ಸೊರಬ: ನಾಡಿಗೆ ಅನ್ನ ನೀಡುವ ರೈತರಿಗೆ ಕೃತಜ್ಞತೆ ಹೇಳಲು ಸರ್ಕಾರ ರೈತ ದಿನ ಆಚರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಆಗ್ರಹಿಸಿದರು.
ವಿವಿಧ ಜಾತಿ- ಜನಾಂಗಗಳ ಮಹನೀಯರ, ಸಂತರು, ಮಹಾಪುರುಷರ ಜಯಂತಿಯಂತೆ ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತದೆ. ಆದರೆ ಡಿ.23 ರಾಷ್ಟ್ರೀಯ ರೈತ ದಿನವಾಗಿದ್ದು, ನಾಡಿಗೆ ಅನ್ನ ನೀಡುವ ಕೃಷಿಕರನ್ನು ಗೌರವಿಸಲು ರೈತ ದಿನ ಆಚರಿಸದಿರುವುದು ವಿಷಾದನೀಯ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದಿಂದ ರೈತ ದಿನಾಚರಣೆಯನ್ನು ಅಧಿಕೃತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳೇನು?:ಪಟ್ಟಣದ ಪುರಸಭೆ ಮುಂಭಾಗದ ವೃತ್ತ ಸೇರಿದಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ರೈತ ವೃತ್ತ ಸ್ಥಾಪಿಸಬೇಕು. ರೈತ ದಿನಾಚರಣೆಯಂದು ಉತ್ತಮ ರೈತರನ್ನು ಗೌರವಿಸಬೇಕು. ಪ್ರತಿ ಗ್ರಾಮಗಳಲ್ಲಿ 2 ಎಕರೆ ಒಕ್ಕಲು ಕಣ ನಿರ್ಮಿಸಬೇಕು. ಗೋಮಾಳಗಳನ್ನು ಜಾನುವಾರುಗಳಿಗೆ ಮೀಸಲಿಡಬೇಕು. ಅಧಿವೇಶನದಲ್ಲಿ ಇಂಥ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ಡಿ.15ರಿಂದ ಪುರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
- - -
-12ಕೆಪಿಸೊರಬ01: