿನ 33 ಎಕರೆ 01 ಗುಂಟೆ ಜಮೀನನ್ನು ಗೋಮಾಳವೆಂದೇ ಕಾಯ್ದಿರಿಸಲಾಗಿದೆ. ಪಹಣಿ ಪತ್ರಿಕೆಯಲ್ಲೂ ಇದು ಸ್ಪಷ್ಟವಾಗಿ ನಮೂದಾಗಿದೆ. ಈ ಜಮೀನಿನಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 9 ಎಕರೆ 27 ಗುಂಟೆ, ಶಿಕ್ಷಣ ಇಲಾಖೆಗೆ 5 ಎಕರೆ ಹಾಗೂ ನಿವೇಶನ ರಹಿತರಿಗೆ 4 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಉಳಿದ ಜಾಗದಲ್ಲಿ ಈ ಹಿಂದೆ ಪವನ ವಿದ್ಯುತ್ ಘಟಕ ಸ್ಥಾಪನೆಗಾಗಿ ಮೈಸೂರು ಮರ್ಚಂಟೈಲ್ ಕೋ. ಲಿಮಿಟೆಡ್‌ಗೆ ಸರ್ವೆ ನಂ. 214/1 ರಲ್ಲಿ 4 ಎಕರೆ ಹಾಗೂ ಸರ್ವೆ ನಂ. 215 ರಲ್ಲಿ 16 ಎಕರೆ 31 ಗುಂಟೆ (ಒಟ್ಟು 20 ಎಕರೆ 31 ಗುಂಟೆ) ಜಮೀನನ್ನು ಲೀಸ್ ನೀಡಲಾಗಿತ್ತು. ಆದರೆ, ಈಗ ಉಪವಿಭಾಗಾಧಿಕಾರಿಗಳ ಕಚೇರಿಯ ಆದೇಶದಂತೆ ಈ ಜಮೀನನ್ನು ಅದೇ ಖಾಸಗಿ ಕಂಪನಿಗೆ ಪೂರ್ಣ ಪ್ರಮಾಣದಲ್ಲಿ ಮಾರಾಟ (ಖರೀದಿಗೆ ನೀಡಲು) ಮಾಡಲು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಸ್ತಾಂತರ ಪ್ರಕ್ರಿಯೆಗೆ ಸಿದ್ಧತೆ ನಡೆಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿಂದೆ ಲೀಸ್ ನೀಡುವ ಸಂದರ್ಭದಲ್ಲೂ ಸಾರ್ವಜನಿಕರ ಅಭಿಪ್ರಾಯವಾಗಲಿ ಅಥವಾ ಗ್ರಾಪಂ ನಿರ್ಣಯವಾಗಲಿ ಪಡೆದುಕೊಂಡಿಲ್ಲ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 67 ಹಾಗೂ 69ಎ ಅನ್ವಯ ಬಹಿರಂಗ ಹರಾಜು ನಡೆಸದೆ, ಕಾನೂನು ಬಾಹಿರವಾಗಿ ಖಾಸಗಿ ವಾಣಿಜ್ಯ ಲಾಭಕ್ಕಾಗಿ ಸರ್ಕಾರಿ ಜಮೀನು ನೀಡಲಾಗಿದೆ. ಆದ್ದರಿಂದ ಈ ಜಮೀನಿನ ಗುತ್ತಿಗೆಯನ್ನು ನವೀಕರಿಸಬಾರದು ಮತ್ತು ಮಾರಾಟ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಿ, ಜಾನುವಾರುಗಳ ಮುಕ್ತ ಮೇವಿಗಾಗಿ ಗೋಮಾಳವನ್ನು ಉಳಿಸಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುರಿನಕಟ್ಟೆ ಪ್ರಕರಣದಲ್ಲಿ ಪೊಲೀಸರ ದ್ವಂದ್ವ ನೀತಿಗೆ ಮಾಜಿ ಸಚಿವ ಶಿವಾನಂದ ನಾಯ್ಕ ಆಕ್ಷೇಪ
ಕುಷ್ಟಗಿ ಬಿಇಒ ಕಚೇರಿಯಲ್ಲಿ ₹74 ಲಕ್ಷದ ಅಕ್ರಮದ ಆರೋಪ