ಬೆಳೆಗೆ ಸೂಕ್ತ ಬೆಲೆ ಇಲ್ಲದಿದ್ದರೆ ರೈತರಿಗೆ ಸಂಕಷ್ಟ

KannadaprabhaNewsNetwork |  
Published : Sep 17, 2025, 01:06 AM IST
ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಬೆಳೆಗಾರರ ಶ್ರಮಕ್ಕೆ ಸೂಕ್ತ ಬೆಲೆ ಸಿಗದಿದ್ದರೆ ರೈತರ ಮತ್ತು ವರ್ತಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು ತಿಳಿಸಿದರು. ಶುಂಠಿ ಕೃಷಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಜಗತ್ತಿನಲ್ಲಿ ಬೆಳೆಯುವ ಶುಂಠಿಯ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 30ರಷ್ಟು ಭಾರತದಲ್ಲಿ ಉತ್ಪಾದನೆಯಾಗುತ್ತದೆ, ಇದು ವಿಶೇಷ ಸಂಗತಿಯಾಗಿದೆ. ಶುಂಠಿ ಬೆಳೆಗಾರರು ಮತ್ತು ವರ್ತಕರಿಗೆ ವಿಶೇಷ ಸೌಲಭ್ಯಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಬೆಳೆಗಾರರ ಶ್ರಮಕ್ಕೆ ಸೂಕ್ತ ಬೆಲೆ ಸಿಗದಿದ್ದರೆ ರೈತರ ಮತ್ತು ವರ್ತಕರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಾಗರ್ ಬಾಬು ತಿಳಿಸಿದರು.ನಗರದ ಬೇಲೂರು ರಸ್ತೆಯ ಪರಿಣಿತ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಬೆಳೆಗೆ ಬೆಲೆ ಸ್ಥಿರತೆಗಾಗಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶುಂಠಿ ಕೃಷಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಜಗತ್ತಿನಲ್ಲಿ ಬೆಳೆಯುವ ಶುಂಠಿಯ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ. 30ರಷ್ಟು ಭಾರತದಲ್ಲಿ ಉತ್ಪಾದನೆಯಾಗುತ್ತದೆ, ಇದು ವಿಶೇಷ ಸಂಗತಿಯಾಗಿದೆ. ಶುಂಠಿ ಬೆಳೆಗಾರರು ಮತ್ತು ವರ್ತಕರಿಗೆ ವಿಶೇಷ ಸೌಲಭ್ಯಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಅವರು ಹೇಳಿದರು.

ಶುಂಠಿ ಮಾರುಕಟ್ಟೆ ಉತ್ತಮವಾಗಿದ್ದರೆ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. ಇದರಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತ ಮಲ್ನಾಡ್ ಮೆಹಬೂಬ್ ಮಾತನಾಡಿ, ಸಂಘದ "ಶುಂಠಿಯ ನೆರಳಲ್ಲಿ ಬದುಕಿನ ಪಯಣ ಸ್ಮರಣ " ಸಂಚಿಕೆ ಉತ್ತಮವಾಗಿದೆ. ರೈತರು, ವಿಶೇಷವಾಗಿ ಶುಂಠಿ ಬೆಳೆಗಾರರು ಎದುರಿಸುವ ಹೋರಾಟದ ಕಥೆಗಳು ಸಾಹಿತ್ಯದ ಭಾಗವಾಗಿವೆ ಎಂದರು.ಉದ್ಯಮಿ ಚಂದ್ರಶೇಖರ್ ಡಿ.ಪಿ. ಮಾತನಾಡಿ, ಶುಂಠಿ ಬೆಳೆಯುವುದು ಸುಲಭವಲ್ಲ, ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾನು ಸಹ ಈ ಕೃಷಿಯಲ್ಲಿ ತೊಡಗಿದ್ದರೂ ಸಂಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ರೈತರು ಮತ್ತು ವರ್ತಕರು ಸಂಘಟಿತರಾದರೆ ಆರ್ಥಿಕವಾಗಿ ಸಫಲರಾಗಬಹುದು ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಹಫೀಜ್ (ಮುನ್ನ ಪಿ.ಜಿ.ಟಿ.) ಮಾತನಾಡಿ, ಬೆಳೆಗಾರರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಲು ಸಂಘಟನೆಯ ಬಲವೇ ಮುಖ್ಯ. ಒಗ್ಗೂಡಿದಾಗ ಮಾತ್ರ ಹಕ್ಕುಗಳಿಗಾಗಿ ಹೋರಾಡಲು ಸಾಧ್ಯ. ಸಂಘವನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.ರಾಜ್ಯ ಗೌರವಾಧ್ಯಕ್ಷ ಸೈಯದ್ ಅಹಮದ್ ಪಾಶ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ವಿಶ್ವನಾಥ್ ಎಂ.ಟಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಅನಿಲ್ ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಅನೀಸ್ ಅಹಮದ್, ಜಾವೀದ್ (ಬೇಲೂರು), ಧರ್ಮೇಶ್ ಎಂ.ಬಿ., ಡಿ.ಎಂ.ಸಿ. ದಸ್ತಗೀರ್, ತೌಫೀಕ್ ಟಿ.ಜಿ.ಟಿ., ಎಹತೇಶಾಮ್, ಜನಾರ್ಧನ್, ರೇವಣ್ಣ (ಅರಕಲಗೂಡು) ಸೇರಿದಂತೆ ಇತರ ಅತಿಥಿಗಳು ಉಪಸ್ಥಿತರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ