ಮನೆ ಹಾನಿ ಮಾಲೀಕರಿಗೆ ಆರ್ಥಿಕ ನೆರವು

KannadaprabhaNewsNetwork |  
Published : May 25, 2026, 01:15 AM IST
24ಕೆಆರ್ ಎಂಎನ್ 2.ಜೆಪಿಜಿಬಿಡದಿ ಪುರಸಭಾ ವ್ಯಾಪ್ತಿಯ 5ನೇ ವಾರ್ಡಿನ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿಹೋಗಿ ನಷ್ಟಕ್ಕೆ ಸಿಲುಕಿದ್ದ ರೈತ ಮಹದೇವಯ್ಯ, ಉಮೇಶ್ ಮತ್ತು ಶಿವಣ್ಣ ಅವರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಸದಸ್ಯೆ ಲಲಿತಾನರಸಿಂಹಯ್ಯ ಪರಿಹಾರ ವಿತರಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಪುರಸಭಾ ವ್ಯಾಪ್ತಿಯ 5ನೇ ವಾರ್ಡಿನ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿಹೋಗಿ ನಷ್ಟಕ್ಕೆ ಸಿಲುಕಿದ್ದ ರೈತ ಮಹದೇವಯ್ಯ, ಉಮೇಶ್ ಮತ್ತು ಶಿವಣ್ಣ ಅವರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಸದಸ್ಯೆ ಲಲಿತಾನರಸಿಂಹಯ್ಯ ಅವರು ವೈಯಕ್ತಿಕವಾಗಿ 25 ಸಾವಿರ ರು. ಪರಿಹಾರ ವಿತರಣೆ ಮಾಡಿದರು

ರಾಮನಗರ: ಬಿಡದಿ ಪುರಸಭಾ ವ್ಯಾಪ್ತಿಯ 5ನೇ ವಾರ್ಡಿನ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿಹೋಗಿ ನಷ್ಟಕ್ಕೆ ಸಿಲುಕಿದ್ದ ರೈತ ಮಹದೇವಯ್ಯ, ಉಮೇಶ್ ಮತ್ತು ಶಿವಣ್ಣ ಅವರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಸದಸ್ಯೆ ಲಲಿತಾನರಸಿಂಹಯ್ಯ ಅವರು ವೈಯಕ್ತಿಕವಾಗಿ 25 ಸಾವಿರ ರು. ಪರಿಹಾರ ವಿತರಣೆ ಮಾಡಿದರು.ಈ ವೇಳೆ ಸದಸ್ಯೆ ಲಲಿತಾನರಸಿಂಹಯ್ಯ ಮಾತನಾಡಿ, ಇತ್ತೀಚೆಗೆ ಆರಂಭವಾದ ಮುಂಗಾರು‌ ಮಳೆ ಆರಂಭದಲ್ಲಿ ರಭಸವಾದ ಬಿರುಗಾಳಿಗೆ ಸಿಲುಕಿ ಮೂವರ ಮನೆಗಳ ಚಾವಣಿ ಸಂಪೂರ್ಣವಾಗಿ ಹಾರಿಹೋಗಿದ್ದವು. ತಡರಾತ್ರಿ ಬಿದ್ದ ಮಳೆಯಿಂದ ​ಮನೆಯೊಳಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆ, ಟಿವಿ ಸೇರಿದಂತೆ ವಿದ್ಯುನ್ಮಾನ ಉಪಕರಣಗಳು ಹಾಗೂ ಮಕ್ಕಳ ಶಾಲಾ ಪುಸ್ತಕಗಳು ಹಾನಿಗೊಂಡಿದ್ದವು. ಇದರಿಂದ ಬಡ ಕುಟುಂಬಗಳು ದಿಕ್ಕು ತೋಚದಂತಾಗಿತ್ತು. ಹಾಗಾಗಿ ನಾನು ಮತ್ತು ಅಧ್ಯಕ್ಷರು ಸೇರಿ ಹಾನಿಗೊಳಗಾದ ಮಹದೇವಯ್ಯ ಅವರಿಗೆ 10 ಸಾವಿರ, ಉಮೇಶ್ ಗೆ 10 ಸಾವಿರ ಹಾಗೂ ಶಿವಣ್ಣ ಅವರಿಗೆ 5 ಸಾವಿರ ನೆರವು ನೀಡಿದ್ದಾಗಿ ಹೇಳಿದರು.

ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಬಂದು ಹಾನಿಗೊಳಗಾದ ಮನೆಗಳನ್ನು ವೀಕ್ಷಣೆ ಮಾಡಿದ್ದು, ಪರಿಹಾರಕ್ಕೆ ವರದಿ ನೀಡಲಿದ್ದು, ಪುರಸಭಾ ವತಿಯಿಂದ ಸಹ ನೆರವು ನೀಡಲಾಗುವುದು ಎಂದರು.

ಪರಿಹಾರ ವಿತರಣೆ ವೇಳೆ ಪುರಸಭೆ ಸದಸ್ಯ ರಾಕೇಶ್, ಮುಖಂಡರಾದ ಇಟ್ಟಮಡು ಪುಟ್ಟಪ್ಪ, ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ ಸಂಪತ್ತು, ಮಹದೇವಯ್ಯ, ಜಯಲಕ್ಷ್ಮಮ್ಮ, ಉಮೇಶ್, ಶಿವಣ್ಣ ಮತ್ತಿತರರು ಹಾಜರಿದ್ದರು.

24ಕೆಆರ್ ಎಂಎನ್ 2.ಜೆಪಿಜಿ

ಬಿಡದಿ ಪುರಸಭಾ ವ್ಯಾಪ್ತಿಯ 5ನೇ ವಾರ್ಡಿನ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿಹೋಗಿ ನಷ್ಟಕ್ಕೆ ಸಿಲುಕಿದ್ದ ರೈತರಿಗೆ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಮತ್ತು ಸದಸ್ಯೆ ಲಲಿತಾನರಸಿಂಹಯ್ಯ ಪರಿಹಾರ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ರೂಪಿಸಿಲ್ಲ
ಅಭಿವೃದ್ಧಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು