ಕನ್ನಡಪ್ರಭ ವಾರ್ತೆ ರಾವಂದೂರು
ಪಿರಿಯಾಪಟ್ಟಣ ತಾಲೂಕು ಕೊತ್ತವಳ್ಳಿ ಕೊಪ್ಪಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು.
ತಾಲೂಕಿನ ರೈತರು ತಂಬಾಕು ಬೆಳೆಗಿಂತಲೂ ಪರ್ಯಾಯ ಬೆಳೆಯನ್ನು ಕಂಡುಕೊಳ್ಳಬೇಕು, ಇಲ್ಲದಿದ್ದರೆ ರೈತರ ಬದುಕು ಶೋಚನೀಯವಾಗುತ್ತದೆ, ಏಕೆಂದರೆ ಕೇಂದ್ರ ಸರ್ಕಾರವು ತಂಬಾಕನ್ನು ಖರೀದಿಸಲು ತಾರತಮ್ಯ ಮಾಡುತ್ತಿದೆ, ಬಹುತೇಕ ತಂಬಾಕು ಮಾರುಕಟ್ಟೆಯನ್ನು ನಿಲ್ಲಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ರೀತಿ ಧೋರಣೆ ಮಾಡುತ್ತಿದೆ, ಕೆಲವರು ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮಂತ್ರಿಗಳ ಹತ್ತಿರ ಹೋಗಿ ತಂಬಾಕು ಬೆಳೆಗಾರರ ರೈತರ ಸಮಸ್ಯೆಗಳನ್ನು ಬಗೆಹರಿಸದೆ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ತಂಬಾಕು ಮಂಡಳಿ ನಿಗದಿಪಡಿಸಿದ ಕೆಜಿಗಿಂತಲೂ ಕಡಮೆ ಬೆಳೆಯಿರಿ, ಇದರ ಜೊತೆಗೆ ರೇಷ್ಮೆ ಬೆಳೆಯನ್ನು ಸಹ ಬೆಳೆಯಿರಿ, ಈ ಬೆಳೆಗೆ ಉತ್ತಮ ಬೆಲೆ ಇದ್ದು, ಜೊತೆಗೆ ರಾಜ್ಯ ಸರ್ಕಾರವು ಸಹ ಪ್ರೋತ್ಸಾಹವನ್ನು ನೀಡುತ್ತಿದೆ, ಆದ್ದರಿಂದ ತಾಲೂಕಿನ ರೈತರು ಈಗಲೇ ಎಚ್ಚೆತ್ತು ಪರ್ಯಾಯ ಬೆಳೆಯನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.