ವೈಜ್ಞಾನಿಕ ಬದಲಾವಣೆಯತ್ತ ರೈತರು ಚಿಂತನೆ ನಡೆಸಿ

KannadaprabhaNewsNetwork | Published : Apr 4, 2024 1:01 AM

ಸಾರಾಂಶ

ರೈತರು ವೈಜ್ಞಾನಿಕ ಬದಲಾವಣೆಯತ್ತ ಚಿಂತನೆ ನಡೆಸುವುದು ಅಗತ್ಯವಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು ವೈಜ್ಞಾನಿಕ ಬದಲಾವಣೆಯತ್ತ ಚಿಂತನೆ ನಡೆಸುವುದು ಅಗತ್ಯವಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ತಾಲೂಕಿನ ಎಚ್.ಮೂಕಳ್ಳಿ ಗ್ರಾಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಕೃತಿಕ ಬದಲಾವಣೆಯಿಂದ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ ಬರಗಾಲದಿಂದ ಬೆಳೆಗಳು ಒಣಗುತ್ತಿವೆ ಕೊಳವೆ ಬಾವಿಗಳು ಇಂಗುತ್ತಿವೆ. ರೈತರು ಹಳ್ಳಿಗಳಲ್ಲಿ ಗುಡಿ ಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ ಕಟ್ಟೆ ಪುನರ್ಜೀವನ ಹಾಗೂ ಕಟ್ಟುವ ಕೆಲಸದಲ್ಲಿ ರೈತರು ಶ್ರದ್ದೆ ವಹಿಸಿದ್ದರೆ ಕೊಳವೆ ಬಾವಿಗಳು ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದರು. ರಾಜಕೀಯ ಕ್ಷೇತ್ರ ಹಾಗೂ ರಾಜಕಾರಣಿಗಳಿಂದ ರೈತರಿಗೆ ನ್ಯಾಯ ಸಿಗುವುದಿಲ್ಲ ಕೇಂದ್ರ ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಮರಳುಗಾಡಿನ ಓಯಸಿಸ್ ಇದ್ದಂತೆ ಎಂಬುದನ್ನು ಅರಿತುಕೊಳ್ಳಿ ಎಂದು ರೈತರಿಗೆ ಜಾಗೃತಿ ಮೂಡಿಸಿದರು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲೀನರಾಗಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಲು ನಾಳೆ ಮೈಸೂರಿನಲ್ಲಿ ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ ಎಂದರು. ಜಿಲ್ಲಾ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ನಿರಂತರ ಶೋಷಣೆ ಮುಂದುವರಿಯುತ್ತಿದೆ. ಕಡಿವಾಣ ಹಾಕಲು ಸಂಘಟಿತ ಹೋರಾಟ ಮುಖ್ಯವಾಗಿದೆ ಅದಕ್ಕಾಗಿ ಇಂದು ಗ್ರಾಮ ಘಟಕ ಉದ್ಘಾಟನೆ ಮಾಡಲಾಗುತ್ತಿದೆ ಎಂದರು. ಗ್ರಾಮ ಘಟಕದ ಉದ್ಘಾಟನೆ ಬಳಿಕ ನೂರಾರು ರೈತರಿಗೆ ಹಸಿರು ಶಾಲು ಹಾಕಿ ಸ್ವಾಗತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ, ತಾಲೂಕ ಅಧ್ಯಕ್ಷ ಸತೀಶ್. ಕೆ ಸಿ ಬಸವಣ್ಣ, ಚಂದ್ರಶೇಖರ್ಮೂರ್ತಿ, ಗೌಡಳ್ಳಿ ಷಡಕ್ಷರಿ, ಹೆಗ್ಗೋಠಾರ ಶಿವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ಕುರುಬೂರು ಸಿದ್ದೇಶ್, ಪ್ರದೀಪ್, ಹೆಚ್ ಮೂಕಳ್ಳಿ ಗ್ರಾಮ ಘಟಕದ ಅಧ್ಯಕ್ಷ ಶಿವಕುಮಾರ್ ಉಪಾಧ್ಯಕ್ಷ ಬಾಲು, ಕಾರ್ಯದರ್ಶಿ ಮಹದೇವಸ್ವಾಮಿ , ಸಂಘಟನಾ ಕಾರ್ಯದರ್ಶಿ ರಾಜು, ಸಂಘದ ಸದಸ್ಯರಾದ ರವೀಶ, ಸುಂದ್ರಪ್ಪ, ನವೀನ, ವೀರಭದ್ರಸ್ವಾಮಿ, ರುದ್ರಸ್ವಾಮಿ, ಎಂ ವಿ ರಾಜಶೇಖರ್ ಮಹದೇವಪ್ಪ ಚೆನ್ನಮಲಪ್ಪ, ನಾಗರಾಜು, ವಿರೂಪಾಕ್ಷ, ರೇವಣ್ಣ, ಕುಮಾರ್ ,ಸುರೇಶ್, ಮಲ್ಲೇಶಪ್ಪ ಪ್ರಸಾದ್, ಡೈರಿ ಸುಂದರಪ್ಪ, ಮಲ್ಲೇಶಪ್ಪ, ಎಂ ಸಿ ಮಾದೇಶ್, ಸ್ವಾಮಿ ,ವಿಕ್ರಾಂತ್, ಪುಟ್ಟಸ್ವಾಮಿ,ಮಹದೇವಯ್ಯ ,ಜಿ ರಂಗಯ್ಯ, ಪಿ ಕುಮಾರ್, ಪ್ರಕಾಶ್, ಎಂ ನಾಗರಾಜು ಚಿನ್ನಸ್ವಾಮಿ, ಎಂ.ಬಿ .ರೇಚಣ್ಣ ,ರೇವಣ್ಣ ,ಚಂದ್ರಶೇಖರ್ ,ಮಿಲ್ಟ್ರಿ ಪುಟ್ಟಸ್ವಾಮಿ, ನಟರಾಜು, ಟ್ಯಾಕ್ಟರ್ ಮಹೇಶ. ಮಲ್ಲಣ್ಣ ಹಾಜರಿದ್ದರು.

Share this article