ಸೇಡಂನಲ್ಲಿ ಮಾದಿಗ ಸಮಾಜಕ್ಕೆ ಚಿತೆಗೂ ಚಿಂತೆ

KannadaprabhaNewsNetwork |  
Published : Aug 08, 2026, 01:30 AM IST
 ಹೀಗಾಗಿ ಇವರಿಗೆ ಚಿತೆಗೂ ಚಿಂತೆ ಕಾಡಲಾರಂಭಿಸಿದೆ. | Kannada Prabha

ಸಾರಾಂಶ

The Madiga community in Sedam is worried about the fire.

ಈ ದುರವಸ್ಥೆಗೆ ಕೊನೆ ಯಾವಾಗ ?

---

-ಮಳೆಗಾಲದಲ್ಲಿ ತುಂಬಿ ಹರಿವ ಕಮಲಾವತಿ ನದಿ ದಾಟಿ ಶವ ಸಂಸ್ಕಾರಕ್ಕೆ ಪರದಾಟ

-----

ಕನ್ನಡಪ್ರಭ ವಾರ್ತೆ ಸೇಡಂ

ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮಾದಿಗ ಸಮಾಜದವರು ಮಳೆಗಾಲದಲ್ಲಿ ಮೃತ ದೇಹಗಳ ಸಂಸ್ಕಾರಕ್ಕೆ ತೀವ್ರ ಚಿಂತೆ ಪಡುವಂತಾಗಿದೆ.

ಈ ಸಮಾಜದವರಿಗೆ ಸೇರಿರುವ ರುದ್ರಭೂಮಿ ಕಮಲಾವತಿ ನದಿಯಾಚೆಗಿದೆ. ಇದರಿಂದಾಗಿ ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ದಾಟಿ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಚಿತೆಗೂ ಚಿಂತೆ ಕಾಡಲಾರಂಭಿಸಿದೆ.

ಈಚೆಗೆ ಸೇಡಂ ಪುರಸಭೆ ಮಾಜಿ ಸದಸ್ಯ ರಾಜು ಕಾಳಗಿಕರ್(42) ನಿಧನ ಹಿನ್ನಲೆ ಕಮಲಾವತಿ ನದಿಯಾಚೆ ಇರುವ ರುದ್ರಭೂಮಿಗೆ ತೆರಳಬೇಕಾದರೆ ಪ್ರಾಣ ಪಣಕ್ಕಿಡಬೇಕಾದಂತಹ ದುಸ್ಥಿತಿ ಕಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮಳೆಯಿಂದಾಗಿ ಸೇಡಂನಲ್ಲಿ ಕಮಲಾವತಿ ನದಿ ತುಂಬಿ ಹರಿಯುತ್ತಿದೆ, ನದಿಯಾಚೆ ಮಾದಿಗ ಸಮಾಜದವರ ರುದ್ರಭೂಮಿ ಇರುವುದರಿಂದ ಮೃತದೇಹ ಟ್ರಾಕ್ಟರ್‌ ಮೂಲಕ ಸಾಗಾಟ ಮಾಡಲಾಗಿದೆ. ಇದೇ ವೇಳೆ ಯುವಕರು ಕುಟುಂಬಸ್ಥರಿಗೆ ಹರಿವ ನೀರನಲ್ಲಿ ನಿಂತು ಕೈ ಕೈ ಹಿಡಿದು ನದಿ ದಾಟಿಸುವಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿರುವ ಕಮಲಾವತಿ ನದಿ ಮಳೆಯಿಂದ ತುಂಬಿ ಹರಿಯುತ್ತಿದೆ. ಮಾದಿಗ ಸಮಾಜದ ರುದ್ರಭೂಮಿ ನದಿಯಾಚೆ ಇದೆ. ಇದರಿಂದಾಗಿ ಮಳೆಗಾಲದ ವೇಳೆ ಬಹಳಷ್ಟು ಸಮಸ್ಯೆ ಎದುರಾಗುತ್ತಿದೆ. ಸೇಡಂನಲ್ಲಿ ನದಿಯಾಚೆಗೆ ಮಾದಿಗ ಸಮಾಜದವರಿಗೆ 3 ಎಕರೆ ರುದ್ರಭೂಮಿ ಇದೆ. ಬೇಸಿಗೆಯಲ್ಲಿ ಈ ತಾಪತ್ರಯ ಇರುವುದಿಲ್ಲವಾದರೂ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಕಾಡುತ್ತಿದೆ.

ಸಮಾಜ ಬಾಂಧವರು ಸಚಿವರನ್ನು ಭೇಟಿ ಮಾಡಿದಾಗ ಸಚಿವ ಡಾ. ಶರಣಪ್ರಕಾಶ ಪಾಟೀಲರು ಇಲ್ಲಿ ₹85 ಲಕ್ಷ ವೆಚ್ಚದಲ್ಲಿ ಸೇತುವೆ ಮಂಜೂರಾತಿ ನೀಡಿದ್ದಾರೆ. ಮಳೆಗಾಲವಾದ್ದರಿಂದ ಸೇತುವೆ ಕೆಲಸ ಶುರುವಾಗಿಲ್ಲ. ಶೀಘ್ರ ಸೇತುವೆ ಕೆಲಸ ಶುರು ಮಾಡಲಾಗುತ್ತಿದೆ ಎಂದು ಸೇಡಂ ಪಿಡಬ್ಲ್ಯೂ ಇಂಜಿನಿಯರ್‌ ವಿಶ್ವನಾಥ ಹೇಳಿದ್ದಾರೆ.

ಸೇಡಂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲರ ಕ್ಷೇತ್ರ. ಮಾದಿಗ ಸಮಾಜದವರ ಬೇಡಿಕೆಗೆ ಸ್ಪಂದಿಸಿ ₹85 ಲಕ್ಷ ರು. ವೆಚ್ಚದ ಸೇತುವೆ ಕಾಮಗಾರಿಗೆ ಮಂಜೂರಾತಿ ನೀಡಿದ್ದರೂ ಕಾಮಗಾರಿ ಆರಂಭ ವಿಳಂಬವಾಗಿದ್ದರಿಂದ ಮಳೆಗಾಲದಲ್ಲಿ ಮಾದಿಗ ಸಮಾಜದವರು ಅಂತ್ಯ ಸಂಸ್ಕಾರಕ್ಕೂ ಪರದಾಡವಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

----------------

ಫೋಟೋ- ಸೇಡಂ ಫೋಟೋ 1, ಸೇಡಂ ಫೋಟೋ 2 ಮತ್ತು ಸೇಡಂ ಫೋಟೋ 3

ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಕಮಲಾವತಿ ನದಿ ಆಚೆಗಿರುವ ಮಾದಿಗ ಸಮಾಜಗ ರುದ್ರಭೂಮಿಗೆ ಮೃತ ದೇಹ ಸಾಗಿಸಲು ಆ ಸಮಾಜದವರು ಪಡುವ ಪಾಡು ಅಷ್ಟಿಷ್ಟಲ್ಲ. ಮಳೆಗಾಲದಲ್ಲಂತೂ ನದಿ ತುಂಬಿ ಹರಿಯುತ್ತಿರುವತ್ತದೆ, ಪ್ರಾಣ ಪಣಕ್ಕಿಟ್ಟೇ ಮೃತದೇಹ ಸಾಗಿಸುವ ಅನಿವಾರ್ಯತೆ ಇಲ್ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಉಪವಾಸ ಸತ್ಯಾಗ್ರಹ: ಸಚಿವ ಅಜಯ್ ಸಿಂಗ್ ಭರವಸೆ
ಎರಡು ದಿನ ಬರ ಪರಿಸ್ಥಿತಿ ಪರಿಶೀಲನೆ, ಸಭೆ