ಹೈನುಗಾರಿಕೆ ಆರಂಭಿಸಿದರೇ ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಮುಖ್ಯವಾಹಿನಿಯಲ್ಲಿಕಾಣಿಸಿಕೊಳ್ಳಬಹುದು. ರೈತರು ತರಬೇತಿ ನೀಡುವ ದಿನಾಂಕವನ್ನು ಗೊತ್ತುಪಡಿಸಿದಲ್ಲಿ ಹೈನುಗಾರಿಕೆ ತರಬೇತಿಯನ್ನು ಪಡೆದು ಸಾಕಾಣಿಕೆ ಹಾಗೂ ಮೇವು ನಿರ್ವಹಣೆಯ ಬಗ್ಗೆ ಸಂಪೂರ್ಣ ತಿಳಿವಳಿಕೆ ಪಡೆದರೇ ಯಶಸ್ವಿ ರೈತನಾಗಬಹುದು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಹೈನುಗಾರಿಕೆಯಲ್ಲಿ ತಿಳಿವಳಿಕೆ ಪಡೆಯಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಸಹಕಾರವಾಗಲಿದೆ. ರೈತಾಪಿ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಮುಖ್ಯ ಪಶು ವೈದ್ಯಾಧಿಕಾರಿ ಕಚೇರಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಜೊತೆಗೆ ಹೈನುಗಾರಿಕೆ ಮುಖ್ಯ ಕಸುಬಾಗಿದೆ. ಆಧುನಿಕ ತಕ್ಕಂತೆ ರಾಸುಗಳ ಸಾಕಾಣಿಕೆಯಲ್ಲಿ ಇಂದಿಗೂ ರೈತರು ವಿಫಲರಾಗಿದ್ದಾರೆ ಎಂದರು.
ಕೋಳಿ, ಮೇಕೆ, ಮೊಲ ಸೇರಿದಂತೆ ಇತರೆ ರಾಸುಗಳನ್ನು ಯಾವ ರೀತಿ ಸಾಕಾಣಿಕೆ ಮಾಡಬೇಕೆಂದು ತಿಳಿಸುವ ಉದ್ದೇಶದಿಂದ ಸರ್ಕಾರದಿಂದ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.
ಹೈನುಗಾರಿಕೆ ಆರಂಭಿಸಿದರೇ ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಮುಖ್ಯವಾಹಿನಿಯಲ್ಲಿಕಾಣಿಸಿಕೊಳ್ಳಬಹುದು. ರೈತರು ತರಬೇತಿ ನೀಡುವ ದಿನಾಂಕವನ್ನು ಗೊತ್ತುಪಡಿಸಿದಲ್ಲಿ ಹೈನುಗಾರಿಕೆ ತರಬೇತಿಯನ್ನು ಪಡೆದು ಸಾಕಾಣಿಕೆ ಹಾಗೂ ಮೇವು ನಿರ್ವಹಣೆಯ ಬಗ್ಗೆ ಸಂಪೂರ್ಣ ತಿಳಿವಳಿಕೆ ಪಡೆದರೇ ಯಶಸ್ವಿ ರೈತನಾಗಬಹುದೆಂದು ಹೇಳಿದರು.
ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಚಿಕ್ಕಲಿಂಗಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಆರ್. ಮಂಜುನಾಥ್, ಮುಖ್ಯ ಪಶು ವೈದ್ಯಾಧಿಕಾರಿ ಕೃಷ್ಣಪ್ಪ, ನಿವೃತ್ತ ಅಧಿಕಾರಿ ಚಂದ್ರಶೇಖರ್ ಮೂರ್ತಿ, ಡಾ.ರಾಮಚಂದ್ರು, ಪುಷ್ಪ, ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿರಾಜು, ಮುಖಂಡರಾದ ಕೆ.ಜೆ ದೇವರಾಜು, ಮಲ್ಲಯ್ಯ, ಪುರಸಭೆ ಸದಸ್ಯರಾದ ನೂರುಲ್ಲಾ, ಆನಂದ್, ಬಸವರಾಜು, ಸಂತೋಷ್ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.