ಮಕ್ಕಳನ್ನು ನೋಡಲು ಬಿಡದ್ದಕ್ಕೆ ನೊಂದು ತಂದೆ ಆತ್ಮಹತ್ಯೆ

KannadaprabhaNewsNetwork |  
Published : Feb 11, 2026, 02:00 AM IST
10ಜಿಪಿಟಿ4ನವೀನ್‌ ಕುಮಾರ್‌ | Kannada Prabha

ಸಾರಾಂಶ

ತಾನು ಹೆತ್ತ ಮಕ್ಕಳನ್ನು ನೋಡಲು ಬಿಡದೆ ಪತ್ನಿ ಮತ್ತು ಆಕೆಯ ತಾಯಿ ಕಿರುಕುಳ ಕೊಟ್ಟಿದ್ದಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯು ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಸತ್ತರೆ ಸಾಯಿ ಎಂದು ಪತ್ನಿ, ಅತ್ತೆ ನಿಂದನೆ । ಇದರಿಂದ ಮನನೊಂದು ಆತ್ಮಹತ್ಯೆ: ಮೃತನ ತಾಯಿ---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾನು ಹೆತ್ತ ಮಕ್ಕಳನ್ನು ನೋಡಲು ಬಿಡದೆ ಪತ್ನಿ ಮತ್ತು ಆಕೆಯ ತಾಯಿ ಕಿರುಕುಳ ಕೊಟ್ಟಿದ್ದಕ್ಕೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯು ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕಬ್ಬಹಳ್ಳಿ ಗ್ರಾಮದ ನವೀನ್‌ ಕುಮಾರ್‌(36). ತನ್ನ ಮನೆಯ ಅಡುಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ತಾಯಿ ಪುಟ್ಟಮ್ಮ ಬೇಗೂರು ಠಾಣೆಗೆ ದೂರಿತ್ತಿ, ಸೊಸೆ ಮತ್ತು ಬೀಗತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪುಟ್ಟಮ್ಮ ನೀಡಿದ ದೂರಿನ ಮೇರೆಗೆ ತಾಲೂಕಿನ ಬೇರಂಬಾಡಿ ಗ್ರಾಮದ ಅತ್ತೆ ಮುನಿಯಮ್ಮ ಹಾಗೂ ಪತ್ನಿ ಜನ್ನಾಜಮ್ಮನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಏನಿದು ಘಟನೆ?

ಮೃತ ನವೀನ್‌ ಹಾಗೂ ಜನ್ನಾಜಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಜನ್ನಾಜಮ್ಮ 2ನೇ ಮಗುವಿಗೆ ಗರ್ಭಿಣಿಯಾದ ಹಿನ್ನಲೆ ತವರೂರು ಬೇರಂಬಾಡಿಗೆ ಹೋದಾಗ ಮತ್ತೆ ಕಬ್ಬಹಳ್ಳಿಗೆ ಬಂದಿರಲಿಲ್ಲ. ಹೀಗಾಗಿ ಪತ್ನಿಯನ್ನು ಕರೆತರಲು ನವೀನ್‌ ಕುಮಾರ್‌ ಗ್ರಾಮದ ಯಜಮಾನರೊಂದಿಗೆ ತೆರಳಿದ್ದಾರೆ. ಆದರೆ ಮಗಳನ್ನು ಕಳುಹಿಸಲು ಅತ್ತೆ ಹಿಂದೇಟು ಹಾಕಿದ್ದಾರೆ. ಜೊತೆಗೆ ಮಕ್ಕಳನ್ನು ನೋಡಲು ಸಹ ನವೀನ್‌ಗೆ ಬಿಡದೆ ಸತ್ತರೆ ಸಾಯಿ ಎಂದು ಬೈದು ಕಳುಹಿಸಿದ್ದಾರೆ.

ಇದಾದ ಬಳಿಕ ನವೀನ್‌ ಕೋರ್ಟ್‌ನಲ್ಲಿ ಜನ್ನಾಜಮ್ಮ ವಿಚ್ಛೇಧನ ಅರ್ಜಿ ಸಲ್ಲಿಸಿದ್ದರು. ಮಕ್ಕಳನ್ನು ಮಾತನಾಡಿಸುವಾಗ ಪತ್ನಿ ಜನ್ನಾಜಮ್ಮ ಮತ್ತು ಅತ್ತೆ ಮುನಿಯಮ್ಮ ಸಾರ್ವಜನಿಕವಾಗಿ ನಿಂದಿಸಿ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

‘ಕೋರ್ಟ್‌ನಲ್ಲಿ ಅವಮಾನವಾಗಿದೆ ಎಂದು ಮನೆಗೆ ಬಂದ ನವೀನ್‌ ಹೇಳುತ್ತಿದ್ದ. ಅತ್ತೆ ಹಾಗೂ ಪತ್ನಿಯ ಮಾತಿನಿಂದಲೇ ನನ್ನ ಮಗ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ದೂರಿನಲ್ಲಿ ಮೃತನ ತಾಯಿ ಆರೋಪಿಸಿದ್ದಾರೆ.

--------------10ಜಿಪಿಟಿ4ನವೀನ್‌ ಕುಮಾರ್‌

------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಹನೀಯರ ಜಯಂತಿಗೆ ದೇಣಿಗೆ ನೀಡುವೆ ಎಂದು ಶಿವಲಿಂಗೇಗೌಡ