ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ರಾಣೇಬೆನ್ನೂರು ತಾಲೂಕು ಮುದೇನೂರು ಗ್ರಾಮದ ಬೀಜಮಾತೆ ಸುನೀತಾ ಶಂಕ್ರಗೌಡ ವಿವಿಧ ತರಕಾರಿ ತಳಿಗಳು, ದ್ವಿದಳ ಧಾನ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಎರೆಹಳ್ಳಿ ಗ್ರಾಮದ ಪರಿಮಳ ಹನುಮಂತಪ್ಪ ಸಿರಿಧಾನ್ಯಗಳು, ಬೀಜ ವಿನಿಮಯ ಪದ್ಧತಿ ಬಗ್ಗೆ ತಿಳಿಸಿದರು. ಬೆಂಗಳೂರಿನ ಶೈಲಜಾ ತಾರಸಿ ತೋಟಗಳ ಉಪಯೋಗ ತಿಳಿಸಿದರು.
ಐಕಾಂತಿಕ ಸಂಸ್ಥೆಯ ರಾಘವ ನೂರಾರು ಕೃಷಿಕರ ಜತೆ 1 ಗಂಟೆಗಳ ನಿಸರ್ಗ ನಡಿಗೆ ನಡೆಸಿ, ತೋಟಗಳಲ್ಲಿರುವ ವಿವಿಧ ಸಾವಯವ ಸಸಿಗಳ, ಮರಗಳ ಬಗ್ಗೆ ಮಾಹಿತಿ ಮತ್ತು ಸಂವಾದ ನಡೆಸಿದರು. ಬೀಜ ಮತ್ತು ಗಿಡಗಳ ವಿನಿಮಯ ಪದ್ಧತಿ ಹಂಚಿಕೊಂಡರು.ಕೃಷಿಕರಾದ ಅವಿನಾಶ್, ಸುಜಿತ್, ಪಾಂಡರಂಗಾಚಾರ್, ವೀರೇಶ್, ಶಶಿಕಲಾ, ಕುಂಬಳೂರು ಶಂಭು ಸಂಸ್ಕರಿಸಿದ ಸಕ್ಕರೆ, ಹಾಲು ಹಣ್ಣುಗಳ ಪ್ರಾತ್ಯಕ್ಷಿಕೆ ನಡೆಸಿದರು. ಸಸಿಗಳು, ಹಣ್ಣುಗಳು, ಕುಂಬಾರಿಕೆ ಮಣ್ಣಿನ ಮಡಕೆ, ದೇಶಿ ಸೊಗಡಿನ ಆಹಾರದ ಬಗ್ಗೆ ಪ್ರಕೃತಿ ಕುಟೀರದಲ್ಲಿ ಉಪನ್ಯಾಸ ನಡೆಯಿತು. ಅನಂತರ ಸಂವಾದವೂ ಇತ್ತು.
ಕೃಷಿ ಪರಿಕರಗಳು ಮತ್ತು ಪೇಟ್‌ಗಳ ಮಾರಾಟವೂ ಆಯಿತು. ಉತ್ಸವಕ್ಕೆ ಬೆಂಗಳೂರು, ದೆಹಲಿ, ಹರಿಯಾಣ, ಧಾರವಾಡ, ಹುಬ್ಬಳ್ಳಿ, ಜಮಖಂಡಿ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಹಾವೇರಿ ಭಾಗಗಳಿಂದ ನೂರಾರು ಸಾವಯವ ಕೃಷಿಕರು ಆಗಮಿಸಿದ್ದರು.
-೨ಎಂಬಿಆರ್೨: ನಿಸರ್ಗ ನಡಿಗೆಯಲ್ಲಿ ರಾಘವ ಕೃಷಿಕರು, ಸಾರ್ವಜನಿಕರಿಗೆ ಮಾಹಿತಿ ನೀಡಿದರು.