ತೈಲ, ಗೊಬ್ಬರ, ಬಿತ್ತನೆ ಬೀಜ ಬೆಲೆ ಏರಿಕೆಗೆ ರೈತರ ಆಕ್ರೋಶ

KannadaprabhaNewsNetwork |  
Published : May 28, 2026, 01:45 AM IST
೨೬ಕೆಎಲ್‌ಆರ್-೮ದುಬಾರಿಯಾಗಿರುವ ತೈಲ ಅಗತ್ಯ ವಸ್ತುಗಳು, ಎಲ್.ಪಿ.ಜಿ. ಮತ್ತು ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆಯೇರಿಕೆಗೆ ಕಡಿವಾಣ ಹಾಕಿ ಜನ ಸಾಮಾನ್ಯರ ಬದುಕು ರೈತರ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಕೋಲಾರದ ಪಲ್ಲವಿವೃತ್ತದಲ್ಲಿ ಜಾನುವಾರುಗಳ ಸಮೇತ ಹೋರಾಟ ಮಾಡುತ್ತಿರುವುದು. | Kannada Prabha

ಸಾರಾಂಶ

ತೈಲ ಬೆಲೆಯೇರಿಕೆಯಿಂದ ಕೃಷಿ-ಶಿಕ್ಷಣ ಕ್ಷೇತ್ರದ ಮೇಲೂ ಹೆಚ್ಚಿನ ಪ್ರಭಾವ ಬೀರಿರುವ ಜೊತೆಗೆ ದುಡಿಯುವ ಕೈಗೆ ಕೆಲಸ ಕೊಡಬೇಕಾದ ಕೇಂದ್ರ-ರಾಜ್ಯ ಸರ್ಕಾರ ನರೇಗಾ ಮತ್ತು ಜೀರಾಮ್ ಜೀ ಮಧ್ಯೆ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಅನಾಥವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರತೈಲ, ಎಲ್.ಪಿ.ಜಿ, ರಸಗೊಬ್ಬರ, ಬಿತ್ತನೆ ಬೀಜ ಬೆಲೆಯೇರಿಕೆಗೆ ಕಡಿವಾಣ ಹಾಕಿ ಜನಸಾಮಾನ್ಯರನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಪಲ್ಲವಿ ವೃತ್ತದಲ್ಲಿ ಜಾನುವಾರುಗಳ ಸಮೇತ ಹೋರಾಟ ಮಾಡಿ ಬೆಲೆ ಇಳಿಕೆ ಮಾಡುವಂತೆ ಕಂದಾಯ ಅಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ ಎಂಬುದು ರಾಜಕಾರಣಿಗಳ ಹಗಲು ದರೋಡೆಗೆ ಬಂತು ೪೭ರ ಸ್ವಾತಂತ್ರ್ಯ ಎಂಬಂತಾಗಿದೆ. ಅಧಿಕಾರಕ್ಕೆ ಬರುವ ಸರ್ಕಾರಗಳು ತಮ್ಮ ಆಸ್ತಿ ದಿನೇದಿನೇ ದುಪ್ಪಟ್ಟು ಮಾಡಿಕೊಂಡು ಜನಸಾಮಾನ್ಯರ ಬದುಕಿನ ಮೇಲೆ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ ಎಂದರು.ತೈಲ ಬೆಲೆಯೇರಿಕೆಯಿಂದ ಕೃಷಿ-ಶಿಕ್ಷಣ ಕ್ಷೇತ್ರದ ಮೇಲೂ ಹೆಚ್ಚಿನ ಪ್ರಭಾವ ಬೀರಿರುವ ಜೊತೆಗೆ ದುಡಿಯುವ ಕೈಗೆ ಕೆಲಸ ಕೊಡಬೇಕಾದ ಕೇಂದ್ರ-ರಾಜ್ಯ ಸರ್ಕಾರ ನರೇಗಾ ಮತ್ತು ಜೀರಾಮ್ ಜೀ ಮಧ್ಯೆ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಅನಾಥವಾಗಿದ್ದಾರೆ. ಜೀವನ ನಡೆಸಲು ಕಷ್ಟಪಡುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಬದುಕು ರಕ್ಷಣೆ ಮಾಡಬೇಕಾದ ಸರ್ಕಾರ ಮಧ್ಯಪ್ರಾಚ್ಯ ಯುದ್ಧದ ನೆಪದಲ್ಲಿ ಅಕ್ಕಿ, ಬೇಳೆ, ಎಣ್ಣೆ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಇದೆ ಎಂದು ಸರ್ಕಾರಗಳ ವಿರುದ್ಧ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿ, ರೈತಪರ ಜನ ಸಾಮಾನ್ಯರ ಪರ ನಿಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮುಖಂಡರಾದ ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಕುವಣ್ಣ, ಮಂಗಸಂದ್ರ ವೆಂಕಟೇಶ, ಮಂಗಸಂದ್ರ ತಿಮ್ಮಣ್ಣ, ವಿಜಿ, ಪ್ರಶಾಂತ, ನವೀನ, ಭರತ, ಸುಪ್ರೀಂಚಲ, ಮಂಗಸಂದ್ರ ತಿಮ್ಮಣ್ಣ, ಶೈಲಜಾ, ರಾಧಮ್ಮ, ಗುಣಮ್ಮ, ಬೈರಮ್ಮ, ಚೌಡಮ್ಮ, ನಾಗಮ್ಮ ಇದ್ದರು.

೨೬ಕೆಎಲ್‌ಆರ್-೮

ತೈಲ ಬೆಲೆ, ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆಯೇರಿಕೆಗೆ ಕಡಿವಾಣ ಹಾಕಿ ಜನ ಸಾಮಾನ್ಯರ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಕೋಲಾರದ ಪಲ್ಲವಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆ ಜಾಗದಲ್ಲಿರುವ ಶಾಲೆಗಳ ಬಗ್ಗೆ ಮಾಹಿತಿ ನೀಡಲು ತಾಪಂ ಆಡಳಿತಾಧಿಕಾರಿ ಸೂಚನೆ
ದುರಸ್ತಿ ಕಾಣದ ಅಯ್ಯನಕೆರೆ ತೂಬು: ರೈತರಲ್ಲಿ ಮೂಡಿದ ಆತಂಕ