40 ಬೇಡಿಕೆಗಳ ಈಡೇರಿಕೆಗೆ ಅರಸೀಕೆರೆಯಲ್ಲಿ ರೈತ ಸಂಘ ಆಗ್ರಹ

KannadaprabhaNewsNetwork |  
Published : Jul 20, 2024, 12:49 AM IST
ಪತ್ರಿಕಾಗೋಷ್ಠಿಯಲ್ಲಿ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಕನ್ನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿದರು | Kannada Prabha

ಸಾರಾಂಶ

ರೈತರು ವಂಶ ಪಾರಂಪರೆಯವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರಿಗೆ ಮಂಜೂರು ಮಾಡಿಕೊಳ್ಳಬೇಕು ಸೇರಿದಂತೆ ಸುಮಾರು 40 ಬೇಡಿಕೆಗಳು ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜುಲೈ 23ರಂದು ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅರಸೀಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕನ್ನಕಂಚೇನಹಳ್ಳಿ ಪ್ರಸನ್ನಕುಮಾರ್ ತಿಳಿಸಿದರು.

23ರಂದು ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈತರು ವಂಶ ಪಾರಂಪರೆಯವಾಗಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರಿಗೆ ಮಂಜೂರು ಮಾಡಿಕೊಳ್ಳಬೇಕು ಸೇರಿದಂತೆ ಸುಮಾರು 40 ಬೇಡಿಕೆಗಳು ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜುಲೈ 23ರಂದು ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಕನ್ನಕಂಚೇನಹಳ್ಳಿ ಪ್ರಸನ್ನಕುಮಾರ್ ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲಿನ ಸರ್ಕಾರಿ ಬಗರ್‌ಹುಕುಂ ಜಮೀನನ್ನು ರೈತರಿಗೆ ಮಂಜೂರಾತಿ ಆದೇಶ ಪತ್ರ ಕೊಡುವ ಪ್ರಮುಖ ವಿಷಯವಾಗಿಟ್ಟುಕೊಂಡು ಮನವಿ ಸಲ್ಲಿಸಲಾಗುವುದು. ರೈತರ ಜಮೀನಿಗೆ ಸಮರ್ಪಕ ವಿದ್ಯುತ್ ಪೂರೈಕೆ, ರೈತರ ಜಮೀನುಗಳಿಗೆ ರಸ್ತೆ ನಿರ್ಮಾಣ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ರೈತರಿಗೆ ಬರಬೇಕಾದ ಪರಿಹಾರ ಹಣ ತೆಂಗಿನ ಮರಗಳನ್ನು ರೋಗದಿಂದ ರಕ್ಷಿಸಲು ಔಷಧಿ ವಿತರಣೆ ಸೇರಿದಂತೆ ಸುಮಾರು 40 ಬೇಡಿಕೆಗಳು ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜುಲೈ 23ರಂದು ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಜುಲೈ 21ರಂದು ಅರಸೀಕೆರೆಯಿಂದ ರೈತರ ಪಾದಯಾತ್ರೆಯು ಹೊರಡಲಿದ್ದು, ಜುಲೈ 22ರಂದು ಹಾಸನ ತಾಲೂಕಿನ ದುದ್ದ ಹೋಬಳಿಯ ಉಪ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು, ಜುಲೈ 23ರಂದು ಪಾದಯಾತ್ರೆಯು ಮುಂದುವರಿದು ಜುಲೈ 24 ರಂದು ಹಾಸನದಿಂದ ಆಲೂರು ಬೈರಾಪುರ ಪಾಳ್ಯ ಮಾರ್ಗವಾಗಿ ಪಾದಯಾತ್ರೆಯ ಮೂಲಕ ತೆರಳಿ ಜುಲೈ 25 ರಂದು ಸಕಲೇಶಪುರ ತಲುಪಿಸಕಲೇಶಪುರ ವಿಭಾಗೀಯ ಸಹಾಯಕ ಆಯುಕ್ತರಿಗೆ ಐದಳ್ಳ ಕಾವಲಿನ ಸುಮಾರು 2580 ಎಕರೆ ಸರ್ಕಾರಿ ಬಗರ್‌ಹುಕುಂ ಜಮೀನನ್ನು ರೈತರಿಗೆ ಮಂಜೂರಾತಿ ಆದೇಶ ಪತ್ರ ಕೊಡುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ರೈತ ಸಂಘದ ಮುಖಂಡರಾದ ಮಂಜಮ್ಮ ನಿಂಗಪ್ಪ, ಆಯೂಬ್ ಪಾಷಾ, ಏಜಾಜ್ ಪಾಷಾ, ಬೋಜರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!