ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರವಿವಾರ ರಸ್ತೆ ಅಗಲಿಕರಣ ಹಾಗೂ ಸುಧಾರಣೆ ಮತ್ತು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಅವರು ಮಾತನಾಡಿದರು. ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳೆ ಅವರಲ್ಲಿ ಮನವಿ ಮಾಡಿದಾಗ ₹ 27 ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದರು.ವಾರ್ಡ್ ನಿವಾಸಿ ರವಿ ಬಮ್ಮಣ್ಣಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಸಾಹೆಬಣ್ಣ ಪುರದಾಳ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಅರವಿಂದ ಹಂಗರಗಿ, ರಮೇಶ ಹೂಗಾರ, ಸಲೀಂ ಜುಮನಾಳ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಸದಸ್ಯರಾದ ಬಸವರಾಜ ಯರನಾಳ, ಸಿದ್ದು ಮಲ್ಲೇದ, ಬಸವರಾಜ ಶೀಲವಂತ, ಅಮರೇಶ ಚೌಗಲೇ, ಜಿಲ್ಲಾ ಕೆಡಿಪಿ ಸದಸ್ಯ ನೂರಹ್ಮದ ಅತ್ತಾರ, ಸದಾಶಿವ ಕುಂಬಾರ, ಶ್ರೀಮಂತ ಮಲ್ಲೇದ, ಸುಮಂಗಲಾ ಬಮ್ಮಣ್ಣಿ, ಶರಣಮ್ಮ ನಾಯಕ, ಪರಶುರಾಮ ಕಾಂಬಳೆ ಸೇರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಸದಸ್ಯರು ಇದ್ದರು.