ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಭಕ್ತರಿಂದ ತಯಾರಿಸಿದ ರೊಟ್ಟಿಯ ಪ್ರಸಾದವನ್ನು ಭಕ್ತರಿಗೆ ವಿತರಿಸುವುದರ ಮೂಲಕ ರೊಟ್ಟಿ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಡಂಬಳ: ಗ್ರಾಮದ ತೋಂಟದ ಮದರ್ಧನಾರೀಶ್ವರ 286ನೇ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಾಯಂಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ಲಘು ರಥೋತ್ಸವ ನೆರವೇರಿತು.
ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ರಥಬೀದಿಯಲ್ಲಿ ಸಾಗುತ್ತಿದ್ದಂತೆ ನೆರೆದ ಭಕ್ತಸಮೂಹ ಉತ್ತತ್ತಿ, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು.
ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ಭಕ್ತರಿಂದ ತಯಾರಿಸಿದ ರೊಟ್ಟಿಯ ಪ್ರಸಾದವನ್ನು ಭಕ್ತರಿಗೆ ವಿತರಿಸುವುದರ ಮೂಲಕ ರೊಟ್ಟಿ ಜಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಜಾತಿ, ಮತ, ಧರ್ಮ, ಪಂಥ ಭೇದವಿಲ್ಲದೇ ಮಾತ್ರವಲ್ಲದೇ ಸುತ್ತಲಿನ ವಿವಿಧ ಗ್ರಾಮಗಳ ಸರ್ವಜನಾಂಗದವರು ರೊಟ್ಟಿ ತಯಾರಿಸಿ ಮಠಕ್ಕೆ ಕೊಡುತ್ತಾರೆ. ಅದು ಪ್ರಸಾದವಾಗಿ ಎಲ್ಲರೂ ಸೇವಿಸುವುದೇ ರೊಟ್ಟಿ ಜಾತ್ರೆ ವಿಶೇಷ ಎಂದರು.
ರೊಟ್ಟಿ ಪ್ರಸಾದವನ್ನು ಕೋಮು ಸೌಹಾರ್ದತೆಯಿಂದ ಒಂದೇ ಪಂಕ್ತಿಯಲ್ಲಿ ಸರ್ವಜನಾಂಗದ ಜನರು ಕುಳಿತು ಸವಿಯುತ್ತಾರೆ. ಸಹಸ್ರಾರು ಮಹಿಳೆಯರು ಲಕ್ಷಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸಿ ನೀಡಿದ್ದಾರೆ. ಅದಕ್ಕೆ ಕರಿಹಿಂಡಿ, ಬಾನ ಸೇರಿದಂತೆ ತರಹೇವಾರಿ ತರಕಾರಿ ಪಲ್ಯಗಳನ್ನು ತಯಾರಿಸಿ ಉಣಬಡಿಸುವ ಶ್ರೇಷ್ಠ ಕಾರ್ಯ ಇಲ್ಲಿ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಜಾತ್ರಾ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು. ಸಂಸದರ ಕ್ರೀಡಾ ಮಹೋತ್ಸವ
ಗದಗ: ಸಂಸದ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತಪಡಿಸುವ ಸಂಸದರ ಕ್ರೀಡಾ ಮಹೋತ್ಸವ 2025- 26ನ್ನು ಗ್ರಾಮೀಣ ಪ್ರದೇಶದ ಯುವ ಜನತೆಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟಿಸಲಾಗುತ್ತದೆ.ಸಂಸದರ ಕ್ರೀಡಾ ಮಹೋತ್ಗವವನ್ನು ತಾಲೂಕು ಮಟ್ಟದಲ್ಲಿ ಗದಗ ಜಿಲ್ಲೆಯ 7 ತಾಲೂಕುಗಳಲ್ಲಿ ಆಯೋಜಿಸಲಾಗುತ್ತಿದ್ದು, ಗದಗ ತಾಲೂಕಿನಲ್ಲಿ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ರೋಣ ತಾಲೂಕಿನಲ್ಲಿ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣ, ಶಿರಹಟ್ಟಿ ತಾಲೂಕಿನಲ್ಲಿ ಎಫ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣ, ಮುಂಡರಗಿ ತಾಲೂಕಿನಲ್ಲಿ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣ, ನರಗುಂದ ತಾಲೂಕಿನಲ್ಲಿ ತಾಲೂಕು ಕ್ರೀಡಾಂಗಣ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಉಮಾ ಮಹಾವಿದ್ಯಾಲಯದ ಮೈದಾನ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ಎಸ್.ಎಂ. ಭೂಮರಡ್ಡಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ bommai.basavaraj@sansad.nic.inJsmDVhcQvJ https://sansadkhelmahotsav.in ಲಿಂಕ್ ಮುಖಾಂತರ ಫೆ. 10ರೊಳಗಾಗಿ ಹೆಸರನ್ನು ನೋಂದಾಯಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.