- ಸಾಂಪ್ರದಾಯಿಕ ಪದ್ಧತಿ ಜೊತೆಗೆ ಆಧುನಿಕ ಅಗತ್ಯತೆಗಳಿಗೆ ಸರಿಹೊಂದಿದರೆ ಲಾಭ ಹೆಚ್ಚು: ಸಲಹೆ
ಕನ್ನಡಪ್ರಭ ವಾರ್ತೆ ಯಳಂದೂರುವ್ಯವಸಾಯದಲ್ಲಿ ನಷ್ಟವನ್ನು ಅನುಭವಿಸುವರ ಸಂಖ್ಯೆಯೇ ಅಧಿಕವಾಗಿದೆ. ಏಕೆಂದರೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯನ್ನು ಮಾಡುವ ಕಲೆಯನ್ನು ಕರಗತ ಮಾಡಿಕೊಂಡು ರೈತ ಉದ್ಯಮಿಯ ರೂಪ ಪಡೆಯಬೇಕು. ವ್ಯವಸಾಯ ಉದ್ಯಮವಾಗಬೇಕು ಎಂದು ಮುಡುಕನಪುರ ಹಲವಾರ ಮಠದ ಷಡಕ್ಷರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಕರೆ ನೀಡಿದರು.
ಭಾನುವಾರ ತಾಲೂಕಿನ ಗೌಡಹಳ್ಳಿ ಗ್ರಾಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ರೈತ ಮುಖಂಡರು, ಮಣ್ಣಿನ ಮಕ್ಕಳ ಸಬಲೀಕರಣ, ಪ್ರಬುದ್ಧ ಪ್ರಜಾಸ್ನೇಜಿ, ಪ್ರಜ್ಞಾವಂತಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ರೈತರು ತಮ್ಮ ಬೆಳೆಗೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು. ಭತ್ತದ ಬದಲು ಅಕ್ಕಿಯಾಗಿ ಮಾಡಿ ಇದನ್ನು ಪ್ಯಾಕ್ ಮಾಡಿ ಮಾರಬೇಕು, ಎಳನೀರನ್ನು ಪ್ಯಾಕೆಟ್‌ನಲ್ಲಿ ಮಾರಾಟ ಮಾಡುವುದು, ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುವ ಕಲೆಯನ್ನು ಕಲೆಯನ್ನು ಕಲಿಯಬೇಕು. ಆಗ ಇವರಿಗೆ ಹೆಚ್ಚು ಲಾಭ ದೊರೆಯುತ್ತದೆ. ಸಹಕಾರ ಸಂಘಗಳಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗುವ ಕಾರ್ಯಕ್ರಮಗಳನ್ನು ಸರ್ಕಾರಗಳು ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೌಡಹಳ್ಳಿ ಎಸ್. ಸೋಮಣ್ಣ ಮಾತನಾಡಿ, ವಾಟಳು ಮಠದ ಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ, ಪಂಚಗವಿ ಮಠದ ಶ್ರೀಕಂಠಸ್ವಾಮಿ, ಗೌಡಹಳ್ಳಿ ವಿರಕ್ತಮಠದ ಮರಿ ತೋಂಟದಾರ್ಯ ಸ್ವಾಮೀಜಿ ಸಮಾಜ ಸೇವಕ ನಿಶಾಂತ್, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕಾರ್ಯದರ್ಶಿ ವಿದ್ಯಾಸಾಗರ್, ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ, ವೈ.ಸಿ. ಪ್ರಕಾಶ್, ಕುಮಾರಬಾವಿ, ವೆಂಕಟೇಶ್, ಪ್ರಭುಸ್ವಾಮಿ, ನಾಗರಾಜು, ಚಿಕ್ಕರಾಜು, ಬಸವರಾಜು, ಮಲ್ಲಿಕಾರ್ಜುನ ಸ್ವಾಮಿ, ಸುಂದ್ರಪ್ಪ, ಶಾಂತಮೂರ್ತಿ ಸೇರಿದಂತೆ ಅನೇಕರು ಇದ್ದರು.
29ಸಿಎಚ್‌ಎನ್52
ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮುಡುಕನಪುರ ಹಲವಾರ ಮಠದ ಷಡಕ್ಷರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿದರು.---