ರೈತರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ: ರೈತ ಸಂಘ

KannadaprabhaNewsNetwork |  
Published : Oct 28, 2024, 01:17 AM ISTUpdated : Oct 28, 2024, 01:18 AM IST
27ಕೆಡಿವಿಜಿ3-ದಾವಣಗೆರೆಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ, ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಚಿತ್ರದುರ್ಗದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸಮಿತಿ ರಚಿಸಿದೆ. ಸಂಘಟನೆಯ ಮೂಲ ಸಿದ್ಧಾಂತಕ್ಕೆ ಚ್ಯುತಿ ಆಗದಂತೆ ತಾತ್ವಿಕ ಚಿಂತನೆಯುಳ್ಳ ಪ್ರಾಮಾಣಿಕ ಹೋರಾಟಗಾರರ ಪಡೆ ರಚನೆಗೊಂಡಿದೆ ಎಂದು ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದ್ದಾರೆ.

-ಮಲೆನಾಡ ರೈತ ಕುುಟಂಬಗಳಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ-ಕುಲಾಂತರಿ ಬೀಜಕ್ಕೆ ರಾಜ್ಯದಲ್ಲಿ ಸರ್ಕಾರ ಅನುಮತಿ ನೀಡಬಾರದು

- - - ದಾವಣಗೆರೆ: ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಚಿತ್ರದುರ್ಗದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸಮಿತಿ ರಚಿಸಿದೆ. ಸಂಘಟನೆಯ ಮೂಲ ಸಿದ್ಧಾಂತಕ್ಕೆ ಚ್ಯುತಿ ಆಗದಂತೆ ತಾತ್ವಿಕ ಚಿಂತನೆಯುಳ್ಳ ಪ್ರಾಮಾಣಿಕ ಹೋರಾಟಗಾರರ ಪಡೆ ರಚನೆಗೊಂಡಿದೆ ಎಂದು ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಸಮರ್ಥ ಹೋರಾಟ ನಡೆಸಲು ಯುವ ಪಡೆಗೂ ಹೆಚ್ಚು ಗಮನ ನೀಡಿ, ಸಂಘಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಮಾಡಲಾಗಿದೆ ಎಂದರು.

ರಾಜ್ಯದ 192 ತಾಲೂಕುಗಳಲ್ಲಿ ಕಳೆದ ವರ್ಷ ತೀವ್ರ ಬರ ಆವರಿಸಿತ್ತು. ಆಗ ರಾಜ್ಯ ಸರ್ಕಾರ ಸಮರ್ಪಕವಾಗಿ ಪರಿಹಾರ ಕಾರ್ಯ ಕೈಗೊಳ್ಳಲಿಲ್ಲ, ರೈತರಿಗೆ ಪರಿಹಾರವನ್ನೂ ನೀಡಲಿಲ್ಲ. ಈಗ ಅತಿವೃಷ್ಟಯಿಂದ ಆಗಿರುವ ಬೆಳೆಗಳ ಹಾನಿ ಪರಿಹಾರ ನೀಡಲು ವಿಳಂಬ ಮಾಡಬಾರದು ಎಂದರು.

ಸಂಘದ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ಕುಲಾಂತರಿ ಬೀಜಗಳಿಗೆ ಸರ್ಕಾರ ಅನುಮತಿ ನೀಡಬಾರದು. ಭೂ ಸುದಾರಣೆ ಕಾಯ್ದೆ ಸರ್ಕಾರ ರದ್ದುಪಡಿಸಬೇಕು. ವಿದ್ಯುತ್ ನೀತಿ ಜಾರಿಗೆ ತರಬಾರದು. ಯಾವುದೇ ರೀತಿಯ ಪುನರ್ವಸತಿ ಹಾಗೂ ಪರ್ಯಾಯ ಭೂಮಿ ಸಾಗುವಳಿ ಹಕ್ಕುಪತ್ರ ನೀಡಿಲ್ಲ. ಅಂತಹ ರೈತರ ನೆರವಿಗೆ ಸರ್ಕಾರ ಧಾವಿಸಲಿ ಎಂದ ಅವರು, ಈಗಿನ ಅರಣ್ಯ ಮಂತ್ರಿ ಈಶ್ವರ ಖಂಡ್ರೆ ಅರಣ್ಯ ಇಲಾಖೆಯಿಂದ ರೈತರನ್ನು ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಸಂಘದ ಮುಖಂಡರಾದ ಅರುಣಕುಮಾರ ಕುರುಡಿ, ಶಿವಾನಂದ ಕುಗ್ವೆ, ಬುಳ್ಳಾಪುರ ಹನುಮಂತಪ್ಪ ಇತರರು ಇದ್ದರು.

- - -

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!