ಚೆಂಡು ಹೂವು ಫ್ಯಾಕ್ಟರಿ ಮುಚ್ಚಿಸಲು ರೈತಸಂಘ ಆಗ್ರಹ

KannadaprabhaNewsNetwork |  
Published : Apr 14, 2026, 01:45 AM IST
ಚೆಂಡು ಹೂ ಪ್ಯಾಕ್ಟರಿ ಮುಚ್ಚಿಸಲು ರೈತಸಂಘ ಆಗ್ರಹ | Kannada Prabha

ಸಾರಾಂಶ

ತಾಲೂಕಿನ ತ್ರಯಂಬಕಪುರ ಬಳಿಯ ಚೀನಾ ಮೂಲದ ಚೆಂಡು ಹೂ ಫ್ಯಾಕ್ಟರಿ ಮುಚ್ಚಿಸಬೇಕು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಮುಖಂಡ ಎಸ್.ಟಿ. ಮಹದೇವಸ್ವಾಮಿ ತಾಲೂಕು ಆಡಳಿತವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತ್ರಯಂಬಕಪುರ ಬಳಿಯ ಚೀನಾ ಮೂಲದ ಚೆಂಡು ಹೂ ಫ್ಯಾಕ್ಟರಿ ಮುಚ್ಚಿಸಬೇಕು ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಮುಖಂಡ ಎಸ್.ಟಿ. ಮಹದೇವಸ್ವಾಮಿ ತಾಲೂಕು ಆಡಳಿತವನ್ನು ಆಗ್ರಹಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸಾಮೂಹಿಕ ರೈತಸಂಘ ಕಳೆದ 8 ದಿನಗಳಿಂದ ನಡೆಯುತ್ತಿರುವ ಅಹೋ ರಾತ್ರಿ ಪ್ರತಿಭಟನೆಯಲ್ಲಿ ಮಾತನಾಡಿ, ಚೆಂಡು ಹೂ ಫ್ಯಾಕ್ಟರಿ ಸ್ಥಗಿತಗೊಳಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ. ಆದರೆ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಚೆಂಡು ಹೂ ಫ್ಯಾಕ್ಟರಿಯಿಂದ ವಾಸನೆ ಬರುತ್ತಿದೆ. ರಾತ್ರಿ ವೇಳೆ ಸುಮಾರು ೨೦ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿದ್ರಿಸಲಾಗುತ್ತಿಲ್ಲ. ಫ್ಯಾಕ್ಟರಿ ಕೊಳಚೆ ನೀರು ಅಂತರ್ಜಲ ಸೇರುತ್ತಿದೆ. ನೀರು ಕಲುಷಿತಗೊಳ್ಳುತ್ತಿದೆ ಎಂದರು.

ಕೆರೆಗಳಿಗೆ ನೀರು ಬಿಡಿಸಲು ಆಗ್ರಹ:

ಸ್ಥಳೀಯ ಶಾಸಕರು ಡಿಸೆಂಬರ್‌ನಲ್ಲಿ ೪ನೇ ಹಂತದ ಕೆರೆಗಳಿಗೆ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಶಾಸಕರು ಹೇಳಿದ ಮಾತು ಮುಗಿದು 5 ತಿಂಗಳಾಗುತ್ತಿದೆ. ಕೆರೆಗಳಿಗೆ ನೀರು ಬಂದಿಲ್ಲ. ಕೆರೆಗಳಿಗೆ ನೀರು ತುಂಬಿಸುವುದು ಶಾಸಕರ ಜವಾಬ್ದಾರಿ ಎಂದರು.

ಮೊದಲು 4ನೇ ಹಂತದ ಕೆರೆಗಳಿಗೆ ನೀರು ತುಂಬಿಸಿ, ನಂತರ ೧೧೦ ಕೆರೆ-ಕಟ್ಟೆಗಳಿಗೆ ಗುದ್ದಲಿ ಪೂಜೆ ಮಾಡಿಸಿ, ನಮ್ಮ ತಕರಾರಿಲ್ಲ. ಕೇರಳಕ್ಕೆ ಉಪಗಣಿ ಉತ್ಪನ್ನ ಸಾಗಣೆ ನಿಲ್ಲಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜು, ಬಿಜೆಪಿ ಮುಖಂಡ ಶಿಂಡನಪುರ ಶಿವಕುಮಾರ್‌, ಸುಬ್ಬು ಸೇರಿದಂತೆ ಸಾಮೂಹಿಕ ರೈತ ಸಂಘದ ಕಾರ್ಯಕರ್ತರು ಇದ್ದರು.

--

೧೩ಜಿಪಿಟಿ೧

ಗುಂಡ್ಲುಪೇಟೆ ಪಟ್ಟಣದಲ್ಲಿ ಸಾಮೂಹಿಕ ನಾಯಕತ್ವದ ರೈತಸಂಘದ ಅಹೋ ರಾತ್ರಿ ಪ್ರತಿಭಟನೆ ೮ನೇ ದಿನಕ್ಕೆ ಕಾಲಿಟ್ಟಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದೇಶಿ ಶಿಕ್ಷಣಕ್ಕೆ ತೆರಳುವವರಿಗೆ ಪಿಯು ಮುದ್ರಿತ ಅಂಕಪಟ್ಟಿ ಲಭ್ಯ
ಕೋಲ್ಡ್‌ ಸ್ಟೋರೇಜ್‌ ತೆರವಿಗೆ ಕೆಪೆಕ್‌ ನೋಟಿಸ್‌ - ಶಿಥಲೀಕರಣ ಘಟಕ ದುರಪಯೋಗ ಪ್ರಕರಣ