ಫಕ್ರುದ್ದೀನ ಎಂ ಎನ್
ನವಲಗುಂದ:
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಬೆಳೆನಷ್ಟ ಅನುಭವಿಸಿದ ಬಹುತೇಕ ರೈತರಿಗೆ ಬೆಳೆಹಾನಿ ಪರಿಹಾರ ಬಾರದೇ ತಾಲೂಕು ಕಚೇರಿಗೆ ಅಲೆಯುವಂತಾಗಿದೆ. ಖುಷ್ಕಿ, ನೀರಾವರಿ ಪ್ರದೇಶದಲ್ಲಿ ಕಂದಾಯ, ಕೃಷಿ ಅಧಿಕಾರಿಗಳು ಜಂಟಿ ಬೆಳೆ ಸಮೀಕ್ಷೆ ನಡೆಸಿ 25,217 ರೈತರ ಬೆಳೆನಷ್ಟವಾಗಿದೆ ಎಂದು ತಾಲೂಕು ಆಡಳಿತಕ್ಕೆ ವರದಿ ನೀಡಲಾಗಿತ್ತು. ಅದರಲ್ಲಿ 19,784 ರೈತರಿಗೆ ಪರಿಹಾರ ಸಿಕ್ಕಿದ್ದು, ಇನ್ನುಳಿದ 5433 ರೈತರು ಪರಿಹಾರಕ್ಕಾಗಿ ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ನಿಯಮ ಪ್ರಕಾರದಂತೆ ಖುಷ್ಕಿ ಪ್ರದೇಶ ಒಂದು ಹೆಕ್ಟೇರ್‌ಗೆ ₹ 8500, ನೀರಾವರಿ ಪ್ರದೇಶಕ್ಕೆ ₹17000 ಪರಿಹಾರ ಪೋಷಿಸಿದೆ. ಪಟ್ಟಣ ಸೇರಿದಂತೆ ಮೊರಬ ಹೋಬಳಿ 25,217 ರೈತರ ಜಮೀನುಗಳ ಸಮೀಕ್ಷೆ ಮಾಡಲಾಗಿದೆ. ಪಹಣಿಗೆ ಆಧಾರ್ ಕಾರ್ಡ್ ಲಿಂಕ್, ಎಫ್‌ಐಡಿ, ಎನ್‌ಪಿಐ ಲಿಂಕ್ ಆಗದ ಹಿನ್ನೆಲೆ ಪರಿಹಾರ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.
ಘೋಷಣೆಗೆ ಮಾತ್ರ ಸೀಮಿತ:
ದೀಪಾವಳಿ ಹಬ್ಬದ ಮುನ್ನವೇ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ನಮ್ಮ ನಿರೀಕ್ಷೆ ಹುಸಿಯಾಗಿದೆ. ʼನುಡಿದಂತೆ ನಡೆಯುತ್ತೇವೆʼ ಎಂದು ಹೇಳುವ ಸರ್ಕಾರ ಶೀಘ್ರದಲ್ಲಿ ರೈತರ ಖಾತೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಪಾವತಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯʼ ಎಂದು ರೈತ ಹೋರಾಟಗಾರ ಸುಭಾಸಚಂದ್ರಗೌಡ ಪಾಟೀಲ ಎಚ್ಚರಿಸಿದ್ದಾರೆ.
ತಾಲೂಕಿನಾದ್ಯಂತ ಸಮೀಕ್ಷೆ ಕಾರ್ಯ ಸಂಪೂರ್ಣ ಮುಗಿದಿದೆ. ತಾಲೂಕಿನಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಹಣ ಜಮೆಯಾಗಿಲ್ಲ. ಈ ವಾರದಲ್ಲಿ ಹಂತ-ಹಂತವಾಗಿ ಎಲ್ಲ ರೈತರ ಖಾತೆಗೆ ಎನ್‌ಡಿಆರ್‌ಎಫ್ ಪರಿಹಾರ ಹಣ ಜಮೆ ಆಗುತ್ತದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಲೋಕನಾಥ ಹೆಬಸೂರ, ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟಗಾರ 2025ರಲ್ಲಿ ಸುರಿದ ಮಳೆಯಿಂದ ಬೆಳೆ ನಷ್ಟವಾದ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಜಮೆಯಾಗಿದೆ. ಕೆಲ ರೈತರ ದಾಖಲಾತಿ ಸರಿಯಿಲ್ಲದ ಕಾರಣ ಅಂತಹವರಿಗೆ ಹಣ ಬಂದಿಲ್ಲ. ಈ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.