ವಿವಿಧ ರಸಗೊಬ್ಬರ ಮಳಿಗೆಗಳಿಗೆ ಭೇಟಿ, ಪರಿಶೀಲನೆ । ಮಾದರಿ ಸಂಗ್ರಹ
ಅವಳಿ ತಾಲೂಕಿನಲ್ಲಿ ಉತ್ತಮವಾಗಿ ಮಳೆಯಾಗುತಿದ್ದು, ರಸಗೊಬ್ಬರಗಳ ಪೋಷಕಾಂಶಗಳ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರಿಕ್ಷೆಯಿದ್ದು, ರೈತರು ಗುಣಮಟ್ಟದ ಗೊಬ್ಬರಗಳನ್ನು ಅಧಿಕೃತ ಲೈಸೆನ್ಸ್ ಪಡೆದ ಮಾರಾಟಗಾರರಿಂದಲೇ ಖರೀದಿಸಬೇಕು ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹೇಳಿದರು.
ತಾಲೂಕಿನಲ್ಲಿ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ರಸಗೊಬ್ಬರದ ಗುಣಮಟ್ಟ ನಿಯಂತ್ರಣದ ಹಿನ್ನೆಲೆಯಲ್ಲಿ ವಿವಿಧ ಮಳಿಗೆಗಳಿಂದ ರಸಗೊಬ್ಬರದ ಮಾದರಿ ಸಂಗ್ರಹಿಸಿ ಮಾತನಾಡಿದರು.ಮೆಕ್ಕೆಜೋಳ ಮತ್ತ ಇತರೆ ಬೆಳೆಗಳಲ್ಲಿ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳಾದ 10:26:26 , 20:20:00:13, 15:15:15:09 , 19:19:19 , 17:17:17 ,14:28:14 ಮತ್ತು 16:20:00:13, ಬಳಸಿದರೆ ಮಣ್ಣಿನಲ್ಲಿ ಸಮತೋಲಿತ ರಂಜಕ ಪೋಷಕಾಂಶವನ್ನು ಕಾಯ್ದುಕೊಳ್ಳುವುದರ ಜೋತೆಯಲ್ಲಿ ಮೆಕ್ಕೇಜೊಳ ಮತ್ತು ಇತರೆ ಬೆಳೆಗಳ ಸಸ್ಯಗಳು ಸಂಯುಕ್ತ ರಸಗೊಬ್ಬರಗಳಿಂದ ಲಭ್ಯವಿರುವ ರಂಜಕವನ್ನು ಮಣ್ಣಿನಿಂದ ಬೇರಿಗೆ ಸುಸಲಿತವಾಗಿ ಹೀರಿಕೊಂಡು ಸಸ್ಯ ಬೆಳೆವಣಿಗೆಗೆ ಸಹಾಯಕವಾಗಿ ಅಧಿಕ ಇಳುವರಿ ಪಡೆಯುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು.
ಕಳೆದ ಐದು ವರ್ಷದಿಂದ ನಾನು ಡಿ.ಎ.ಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳನ್ನು ತಳಗೊಬ್ಬರವಾಗಿ ಬಳಕೆ ಮಾಡುತಿದ್ದೆನೆ ಇದರಿಂದ ಮೆಕ್ಕೆಜೋಳ ಬೆಳಗೆ ಎಷ್ಟು ರಂಜಕ ಬೇಕು ಅಷ್ಟನ್ನು ಮಾತ್ರ ಸಮತೋಲಿತವಾಗಿ ನೀಡುತ್ತ ಬಂದಿರುತ್ತೇನೆ ಮತ್ತು ನೀರಿನಲ್ಲಿ ಕರಗುವ 19:19:19 ಮತ್ತು ಕೃಷಿ ಇಲಾಖೆಯಲ್ಲಿ ಸಿಗುವ ಎಂ.ಎನ್ ಲಿಕ್ವಿಡ್ ಒಂದು ತಿಂಗಳ ಬೆಳೆಗೆ ಸಿಂಪಡಿಸಿದಾಗ ಬೆಳೆಯು ಆರೋಗ್ಯಕರವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ಪಡೆದಿದ್ದೆನೆ ಈ ವರ್ಷವೂ ಇದೇ ಪದ್ದತಿಯನ್ನು ಅನುಸರಿಸುತ್ತೇನೆ ಎಂದು ತಾಲೂಕಿನ ಹತ್ತೂರಿನ ರೈತ ಸೋಮಶೇಖರ್ ತಿಳಿಸಿದರು.