ಕನ್ನಡಪ್ರಭ ವಾರ್ತೆ ಮುಧೋಳ
ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಮುಧೋಳ ತಾಲೂಕಿನಲ್ಲಿ ಸುಮಾರು 900 ಕಟಬಾಕಿ ರೈತರ ಪೈಕಿ ಕೆಲವು ರೈತರಿಗೆ ಅರೆಸ್ಟ್ ವಾರಂಟ್ ಬಂದಿದ್ದು, ರೈತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿ, ಕಬ್ಬಿನ ಬಿಲ್ ಬಾಕಿ ಹಾಗೂ ಇತರೆ ಅನಿವಾರ್ಯ ಕಾರಣಗಳಿಂದ ಕೆಲವು ರೈತರು ಕಟಾಬಾಕಿದಾರರಾಗಿದ್ದಾರೆ. ಕಾರಣ ಬ್ಯಾಂಕಿನವರು ಇನ್ಮುಂದೆ ರೈತರ ಮೇಲೆ ಯಾವುದೇ ರೀತಿಯ ಕೇಸ್ ಹಾಕಬಾರದು. ಈಗಿರುವ ಕೇಸ್ ಹಿಂಪಡೆದುಕೊಳ್ಳಬೇಕು. ಈ ಹಿಂದಿನ ಮಾದರಿಯಲ್ಲಿ ಎಲ್ಲ ರೈತರಿಗೂ ಒನ್ ಟೈಮ್ ಸೆಟಲ್ಮೆಂಟ್ ಗೆ ಅವಕಾಶ ಕೊಡಬೇಕೆಂದು ಅಗ್ರಹಿಸಿದರು.
ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ರೈತರು ಬ್ಯಾಂಕ್ ಬಂದ್ ಮಾಡಿ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.ರೈತರಿಗೆ ಮನವಿ ಮಾಡಿಕೊಂಡ ಬ್ಯಾಂಕ್ ಅಧಿಕಾರಿಗಳು 3-4 ದಿನಗಳಲ್ಲಿ ಸಭೆ ಕರೆದು ತಮ್ಮ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಆದಷ್ಟು ಬೇಗ ರೈತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ರೈತರು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ ಎಂದು ಘೋಷಿಸಿದರು.