ಬೆಳಕಿನ ಹಬ್ಬ: ಲಕ್ಷ್ಮೀಪೂಜೆ, ಬಲಿಪಾಡ್ಯಮಿಗೆ ಎಲ್ಲೆಡೆ ಸಂಭ್ರಮ

KannadaprabhaNewsNetwork |  
Published : Nov 10, 2026, 02:15 AM IST
ಕ್ಯಾಪ್ಷನ9ಕೆಡಿವಿಜಿ34 ದಾವಣಗೆರೆಯಲ್ಲಿ ದೀಪಾವಳಿ ಬಲಿಪಾಡ್ಯಮಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.......... ಕ್ಯಾಪ್ಷನ9ಕೆಡಿವಿಜಿ35 ದಾವಣಗೆರೆಯಲ್ಲಿ ದೀಪಾವಳಿ ಹಬ್ಬಕ್ಕೆ ಮಾರುಕಟ್ಟೆ ಕಂಡು ಬಂದ ದೃಶ್ಯ.......ಕ್ಯಾಪ್ಷನ9ಕೆಡಿವಿಜಿ36, 37 ದಾವಣಗೆರೆಯಲ್ಲಿ ದೀಪಾವಳಿ ಲಕ್ಷ್ಮಿ ಪೂಜೆಗೆ ಕಮಲ, ಇತರೆ ಹೂ ಖರೀದಿಸುತ್ತಿರುವ ಗ್ರಾಹಕರು. | Kannada Prabha

ಸಾರಾಂಶ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ತನ್ನದೇ ಆದ ವೈಶಿಷ್ಟ್ಯದ ಮೂಲಕ ಶ್ರೇಷ್ಠ ಸ್ಥಾನ ಪಡೆದುಕೊಂಡಿದೆ. ಇದೇ ಕಾರಣಗಳಿಂದ ಮಂಗಳವಾರ ಬಲಿಪಾಡ್ಯಮಿ ಆಚರಿಸಲು ಜಿಲ್ಲಾದ್ಯಂತ ಜನತೆ ಸಿದ್ಧತೆ ನಡೆಸಿದರು.

- ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿ, ಬಾಳೆಕಂದು, ಹೂವು-ಹಣ್ಣು ಖರೀದಿ ಭರಾಟೆ ಜೋರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ತನ್ನದೇ ಆದ ವೈಶಿಷ್ಟ್ಯದ ಮೂಲಕ ಶ್ರೇಷ್ಠ ಸ್ಥಾನ ಪಡೆದುಕೊಂಡಿದೆ. ಇದೇ ಕಾರಣಗಳಿಂದ ಮಂಗಳವಾರ ಬಲಿಪಾಡ್ಯಮಿ ಆಚರಿಸಲು ಜಿಲ್ಲಾದ್ಯಂತ ಜನತೆ ಸಿದ್ಧತೆ ನಡೆಸಿದರು.

ದೀಪಾವಳಿ ಬಲಿಪಾಡ್ಯಮಿ ಶ್ರದ್ಧಾ-ಭಕ್ತಿಯ ಆಚರಣೆಗೆ ದಾವಣಗೆರೆ ಸಜ್ಜಾಗಿದ್ದು, ಮಾರುಕಟ್ಟೆಗಳು ಜನಜಂಗುಳಿಯಿಂದ ಬಿಜಿಯಾಗಿದ್ದವು. ಗಣಪತಿ, ದಸರಾ ಹಬ್ಬಗಳ ನಂತರ ಬರುವ ದೀಪಾವಳಿ ಹಬ್ಬಕ್ಕಾಗಿ ಮಕ್ಕಳು ಕಾಯುತ್ತಿರುತ್ತಾರೆ. ಪಟಾಕಿ ಹೊಡೆಯಲು ಅವರಲ್ಲಿ ಸಂಭ್ರಮವೋ ಸಂಭ್ರಮ. ಇದಕ್ಕೆ ಪೂರಕವಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಬಗೆಬಗೆಯ ಸದ್ದುಗಳ ಪಟಾಕಿಗಳೂ ಬಂದಿರುವುದು ವಿಶೇಷ. ಹಬ್ಬಕ್ಕಾಗಿ ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು.

ಭಾನುವಾರವೇ ಅಮವಾಸ್ಯೆ ಬಂದ ಕಾರಣ ಕೆಲವು ಅಂಗಡಿ, ಮುಂಗಟ್ಟುಗಳಲ್ಲಿ ಭಾನುವಾರ ಸಂಜೆಯೇ ಲಕ್ಷ್ಮೀ ಪೂಜೆ ಮಾಡಿದರು. ಇನ್ನು ಕೆಲವರು ಸೋಮವಾರ ಮಧ್ಯಾಹ್ನ ಅಮವಾಸ್ಯೆ ಮುಗಿದುಹೋಗುತ್ತದೆ ಎಂದು ಸೋಮವಾರ ಬೆಳಗ್ಗೆಯೇ ಪೂಜೆ ಮಾಡಿದರು. ಇನ್ನು ಅಂಗಡಿಗಳಲ್ಲಿ ಮನೆಯ ತಾಯಂದಿರು, ಹೆಣ್ಣುಮಕ್ಕಳು ಲಕ್ಷ್ಮೀಪೂಜೆ ಸಲ್ಲಿಸಿ ಬಂದಂತಹ ಮುತ್ತೈದೆಯರು, ಹಿರಿಯರಿಗೆ ಫಲ-ತಾಂಬೂಲ ನೀಡಿ ಆಶೀರ್ವಾದ ಪಡೆದರು.

ಹಣಕ್ಕೆ ಅಧಿದೇವತೆಯಾದ ಲಕ್ಷ್ಮೀಪೂಜೆ ಮಾಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಈ ವಿಶೇಷ ಪೂಜೆ ಹಿನ್ನೆಲೆಯೂ ಮಾರುಕಟ್ಟೆಯಲ್ಲಿ ಪಟಾಕಿ, ಹೂವು, ಹಣ್ಣು, ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿ, ಜನಜಂಗುಳಿ ಹೆಚ್ಚಾಗಿತ್ತು.

ಹಣ್ಣು, ಹೂವು ಬೆಲೆಗಳ ಏರಿಕೆ ಕಂಡಿವೆ. ಉತ್ತಮ ಗುಣಮಟ್ಟದ ಸೇವಂತಿಗೆ ಹೂವು ಹೋಲ್‌ಸೇಲ್ 1 ಮಾರಿಗೆ ₹100, ಕನಕಾಂಬರಿ ₹100, ಕಾಕಡಾ ಮಲ್ಲಿಗೆ ₹200, ದುಂಡು ಮಲ್ಲಿಗೆ ₹200, ಚಂಡು ಹೂ ₹50-₹80, ಸೂಜಿ ಮಲ್ಲಿಗೆ ₹150 ಹಾಗೂ ಕೆಂಪು ಗುಲಾಬಿ 1 ಕೆಜಿಗೆ ₹300, ಮಿಕ್ಸ್ ಹೂವುಗಳು ₹400 ಗಳಿದ್ದವು. ತುಳಸಿ, ಬಿಲ್ವಪತ್ರೆ ಬೆಲೆಗಳಲ್ಲೂ ಕೂಡ ಏರಿಕೆ ಕಂಡುಬಂದಿತು.

1 ಕೆಜಿಗೆ ಸೇಬು ₹150, ದಾಳಿಂಬೆ ₹200, ಕಿತ್ತಳೆ, ಸಪೋಟ, ಪೇರಲ, ಮೋಸಂಬಿ ₹100, ದ್ರಾಕ್ಷಿ ₹200, ಪಚ್ಚಬಾಳೆಹಣ್ಣು ₹40, ಏಲಕ್ಕಿ ಬಾಳೆ ₹100-₹120, ಎಲ್ಲ ರೀತಿಯ ಬಿಡಿ ಹೂ ಕೆ.ಜಿ.ಗೆ ₹400, ಕಾಚಿಕಡ್ಡಿ 1ಕ್ಕೆ ₹10ನಂತೆ ಮಾರಾಟವಾಗುತ್ತಿತ್ತು. ಮಿಕ್ಸ್ ಹಣ್ಣುಗಳು 1 ಕೆಜಿಗೆ ₹150ರಿಂದ ₹200 ಗಳವರೆಗೆ ಇತ್ತು. ಬಾಳೆಕಂಬ ಜೋಡಿಗೆ ಚಿಕ್ಕದು ₹20ರಿಂದ ₹50, ದೊಡ್ಡವಾದರೆ ₹100ರಿಂದ ₹150 ವರೆಗೆ ಇತ್ತು. ಸಿಹಿ ತಿನಿಸುಗಳ ಖರೀರಿಯೂ ಜೋರಾಗಿತ್ತು.

ಹಬ್ಬಕ್ಕೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಂದಾಗಿದ್ದರು. ದೀಪಾವಳಿ ಪೂಜೆಗೆ ಬೇಕಾಗುವ ಕಾಚಿ ಕಡ್ಡಿ, ದಂಟು, ಬ್ರಹ್ಮದಂಡೆ, ತಾವರಕೆ ಹೂಗಳು, ಮಾವಿನ ಎಲೆ ಸೇರಿದಂತೆ ಎಲ್ಲವೂ ಮಾರುಕಟ್ಟೆಯಲ್ಲಿ ಇಡಲಾಗಿತ್ತು.

14 ವರ್ಷಗಳ ವನವಾಸದಿಂದ ರಾವಣನ ಮೇಲೆ ವಿಜಯ ಸಾಧಿಸಿದ ನಂತರ ವಿಷ್ಣುವಿನ ಅವತಾರವಾದ ಭಗವಾನ್ ರಾಮನ ಮರಳುವಿಕೆಯನ್ನು ಗುರುತಿಸಲು ದೀಪಾವಳಿಯ ಹಿಂದೂ ಹಬ್ಬ ಎಂದು ಆಚರಿಸಲಾಗುತ್ತದೆ. ವಿಜಯದ ಸಂಕೇತವಾದ ದೀಪಾವಳಿಯನ್ನು ಹರುಷದಿಂದಲೇ ಬರಮಾಡಿಕೊಂಡಿರುವ ದೇವನಗರಿಯ ಜನತೆ ಸಂಭ್ರಮದಿಂದ ದೀಪಾವಳಿಯ ಬಲಿಪಾಡ್ಯಮಿ ಹಬ್ಬ ಆಚರಣೆಗೆ ಸಿದ್ಧಗೊಂಡಿದೆ.

- - -

-9ಕೆಡಿವಿಜಿ34: ದಾವಣಗೆರೆಯಲ್ಲಿ ದೀಪಾವಳಿ ಬಲಿಪಾಡ್ಯಮಿ ಆಚರಣೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.

-9ಕೆಡಿವಿಜಿ35: ದಾವಣಗೆರೆಯಲ್ಲಿ ದೀಪಾವಳಿ ಹಬ್ಬ ಕಾರಣದಿಂದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿತು.

-9ಕೆಡಿವಿಜಿ36, 37: ದಾವಣಗೆರೆಯಲ್ಲಿ ದೀಪಾವಳಿ ಲಕ್ಷ್ಮೀ ಪೂಜೆಗೆ ಗ್ರಾಹಕರು ತಾವರೆ ಮತ್ತಿತರ ಹೂಗಳನ್ನು ಖರೀದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ