ಸ್ಮಶಾನಕ್ಕೆ ಹೋಗುವ ದಾರಿಗೆ ಬೇಲಿ: ತೆರವು

KannadaprabhaNewsNetwork |  
Published : Feb 05, 2024, 01:47 AM IST
೨ ಟಿವಿಕೆ ೨ - ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕುರುಬರಹಳ್ಳಿ ಬ್ಯಾಲಾದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿದ್ದ ಸ್ಮಶಾನ ಜಾಗವನ್ನು ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ತೆರವು ಮಾಡಿಸಿದರು. | Kannada Prabha

ಸಾರಾಂಶ

ತಾಲೂಕಿನ ದಂಡಿನಶಿವರ ಹೋಬಳಿಯ ಕುರುಬರಹಳ್ಳಿ ಬ್ಯಾಲಾದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿದ್ದ ಸ್ಮಶಾನಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ಬೇಲಿ ಹಾಕಿ ತೊಂದರೆಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದಂಡಿನಶಿವರ ಹೋಬಳಿಯ ಕುರುಬರಹಳ್ಳಿ ಬ್ಯಾಲಾದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿದ್ದ ಸ್ಮಶಾನಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ಬೇಲಿ ಹಾಕಿ ತೊಂದರೆಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.

ಕುರುಬರಹಳ್ಳಿ ಬ್ಯಾಲಾ ಗ್ರಾಮದ ಸರ್ವೆ ನಂಬರ್ ೧೧ ರಲ್ಲಿ ೧ ಎಕರೆ ೧೦ ಗುಂಟೆ ಭೂಮಿಯನ್ನು ಎಲ್ಲ ಸಮುದಾಯದವರ ಶವಸಂಸ್ಕಾರಕ್ಕಾಗಿ ಭೂಮಿಯನ್ನು ಮೀಸಲಿಡಲಾಗಿತ್ತು. ಈ ಸ್ಮಶಾನಕ್ಕೆ ಹೋಗುವ ಜಾಗವನ್ನು ಗ್ರಾಮದವರು ಬಹಳ ವರ್ಷಗಳಿಂದ ಬಳಸುತ್ತಿದ್ದರು. ಇತ್ತೀಚೆಗೆ ಅದೇ ಗ್ರಾಮದ ವ್ಯಕ್ತಿಯೋರ್ವ ಈ ಜಮೀನು ತಮಗೆ ಸೇರಿದ್ದು ಎಂದು ಜಾಗವನ್ನು ಅತಿಕ್ರಮಿಸಿ ಬೇಲಿ ಹಾಕಿಕೊಂಡಿದ್ದ. ಇದರಿಂದ ಗ್ರಾಮಸ್ಥರು ಸ್ಮಶಾನಕ್ಕೆ ತೆರಳಲು ತೊಂದರೆಯಾಗಿತ್ತು.

ಈತ ಮಾಡಿದ ಕ್ರಮದ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೆ ಅವರ ವಿರುದ್ದ ಪೋಲಿಸ್ ಕೇಸ್ ಮಾಡಿಸುವ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ತಹಸೀಲ್ದಾರ್‌ರಿಗೆ ದೂರು ನೀಡಿದ್ದರು. ಅಧಿಕಾರಿಗಳು ಬಂದು ತೆರವು ಮಾಡಿಸಿ ಹೋದ ಕೆಲ ದಿನಗಳ ನಂತರ ಮತ್ತೆ ಬೇಲಿ ಹಾಕಿಕೊಂಡು ಸ್ಮಶಾನಕ್ಕೆ ಹೋಗಲು ತೊಂದರೆ ಕೊಡುತ್ತಿದ್ದ ಎಂದು ಹೇಳಲಾಗಿದೆ.

ಗ್ರಾಮದಲ್ಲಿ ಪ್ರೇಮ್‌ ಕುಮಾರ್‌ ಎಂಬುವವರ ತಾಯಿ ನಿಧನರಾದ ಕಾರಣ ಶವಸಂಸ್ಕಾರ ಮಾಡಲು ಹೋದಾಗ ಸ್ಮಶಾನಕ್ಕೆ ಹೋಗುವ ದಾರಿಯನ್ನು ಅತಿಕ್ರಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಾಗ ಬಿಡಿಸಿ ಕೊಡುವಂತೆ ಗ್ರಾಮದ ಪ್ರಮುಖರು ತಹಸೀಲ್ದಾರ್‌ ಅವರಿಗೆ ದೂರು ಸಲ್ಲಿಸಿದ್ದರು.

ಸ್ಥಳಕ್ಕೆ ಬಂದ ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್‌ ಒತ್ತುವರಿ ಮಾಡಿರುವ ಜಾಗವನ್ನು ಪರಿಶೀಲಿಸಿ ದಾರಿಗೆ ಹಾಕಿದ್ದ ಬೇಲಿಯನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು. ತಾವು ಇಲ್ಲಿಂದ ತೆರಳಿದ ನಂತರ ಪುನಃ ಆತ ರಸ್ತೆಯನ್ನು ಬಿಡದೇ ಬೇಲಿ ಹಾಕಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಾನೆಂದು ಗ್ರಾಮಸ್ಥರು ತಹಸೀಲ್ದಾರ್‌ಗೆ ದೂರಿದರು.

ಇದಕ್ಕೆ ಸ್ಪಂದಿಸಿದ ರೇಣುಕುಮಾರ್‌ ಅಅವರು ಸ್ಮಶಾನಕ್ಕೆ ತೆರಳುವ ಜಾಗವನ್ನು ಮುಚ್ಚಿ ತೊಂದರೆ ಮಾಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಒತ್ತುವರಿದಾರರಿಗೆ ಎಚ್ಚರಿಸಿದರು.

ಕಂದಾಯ ನಿರೀಕ್ಷಕರಾದ ಶಿವಕುಮಾರ ಸ್ವಾಮಿ, ದಂಡಿನಶಿವರ ಪಿ.ಎಸ್.ಐ ರಾಮಚಂದ್ರಯ್ಯ, ಗ್ರಾಮ ಲೆಕ್ಕಾಧಿಕಾರಿ ಪೂರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಇದ್ದರು.ಫೋಟೊ

ತಾಲೂಕಿನ ದಂಡಿನಶಿವರ ಹೋಬಳಿಯ ಕುರುಬರಹಳ್ಳಿ ಬ್ಯಾಲಾದಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟಿದ್ದ ಸ್ಮಶಾನ ಜಾಗವನ್ನು ತಹಸೀಲ್ದಾರ್‌ ವೈ.ಎಂ. ರೇಣುಕುಮಾರ್‌ ತೆರವು ಮಾಡಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ