ಮನುಷ್ಯನ ಕ್ರಿಯಾಶೀಲತೆ ಕುಗ್ಗಿಸುವ ಎಐ: ಪ್ರಮೋದ ನಾಯ್ಕ

KannadaprabhaNewsNetwork |  
Published : Feb 05, 2026, 02:45 AM IST
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್,ಖರ್ವಾ ವಿಎಸ್ ಎಸ್ ಮುಖ್ಯಕಾರ್ಯನಿರ್ವಾಹಕ ಮೋಹನ ನಾಯ್ಕ,ಉದ್ಯಮಿ ಖಲೀಲ್ ಶೇಖ್,ನಿವೃತ್ತ ಬಿಎಸ್ ಎನ್ ಎಲ್ ನೌಕರ ಟಿ.ಎಚ್ ಗೌಡ,ಶಿಕ್ಷಣಪ್ರೇಮಿ ತಬ್ರೇಜ್ ಕುತುಬುದ್ದಿನ್ ಹಾಗಲವಾಡಿ ಹಾಗೂ ಅತಿಥಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ಖರ್ವಾ ನಾಥಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 102ನೇ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.

ಖರ್ವಾ ನಾಥಗೇರಿ ಸರ್ಕಾರಿ ಶಾಲೆಯ 102ನೇ ವಾರ್ಷಿಕ ಸ್ನೇಹ ಸಮ್ಮೇಳನ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಖರ್ವಾ ನಾಥಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 102ನೇ ವಾರ್ಷಿಕ ಸ್ನೇಹ ಸಮ್ಮೇಳನ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ ಮಾತನಾಡಿ, ಈ ಶಾಲೆ ಜಿಲ್ಲೆಗೆ ಮಾದರಿ ಶಾಲೆಯಾಗಿದೆ ಎಂದರು.

ಚಿಣ್ಣರ ಚಿತ್ತಾರ ಹಸ್ತಪತ್ರಿಕೆ ಬಿಡುಗಡೆಗೊಳಿಸಿದ ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ ಮಾತನಾಡಿ, ಇಂದು ಎಐ, ಚಾಟ್ ಜಿಪಿಟಿಯಂತಹ ಕೃತಕಬುದ್ದಿಮತ್ತೆಗಳು ಮನುಷ್ಯನ ಕ್ರಿಯಾಶೀಲತೆ ಕುಗ್ಗಿಸುತ್ತಿವೆ. ಅಂತರ್ಜಾಲದಲ್ಲಿ ಸಿಗುವ ಜ್ಞಾನಕ್ಕಿಂತ ಶಾಲೆಯಲ್ಲಿ ಗುರುಗಳಿಂದ ಸಿಗುವ ಜ್ಞಾನ ಜೀವನ ಮೌಲ್ಯ ತಿಳಿಸಿಕೊಡುತ್ತದೆ ಎಂದರು.

ತಾಪಂ ಮಾಜಿ ಸದಸ್ಯ ಲೊಕೇಶ ನಾಯ್ಕ ಮಾತನಾಡಿದರು.

ಖರ್ವಾ ವಿಎಸ್ ಎಸ್ ಮುಖ್ಯಕಾರ್ಯನಿರ್ವಾಹಕ ಮೋಹನ ನಾಯ್ಕ, ಉದ್ಯಮಿ ಖಲೀಲ್ ಶೇಖ್, ನಿವೃತ್ತ ಬಿಎಸ್ ಎನ್ ಎಲ್ ನೌಕರ ಟಿ.ಎಚ್. ಗೌಡ, ಶಿಕ್ಷಣಪ್ರೇಮಿ ತಬ್ರೇಜ್ ಕುತುಬುದ್ದಿನ್ ಹಾಗಲವಾಡಿ ಹಾಗೂ ಅತಿಥಿ ಶಿಕ್ಷಕರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಶ್ರೀಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

‌ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಹಳ್ಳೇರ, ಸದಸ್ಯ ಜುಬೇರ್ ಸಾಬ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷೆ ನಾಗವೇಣಿ ನಾಯ್ಕ, ಸಿಆರ್ ಪಿ ಮನು ಹೆಗಡೆ, ಸಿದ್ದಿವಿನಾಯಕ ಪ್ರೌಢಶಾಲಾ ಮುಖ್ಯಾಧ್ಯಾಪಕ ಎಸ್. ಎಲ್‌. ನಾಯ್ಕ, ಜೀವ ವಿಮಾ ಪ್ರತಿನಿಧಿ ಎಂ.ಪಿ. ಭಟ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಹೆಗಡೆ, ನಿವೃತ್ತ ಶಿಕ್ಷಕ ಸತ್ಯಪ್ಪ, ನವೋದಯ ಯುವಕ ಸಂಘದ ಅಧ್ಯಕ್ಷ ಪ್ರಕಾಶ ನಾಯ್ಕ, ವಿದ್ಯುತ್ ಗುತ್ತಿಗೆದಾರ ಎಸ್.ಕೆ. ಶೆಟ್ಟಿ ಉಪಸ್ಥಿತರಿದ್ದರು.

ಶಾಲಾ ಮುಖ್ಯಾಧ್ಯಾಪಕ ಶೇಖರ ನಾಯ್ಕ ಸ್ವಾಗತಿಸಿ, ವಂದಿಸಿದರು. ಆರ್.ಬಿ. ಶೆಟ್ಟಿ ನಿರ್ವಹಿಸಿದರು. ನಂತರ ಅಂಗನವಾಡಿ ಹಾಗೂ ಶಾಲಾ‌ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ