ಹಗಲಿನಲ್ಲಿ ನಿರಂತರ ವಿದ್ಯುತ್‌ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Feb 13, 2025, 12:45 AM IST
11ಕೆಎಂಎನ್ ಡಿ28 | Kannada Prabha

ಸಾರಾಂಶ

ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ ಸರ್ಕಾರ ರಾತ್ರಿ ವೇಳೆಯಲ್ಲಿ 3 ಗಂಟೆ ಹಾಗೂ ಹಗಲಿನಲ್ಲಿ 4 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ. ರಾತ್ರಿ ವೇಳೆಯಲ್ಲಿ ಈಗಾಗಲೇ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ರೈತರ ಮೇಲೆ ದಾಳಿಗಳು ಹೆಚ್ಚಾಗಿ ರೈತರ ಪ್ರಾಣ ಕ್ಕೆ ಹಾನಿಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರೈತರ ಪಂಪ್ ಸೆಟ್‌ಗಳಿಗೆ ಹಗಲಿನ ವೇಳೆ ನಿರಂತರವಾಗಿ 10 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಸೆಸ್ಕ್ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಅಧ್ಯಕ್ಷ ಶಂಭುಗೌಡ ನೇತೃತ್ವದಲ್ಲಿ ಪಂಪ್ ಸೆಟ್ ಹೊಂದಿರುವ ರೈತರು ಕಚೇರಿ ಎದುರು ಆಗಮಿಸಿ ಧರಣಿ ಕುಳಿತು ಸರ್ಕಾರ ನೀಡಿರುವ ಭರವಸೆ ಹುಸಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಹೇಳಿದ ಸರ್ಕಾರ ರಾತ್ರಿ ವೇಳೆಯಲ್ಲಿ 3 ಗಂಟೆ ಹಾಗೂ ಹಗಲಿನಲ್ಲಿ 4 ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ. ರಾತ್ರಿ ವೇಳೆಯಲ್ಲಿ ಈಗಾಗಲೇ ಕಾಡು ಪ್ರಾಣಿಗಳ ಹಾವಳಿ ದಿನೇ ದಿನೇ ರೈತರ ಮೇಲೆ ದಾಳಿಗಳು ಹೆಚ್ಚಾಗಿ ರೈತರ ಪ್ರಾಣ ಕ್ಕೆ ಹಾನಿಯಾಗುತ್ತಿದೆ ಎಂದು ಕಿಡಿಕಾರಿದರು.

ರಾತ್ರಿ ಹೊತ್ತಿನಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಭಿತರಾಗಿದ್ಧಾರೆ. ಇದರಿಂದ ಹಗಲಿನಲ್ಲಿಯೇ 10 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿದರು.

ಮುಖ್ಯ ಮಂತ್ರಿಗಳು ತಮ್ಮ ತವರು ಜಿಲ್ಲೆ ಮೈಸೂರು ಹಾಗೂ ಹಾಗೂ ಡಿಸಿಎಂ ಅವರು ತಮ್ಮ ತವರಿನ ರಾಮನಗರ ಪ್ರದೇಶದಲ್ಲಿ ರೈತರಿಗೆ ಹಗಲಿನಲ್ಲಿ ನೀಡುತ್ತಿದ್ದಾರೆ. ದರಂತೆ ನಮ್ಮ ಮಂಡ್ಯ ಜಿಲ್ಲೆಯ ರೈತರಿಗೂ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕು. ಹೊಸದಾಗಿ ರೈತರು ಪಂಪ್ ಸೆಟ್‌ಗಳ ಅಳವಡಿಸುತ್ತಿರುವ ರೈತರಿಗೆ ಅಕ್ರಮ ಸಕ್ರಮದಡಿ ವಿದ್ಯುತ್ ಸಂಪರ್ಕವನ್ನು ನೀಡಬೇಕು ಎಂದು ಒತ್ತಾಯಿಸಿ ಎಇಇ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಕೇಶವ್, ಉಪಾಧ್ಯಕ್ಷ ಜಯರಾಮೇಗೌಡ ದೊಡ್ಡಪಾಳ್ಯ, ಶ್ರೀನಿವಾಸ್, ಬಿಜೆಪಿ ಮುಖಂಡ ಶಾಮಿಯಾನ ಪುಟ್ಟರಾಜು, ನರಸಿಂಹಯ್ಯ ಸ್ವಾಮಣ್ಣ, ತಾಲೂಕು ರೈತ ಸಂಘದ ಸಂಚಾಲಕ ಪಾಂಡು, ಡಿ.ಎಂ.ಕೃಷ್ಣೇಗೌ, ಪುರುಷೋತ್ತಮ, ಮೇಳಾಪುರ ಸ್ವಾಮೀಗೌಡ. ಪಾಲಹಳ್ಳಿ ರಾಮೇಗೌಡ, ಕೃಷ್ಣಪ್ಪ, ಪಿಲಿಪ್, ರಾಮಚಂದ್ರ, ಶಶಿಧರ್ ಸೇರಿದಂತೆ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ