-ಕಾಳಗಿ ಜೆಸ್ಕಾಂ ಕಚೇರಿ ಎದುರು ಮೃತ ರೈತನ ಶವವಿಟ್ಟು ರೈತರ ಆಕ್ರೋಶ
ಕನ್ನಡಪ್ರಭ ವಾರ್ತೆ ಕಲಬುರಗಿಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ತಗುಲಿ ರೈತ ಮೃತಪಟ ಘಟನೆ ಗುರುವಾರ ಮಧ್ಯಾಹ್ನ3ಕ್ಕೆ ಕಾಳಗಿಯಲ್ಲಿ ನಡೆದಿದ. ಭೀಮಾಶಂಕರ ದೇವಿಂದ್ರಪ್ಪ ಅರನತ್ತಿ ಗೊಟುರ (30) ಮೃತ ದುರ್ದೈವಿ ರೈತ ಎಂದು ತಿಳಿದು ಬಂದಿದೆ.
ಸ್ವಂತ ಒಂದೂವರೆ ಎಕರೆ ಜಮೀನು ಹೊಂದಿರುವ ಮೃತ ರೈತ ಭೀಮಾಶಂಕರ, ತಾನು ಕಡತಿ ಹಾಕಿಕೊಂಡ ಜಮೀನಿನಲ್ಲಿ ಎಡಿ ಹೊಡೆಯುವ ಕಾರ್ಯದಲ್ಲಿ ದ್ದಾಗ ಗೊಟೂರ ಐಪಿ 3ಫೇಸ್ ವೈರ್ ಕಟ್ಟಾಗಿ ಬಿದ್ದಿರುವಲ್ಲಿಯೇ ಎಡಿ ದಿಂಡು ಹೋದ ಪ್ರಯುಕ್ತ ವಿದ್ಯುತ್ ಹಾದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.ಸುದ್ದಿ ತಿಳಿದು ಆಗಮಿಸಿರುವ ರೈತ ಸಂಘಟನೆ ಅವರು ಹಾಗೂ ಗ್ರಾಮಸ್ಥರು, ಸಂಬಂಧಿಕಕರು ಸೇರಿಕೊಂಡು ಕಾಳಗಿ ಜೆಸ್ಕಾಂ ಕಚೇರಿ ಎದುರು ಮೃತ ರೈತನ ಶವವಿಟ್ಟು ತೀವ್ರ ಪ್ರತಿಭಟನೆಗಿಳಿದರು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲವೆಂದು ಪಟ್ಟು ಹಿಡಿದರು.
ಆಕ್ರೋಶಗೊಂಡ ರೈತರು ಎಇಇ ಇಲಿಯಾಸ್ ಅಹ್ಮದ್ ತಂಡದ ಜೇಸ್ಕಾಂ ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಾಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿನ ಪೊಲೀಸ್ ತಂಡ ಪರಿಸ್ಥಿತಿ ತಿಳಿಗೊಳಿಸಿತು.
ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್ ಕಾಳಗಿ ಪ್ರಕರಣ ದಾಖಲಿಸಲಿ ಜೆಸ್ಕಾಂನಿಂದ 5ಲಕ್ಷ ರು. ಮಾನವಿಯತೆ ದೃಷ್ಟಿಯಿಂದ ವೈಯಕ್ತಿಕವಾಗಿ 1ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆಂದು ಗೊತ್ತಾಗಿದೆ.