- 29 ಸಾವಿರ ಹಳ್ಳಿಯಲ್ಲೂ ದಲಿತರು ಹೋರಾಟಕ್ಕೆ ಸಜ್ಜು: ಚಿತ್ರದುರ್ಗ ಸಂಸದ ಹೇಳಿಕೆ - ದಲಿತರ ಉದ್ಧಾರವಾದರೆ ಓಟು ಬ್ಯಾಂಕ್ ಇಲ್ಲವೆಂಬುದೇ ಕಾಂಗ್ರೆಸ್ಸಿನ ಲೆಕ್ಕಾಚಾರ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಲಿತರ ಉದ್ಧಾರವೇ ಆಗಬಾರದೆಂಬ ಕೆಟ್ಟ ಮನಸ್ಥಿತಿಯು ಕಾಂಗ್ರೆಸ್ಸಿನಲ್ಲಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ, ಮಾಡು ಇಲ್ಲವೇ, ಮಡಿ ಹೋರಾಟ ಆಗಿಯೇ ಆಗುತ್ತದೆ. ಕುಂಟುನೆಪ, ಕೋರ್ಟ್ ನೆಪ ಹೇಳುವುದು ಸರಿಯಲ್ಲ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಗುಟುರು ಹಾಕಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನಾ ಒಪ್ಪಂದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲೇಬೇಕು. ಇದು ಸರ್ಕಾರದ ಆದ್ಯ ಕರ್ತವ್ಯ, ಜವಾಬ್ದಾರಿ. ದಲಿತರ ಉದ್ಧಾರವಾದರೆ ಓಟು ಬ್ಯಾಂಕ್ ಇಲ್ಲವೆಂಬುದೇ ಕಾಂಗ್ರೆಸ್ಸಿನ ಲೆಕ್ಕಾಚಾರ. ದಲಿತರು ಅಲ್ಲೇ ಕೊಳತೆ ತೊಳೆಯುತ್ತಾ ಇರಬೇಕೆಂಬುದು ಕಾಂಗ್ರೆಸ್ಸಿನ ನೀಚ ಪ್ರವೃತ್ತಿಯಾಗಿದೆ. ಶೇ.15ರಷ್ಟು ಮೀಸಲಾತಿ ನೀಡುವುದಾದರೆ ಸದಾಶಿವ ಆಯೋಗದ ವರದಿ ಪ್ರಕಾರ ಮೀಸಲಾತಿ ಜಾರಿ ಮಾಡಿ ಎಂದು ಹೇಳಿದರು.
ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರಾದ ಆಲೂರು ನಿಂಗರಾಜ, ಡಾ.ಎಚ್.ವಿಶ್ವನಾಥ, ಎಂ.ಹಾಲೇಶ, ಕಡತಿ ಅಂಜಿನಪ್ಪ, ಸಿ.ಬಸವರಾಜ, ಜಿಗಳಿ ಹಾಲೇಶ, ಶಿರಮಗೊಂಡನಹಳ್ಳಿ ಶಶಿಕುಮಾರ, ನರಗನಹಳ್ಳಿ ಮೈಲಾರಿ, ಶಾಮನೂರು ರಾಜು, ಹರೀಶ ಹೊನ್ನೂರು, ಕೆಟಿಜೆ ನಗರ ಆನಂದ, ಶಿವಕುಮಾರ ತುಳಸಿ, ಚಿಕ್ಕನಹಳ್ಳಿ ನಿಂಗಪ್ಪ, ಮಲ್ಲೇಶ, ಪ್ರಶಾಂತ ಇದ್ದರು.
(ಬಾಕ್ಸ್)
- ಯಾರಿಗೋ ಕುಮ್ಮಕ್ಕು ಕೊಟ್ಟು ಕೋರ್ಟ್‌ಗೆ ಕಳಿಸಿದ ಸಿದ್ದರಾಮಯ್ಯ: ಆರೋಪ ದಾವಣಗೆರೆ: ದಲಿತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದ್ದು, ಒಳ ಮೀಸಲಾತಿ ಹೋರಾಟಗಾರರನ್ನು ಸ್ವತಃ ಸರ್ಕಾರವೇ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.
ಒಳ ಮೀಸಲಾತಿಗಾಗಿ 2016ರಲ್ಲಿ ಹುಬ್ಬಳ್ಳಿಯಲ್ಲಿ ಮಾದಿಗ ಸಮುದಾಯದ ಹೋರಾಟಕ್ಕೆ ಬರುತ್ತಿದ್ದ 8 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ಮೃತರ ಕುಟುಂಬಗಳಿಗೆ ಜಮೀನು ಕೊಡುತ್ತೇವೆ, ಪರಿಹಾರ ನೀಡುತ್ತೇವೆಂದು ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದರೂ, ಮೃತರ ಕುಟುಂಬಗಳ ಕಡೆ ಮತ್ತೆ ತಿರುಗಿಯೂ ನೋಡಲಿಲ್ಲ ಎಂದು ದೂರಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನ್ಯಾ.ನಾಗಮೋಹನ ದಾಸ್ ಆಯೋಗ ವರದಿ ನೀಡಿತ್ತು. ಅದನ್ನು ಒಪ್ಪಿ, ಮೀಸಲಾತಿ ಹೆಚ್ಚಿಸುವ ಮೂಲಕ ಎರಡೂ ಸದನಗಳಲ್ಲಿ ನಾವು ಒಪ್ಪಿಗೆ ಪಡೆದಿದ್ದೆವು. 2022ರಿಂದಲೇ ನಾವು ಅದನ್ನು ಜಾರಿಗೊಳಿಸಿದ್ದೆವು. ಆದರೆ, ಇದೇ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡಲು ಯಾರು ಯಾರಿಗೋ ಕುಮ್ಮಕ್ಕು ಕೊಟ್ಟು, ಕೋರ್ಟ್‌ಗಳಿಗೆ ಕಳಿಸಿದರು. ಕೋರ್ಟ್‌ಗೆ ಅಡ್ವೋಕೇಟ್ ಜನರಲ್, ಸರ್ಕಾರದ ಪರ ಯಾವುದೇ ವಕೀಲರೂ ಎಂದು ಆರೋಪಿಸಿದರು.
- - -
(ಫೋಟೋ: ಗೋವಿಂದ ಕಾರಜೋಳ)