ಸರ್ಕಾರಕ್ಕೆ ರೈತರು ಬಾರುಕೋಲು ಏಟು ಕೊಡಬೇಕಿದೆ: ಎನ್. ರವಿಕುಮಾರ

KannadaprabhaNewsNetwork |  
Published : Jul 31, 2026, 03:00 AM IST
ದೇವರಹಿಪ್ಪರಗಿ ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ಬಿಜೆಪಿ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್‌ ಆರೋಪಿಸಿದರು.

ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಆವರಿಸಿದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿದೆ. ಈ ಸರ್ಕಾರಕ್ಕೆ ರೈತರ ಬಾರುಕೋಲು ಏಟು ಬೇಕು, ರಾಜ್ಯ ಬರ ಘೋಷಣೆ ಮಾಡಬೇಕು ಹಾಗೂ ಸಾಲಮನ್ನಾ ಮಾಡಿ, ಎಕರೆ ₹50 ಸಾವಿರ ಪರಿಹಾರ ಒದಗಿಸಬೇಕು, ಬಿಜೆಪಿ ಸರ್ಕಾರ ಇದ್ದಾಗ ಬರ ನಿರ್ವಹಣೆ ಮಾಡಿದ್ದನ್ನು ನೋಡಿ ಕಲಿಯಬೇಕು. 4 ತಿಂಗಳಿಂದ ಯಾವುದೇ ಪಿಂಚಣಿ ನೀಡಿಲ್ಲ, ಈ ಕೆರೆ ಸುಮಾರು 450 ಎಕರೆ ವಿಸ್ತರಣೆ ಹೊಂದಿದೆ ನೀರು ಇಲ್ಲ, ವಾರದಲ್ಲಿ ನೀರು ತುಂಬಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ. ಬರ ಪರಿಹಾರ ನೀಡಲು ಅಧಿವೇಶನದಲ್ಲಿ ಚರ್ಚಿಸಿ ಒತ್ತಾಯಿಸುತ್ತೇನೆ ಎಂದು ಹೇಳಿದರು

ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ(ನಡಹಳ್ಳಿ) ಮಾತನಾಡಿ, ಬರ ವೀಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ವಿ.ಪ ಸದಸ್ಯರಾದ ಹಣಮಂತ ನಿರಾಣಿ, ಶಾಸಕ ರವಿ ಐಹೊಳೆ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಎಸ್.ಕೆ. ಬೆಳ್ಳುಬ್ಬಿ, ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪೂರ,

ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ ಮಾತನಾಡಿ, ಸರ್ಕಾರಕ್ಕೆ ಬರ ನಿರ್ವಹಣೆಗೆ ಸರ್ಕಾರಕ್ಕೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಅವ್ವಣ್ಣ ಗ್ವಾತಗಿ, ಮುಖಂಡರಾದ ಸುರೇಶಗೌಡ ಬಿರಾದಾರ, ಪ್ರಭುಗೌಡ ಬಿರಾದಾರ ಆಸ್ಕಿ, ಶ್ರೀಶೈಲಗೌಡ ಬಿರಾದಾರ, ಈರಣ್ಣ ರಾವೂರ, ಸಿದ್ದು ಬುಳ್ಳಾ, ರಮೇಶ ಮಸಿಬಿನಾಳ, ಬಸವರಾಜ ಕಲ್ಲೂರ, ಸಾಹೇಬಗೌಡ ರೆಡ್ಡಿ, ಅಣ್ಣರಾಯಗೌಡ ಬಿರಾದಾರ, ಶಂಕರಗೌಡ ಕೋಟಿಖಾನಿ, ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಮಂಡಲ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು,ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಿಕೋದ್ಯಮದಲ್ಲಿ ಉದ್ಯೋಗ ಕಸಿದುಕೊಳ್ಳುತ್ತಿರುವ ಎಐ
ಮಹಾವೀರ ಸಹಕಾರಿ ಬ್ಯಾಂಕ್‌ಗೆ ₹4.01 ಕೋಟಿ ಲಾಭ