ಬೀದರ್:
ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಒಂದನೊಂದು ಎದುರಿಗೆ ಕ್ರಾಸಿಂಗ್, ಬ್ಯಾರಲ್ ರೋಲ್, ಕೇಸರಿ, ಬಿಳಿ, ಹಸಿರು ಬಣ್ಣದ ಚಿತ್ರ ಬಿಡುಸುವ ಮೂಲಕ ಆಕಾಶದಲ್ಲಿ ಚಿತ್ತಾರ ಮೂಡಿಸಿದವು. ಕೆಲವೊಂದು ಸಲ ಒಂಟಿಯಾಗಿ, ಜೋಡಿಯಾಗಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳು ಯಾವ ದಿಕ್ಕಿನಿಂದ ವಿಮಾನಗಳು ಆಕಾಶದಲ್ಲಿ ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.
1996ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ್, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600ಕ್ಕಿಂತಲೂ ಹೆಚ್ಚಿನ ಪ್ರದರ್ಶನ ನೀಡಿವೆ. 9 ವಿಮಾನಗಳ ಈ ಏರಕ್ರಾಪ್ಟ್ ಟೀಂ ಇಡೀ ಏಷ್ಯಾ ಖಂಡದ ಭಾರತದಲ್ಲಿ ಮಾತ್ರ ಇರುವುದು. ಏರ್ ಶೋ ಕಾರ್ಯಕ್ರಮದಲ್ಲಿ ಬೀದರ್ ನಗರಸಭೆ ಅಧ್ಯಕ್ಷರಾದ ಮೋಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಏರ್ ಫೋರ್ಸ ಸ್ಟೇಷನ್ ಬೀದರಿನ ಕಮೊಡೊರ್ ಪರಾಗಲಾಲ್, ಜಿಪಂ ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಎಡಿಸಿ ಶಿವಕುಮಾರ ಶೀಲವಂತ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು, ಏರ್ ಫೋರ್ಸ ಸ್ಟೇಷನ್ ಅಧಿಕಾರಿಗಳು, ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.